ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಬಂದೆರಗಿದೆ 'ಕೊರೋನಾವೈರಸ್': ಭಾರತಕ್ಕೂ ಆತಂಕ

|
Google Oneindia Kannada News

ಬೀಜಿಂಗ್, ಜನವರಿ 16: ಸಾರ್ಸ್‌ ವೈರಸ್ ನಂತರ ಅದಕ್ಕಿಂತಲೂ ಭೀಕರ ವೈರಸ್ ಚೀನಾದಲ್ಲಿ ಪತ್ತೆ ಆಗಿದ್ದು, ಇದು ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ವ್ಯಾಪಿಸುವ ಭೀತಿ ಶುರುವಾಗಿದೆ.

'ಕೊರೋನಾವೈರಸ್' ಚೀನಾದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಹಲವು ಮಂದಿ ಈ ವೈರಸ್‌ಗೆ ತುತ್ತಾಗಿದ್ದಾರೆ. ಥಾಯ್ಲೆಂಡ್‌ನಲ್ಲಿ ಈ ವೈರಸ್ ಗೆ ಒಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಆತಂಕ ವೈದ್ಯರನ್ನು ಕಾಡುತ್ತಿದೆ.

ಜಯದೇವ ಹೃದ್ರೋಗ ತಜ್ಞ ಮಂಜುನಾಥ್ ಬಿಚ್ಚಿಟ್ಟ ಆಘಾತಕಾರಿ ಆರೋಗ್ಯ ಮಾಹಿತಿಜಯದೇವ ಹೃದ್ರೋಗ ತಜ್ಞ ಮಂಜುನಾಥ್ ಬಿಚ್ಚಿಟ್ಟ ಆಘಾತಕಾರಿ ಆರೋಗ್ಯ ಮಾಹಿತಿ

ಈ ಮೊದಲು ಪ್ರಾಣಿಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ಈ ವೈರಸ್ ಮೊದಲ ಬಾರಿಗೆ ಮನುಷ್ಯರಿಗೆ ಕಾಣಿಸಿಕೊಂಡಿದೆ. ಮಧ್ಯ ಚೀನಾ, ಥಾಯ್ ಭಾಗಗಳಲ್ಲಿ ವ್ಯಾಪಕವಾಗಿ 'ಕೊರೋನಾವೈರಸ್' ಹರಡಿದೆ.

Coronaviraus Found In China, India May Also Affected

ವಿಶ್ವ ಆರೋಗ್ಯ ಸಂಸ್ಥೆ ಸಹ 'ಕೊರೋನಾವೈರಸ್' ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಹಲವು ದೇಶಗಳಿಗೆ ಹರಡುವ ಸಾಧ್ಯತೆಯಿದೆ ಎಂದಿದೆ. ಅಲ್ಲದೆ ವೈದ್ಯರುಗಳಿಗೆ ಎಚ್ಚರದಿಂದಿರಲು ಸೂಚನೆಗಳನ್ನು ನೀಡಿದೆ. ಭಾರತಕ್ಕೂ ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ರವಾನಿಸಿದೆ.

'ಕೊರೋನಾವೈರಸ್' ಬಂದವರಿಗೆ ಮೊದಲಿಗೆ ಸಾಮಾನ್ಯ ನೆಗಡಿ ಬರುತ್ತದೆ. ನಂತರ ಸುಸ್ತು ಹೆಚ್ಚಾಗಿ ಹಾಸಿಗೆ ಹಿಡುಯುವತಾಗುತ್ತದೆ. ಪೂರ್ಣ ದೇಹದ ಆರೋಗ್ಯವೇ ಹದಗೆಟ್ಟು ಬಿಡುತ್ತದೆ.

ಮಧುಮೇಹಕ್ಕೆ ನೀಡುವ ಈ ಮಾತ್ರೆಯಲ್ಲಿ ಪ್ಲಾಸ್ಟಿಕ್: ಇಲಾಖೆ ಹೇಳೋದೇನು?ಮಧುಮೇಹಕ್ಕೆ ನೀಡುವ ಈ ಮಾತ್ರೆಯಲ್ಲಿ ಪ್ಲಾಸ್ಟಿಕ್: ಇಲಾಖೆ ಹೇಳೋದೇನು?

ವೈರಸ್ ಆರಂಭಿಕ ಹಂತದಲ್ಲಿರುವ ಕಾರಣ ಚಿಕಿತ್ಸೆಯ ಕ್ರಮಗಳು ಗೊತ್ತಿಲ್ಲ. ನಿಮೋನಿಯಾ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ ಎಂದು ಚೀನಾ ವೈದ್ಯರುಗಳು ತಿಳಿಸಿದ್ದಾರೆ.

ರೋಗವು ವೇಗವಾಗಿ ಹರಡುವ ಗುಣ ಹೊಂದಿದ್ದು, ಈಗಾಗಲೇ ಜಪಾನ್‌ ನಲ್ಲಿ ಒಂದು ಪ್ರಕರಣ ಪತ್ತೆ ಆಗಿದೆ. ಈ ರೋಗ ಭಾರತಕ್ಕೂ ಹರಡುವ ಸಾಧ್ಯತೆ ಇದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

English summary
Deadly Corona virus found in China, several people affected by the virus which was earlier found only in animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X