ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಒಂದೇ ನಗರ.. ಒಂದೇ ದಿನ.. ಹೆಣವಾಗಿದ್ದು 242 ಜನ!

|
Google Oneindia Kannada News

ಬೀಜಿಂಗ್, ಫೆಬ್ರವರಿ.13: ಹುಬೈ.. ಚೀನಾದ ಇದೊಂದು ನಗರಕ್ಕೆ ಕೊರೊನಾ ವೈರಸ್ ಮಹಾಮಾರಿಯಾಗಿ ಕಾಡುತ್ತಿದೆ. ದಿನೇ ದಿನೆ ಇದೊಂದೇ ನಗರದಲ್ಲಿ ಸಾವಿರ ಸಾವಿರ ಮಂದಿಗೆ ಮಾರಕ ಸೋಂಕು ತಗಲುತ್ತಿದೆ. ಕಳೆದ 24 ಗಂಟೆಗಳಲ್ಲಿ ಹುಬೈ ನಗರದಲ್ಲೇ 242ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಇದಷ್ಟೇ ಅಲ್ಲ, ಹುಬೈ ನಗರ ಒಂದರಲ್ಲೇ ಕಳೆದ 24 ಗಂಟೆಗಳಲ್ಲಿ 15,152ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ವರದಿಯಾಗಿದೆ. ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಸೋಂಕು ಹುಬೈ ನಗರದಲ್ಲಿ ಅಟ್ಟಹಾಸ ಮೆರೆಯುತ್ತಿದೆ.

ಭಾರತಕ್ಕೆ ಕೊರಾನಾ ವೈರಸ್ ಹೊತ್ತು ತಂದ ಬ್ಯಾಂಕಾಕ್ ಬಳಗ ಭಾರತಕ್ಕೆ ಕೊರಾನಾ ವೈರಸ್ ಹೊತ್ತು ತಂದ ಬ್ಯಾಂಕಾಕ್ ಬಳಗ

ಫೆಬ್ರವರಿ.12ರ ಅಂಕಿ-ಅಂಶಗಳ ಪ್ರಕಾರ ಕಳೆದ ಎರಡು ತಿಂಗಳಿನಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಗೆ 1,367ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರೆ, 59,804 ಜನರಿಗೆ ಮಾರಕ ಸೋಂಕು ತಗಲಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಎರಡು ನಗರಗಳಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು

ಈ ಎರಡು ನಗರಗಳಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು

ಕೊರೊನಾ ವೈರಸ್ ಸೋಂಕಿತರು ಚೀನಾದ ಈ ಎರಡು ನಗರಗಳಲ್ಲೇ ಅತಿಹೆಚ್ಚು ಎನ್ನಲಾಗಿದೆ. ವಿಶ್ವದಲ್ಲಿ 100 ಮಂದಿ ಸೋಂಕಿತರಿದ್ದರೆ ಅದರಲ್ಲಿ ಶೇ.80ರಷ್ಟು ಸೋಂಕಿತರು ವುಹಾನ್ ಮತ್ತು ಹುಬೈ ನಗರದಲ್ಲೇ ಇದ್ದಾರೆ ಎಂದು ತಿಳಿದು ಬಂದಿದೆ. ವುಹಾನ್ ಮತ್ತು ಹುಬೈ ನಗರಗಳಲ್ಲೇ 45,000ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವ ಬಗ್ಗೆ ವರದಿಯಾಗಿದೆ.

ವಿಶ್ವದ ಶೇ.99 ರಾಷ್ಟ್ರಗಳಿಂದ ಚೀನಾಗಿಲ್ಲ ಪ್ರವಾಸ

ವಿಶ್ವದ ಶೇ.99 ರಾಷ್ಟ್ರಗಳಿಂದ ಚೀನಾಗಿಲ್ಲ ಪ್ರವಾಸ

ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಮೊದಲಿಗೆ ಹುಟ್ಟಿಕೊಂಡಿದ್ದೇ ಚೀನಾದ ವುಹಾನ್ ನಗರದಲ್ಲಿ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಶೇ.99ರಷ್ಟು ರಾಷ್ಟ್ರಗಳಿಂದ ಚೀನಾಗೆ ಸಂಚಾರವನ್ನು ಕಡಿತಗೊಳಿಸಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಚೀನಾದ ನಗರಗಳಿಗೆ ಸಂಚರಿಸುತ್ತಿದ್ದ ವಿಮಾನಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.

ಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯ

ಜಪಾನ್ ಹಡಗಿನಲ್ಲಿರುವ 218 ಮಂದಿಗೆ ಕೊರೊನಾ ವೈರಸ್

ಜಪಾನ್ ಹಡಗಿನಲ್ಲಿರುವ 218 ಮಂದಿಗೆ ಕೊರೊನಾ ವೈರಸ್

ಜಪಾನ್ ನ ಟೋಕಿಯೋ ಬಳಿ ಯೊಕೊಹಮಾ ಬಂದರಿನಲ್ಲಿರುವ ಹಡಗಿನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಗೆ ತಪಾಸಣೆ ಮುಂದುವರಿಸಲಾಗಿದೆ. ಗುರುವಾರ ಹಡಗಿನಲ್ಲೇ 44 ಮಂದಿಗೆ ಮಾರಕ ಸೋಂಕು ತಗಲಿರುವ ಬಗ್ಗೆ ತಿಳಿದು ಬಂದಿದೆ. ಇದರಿಂದ 3700 ಪ್ರಯಾಣಿಕರ ಪೈಕಿ 218 ಮಂದಿಗೆ ಸೋಂಕು ತಗಲಿರುವ ಬಗ್ಗೆ ತಪಾಸಣೆ ವೇಳೆ ಸ್ಪಷ್ಟವಾಗಿದೆ ಎಂದು ಸರ್ಕಾರವು ತಿಳಿಸಿದೆ.

ಜಪಾನ್ ನಲ್ಲಿ ಕೊರೊನಾ ವೈರಸ್ ಗೆ ಮೊದಲ ಬಲಿ

ಜಪಾನ್ ನಲ್ಲಿ ಕೊರೊನಾ ವೈರಸ್ ಗೆ ಮೊದಲ ಬಲಿ

ಜಪಾನ್ ನಲ್ಲಿ ಮಾರಕ ರೋಗ ಕೊರೊನಾ ವೈರಸ್ ಗೆ 80 ವರ್ಷದ ಮಹಿಳೆಯು ಪ್ರಾಣ ಬಿಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಸ್ಪಷ್ಟಪಡಿಸಿದೆ. ಚೀನಾವನ್ನು ಹೊರತುಪಡಿಸಿ ಹೊರ ರಾಷ್ಟ್ರದಲ್ಲಿ ವೈರಸ್ ಗೆ ಪ್ರಾಣ ಬಿಟ್ಟ ಎರಡನೇ ರಾಷ್ಟ್ರ ಜಪಾನ್ ಆಗಿದೆ. ಈ ಮೊದಲು ಸಿಂಗಾಪುರ್ ನಲ್ಲಿ ಇದೇ ಮಾರಕ ಸೋಂಕಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದನು.

ಚೀನಾ ಹೊರತಾದ ರಾಷ್ಟ್ರಗಳಲ್ಲಿ 400 ಕೇಸ್

ಚೀನಾ ಹೊರತಾದ ರಾಷ್ಟ್ರಗಳಲ್ಲಿ 400 ಕೇಸ್

ಇನ್ನು, ಚೀನಾ ಒಂದರಲ್ಲೇ ಸುಮಾರು 60 ಸಾವಿರ ಕೊರೊನಾ ವೈರಸ್ ಸೋಂಕಿತರ ಬಗ್ಗೆ ವರದಿಯಾಗಿದ್ದು, ಇದನ್ನು ಹೊರತುಪಡಿಸಿದ ಹೊರ ರಾಷ್ಟ್ರಗಳಲ್ಲೂ ಕೊವಿಡ್-19 ಅಟ್ಟಹಾಸ ಮುಂದುವರಿದಿದೆ. ಫೆಬ್ರವರಿ.12ರ ಒಂದೇ ದಿನ ಹೊರರಾಷ್ಟ್ರಗಳಲ್ಲಿ 400 ಹೊಸ ಪ್ರಕರಣಗಳು ಪತ್ತೆಯಾಗಿವೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ 15 ಕೊವಿಡ್-19 ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

English summary
Coronavirus: A Single Day 242 Peoples Death From Covid-19 In Hubei City. In China Death Rate Toll To 1,367, 59,804 Infected Cases Found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X