ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಸಮುದ್ರಕ್ಕೆ 'ಕೊರೊನಾ' ಕಾವಲು: ಮೀನು, ಏಡಿಗಳಿಗೂ ಪರೀಕ್ಷೆ

|
Google Oneindia Kannada News

ಬೀಜಿಂಗ್, ಆಗಸ್ಟ್ 19: ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳು ಭಯಾನಕ ರೀತಿಯಲ್ಲಿ ಹೆಚ್ಚಾಗತೊಡಗಿವೆ. ಸಮುದ್ರದಿಂದ ಬರುವ ಮೀನು ಮತ್ತು ಏಡಿಗಳಿಂದಾಗಿ ಈ ಬಾರಿ ಕೋವಿಡ್ ಹರಡುತ್ತಿದೆ ಎಂದು ಕ್ಸಿ ಜಿನ್‌ಪಿಂಗ್ ಸರ್ಕಾರ ಶಂಕಿಸಿದೆ. ಹೀಗಾಗಿ ಮೀನುಗಾರರು ಮಾತ್ರವಲ್ಲ, ಮೀನು ಮತ್ತು ಏಡಿಗಳಿಗೂ ಕೊರೊನಾ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ. ಕೋವಿಡ್ ಪರೀಕ್ಷೆಯಿಲ್ಲದೆ ಒಂದೇ ಒಂದು ಮೀನು ಅಥವಾ ಇತರ ಸಮುದ್ರಾಹಾರವನ್ನು ದೇಶಕ್ಕೆ ಪ್ರವೇಶಿಸಬಾರದು ಎಂದು ಸರ್ಕಾರದ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸದ್ಯ ಮೀನುಗಳು ಮತ್ತು ಏಡಿಗಳಿಗೆ ನಡೆಸುತ್ತಿರುವ ಕೊರೊನಾ ಪರೀಕ್ಷೆಯ ವಿಡಿಯೋ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ.

ಚೀನಾದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗಲು ಪ್ರಾರಂಭಿಸಿದ್ದು ಚೀನಾದ ಮೀನು ಮತ್ತು ಏಡಿಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ನವೆಂಬರ್-ಡಿಸೆಂಬರ್ 2019 ರಿಂದ ಚೀನಾದಲ್ಲಿ ಕೋವಿಡ್ ಪ್ರಾರಂಭವಾಯಿತು ಮತ್ತು ಅಲ್ಲಿಂದ ಪ್ರಪಂಚದಾದ್ಯಂತ ವಿನಾಶವನ್ನು ಸೃಷ್ಟಿಸಿತು. ಬಳಿಕ ಚೀನಾದಲ್ಲಿ ಕೊರೊನಾ ಕಡಿಮೆಯಾಯಿತಾದರೂ ಸದ್ಯ ಮತ್ತೆ ಆರಂಭವಾಗಿದೆ. ಈ ಬಾರಿಯ ಪರಿಸ್ಥಿತಿ ಹೇಗಿದೆಯೆಂದರೆ, ಈಗ ಅಲ್ಲಿನ ಸರ್ಕಾರ ಸಮುದ್ರದಿಂದ ಬರುವ ಎಲ್ಲಾ ಮೀನು ಮತ್ತು ಏಡಿಗಳ ಕೋವಿಡ್ ಪರೀಕ್ಷೆಗೆ ಆದೇಶ ಹೊರಡಿಸಿದೆ ಎಂದು ಸೌತ್-ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಮೀನು ಮತ್ತು ಏಡಿಗಳಿಗೂ ಕೊರೊನಾ ಪರೀಕ್ಷೆ

ಮೀನು ಮತ್ತು ಏಡಿಗಳಿಗೂ ಕೊರೊನಾ ಪರೀಕ್ಷೆ

ಚೀನಾದಲ್ಲಿ ದೊಡ್ಡ ಪ್ರಮಾಣದ ವ್ಯಾಕ್ಸಿನೇಷನ್ ಮಾಡಲಾಗಿದೆ. ಆದರೆ, ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅದು ಅಂತಹ ಅನಿರೀಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಬಿಬಿಸಿ ಪ್ರಕಾರ, ಚೀನಾದ ಕ್ಸಿಯಾಮೆನ್‌ನಲ್ಲಿನ 5 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಪರೀಕ್ಷೆಗೆ ಒಳಗಾಗಲು ಸೂಚಿಸಲಾಗಿದೆ. ಆದರೆ, ಮನುಷ್ಯರ ಜೊತೆಗೆ ಸಮುದ್ರ ಮೀನು ಮತ್ತು ಏಡಿಗಳಿಗೂ ಕೊರೊನಾ ಪರೀಕ್ಷೆ ಮಾಡುತ್ತಿರುವುದನ್ನು ಕೇಳಿದ ಜನರು ದಿಗ್ಭ್ರಮೆಗೊಂಡಿದ್ದಾರೆ.

ಚರ್ಚೆಗೆ ಗ್ರಾಸವಾದ ವಿಡಿಯೋ

ಚರ್ಚೆಗೆ ಗ್ರಾಸವಾದ ವಿಡಿಯೋ

ಸೌತ್-ಚೀನಾ ಮಾರ್ನಿಂಗ್ ಪೋಸ್ಟ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್ ವೈರಸ್ ಸೋಂಕಿಗೆ ಒಳಗಾಗಿರುವ ಶಂಕಿತ ಸಮುದ್ರಾಹಾರಿಗಳಾದ ಮೀನು, ಏಡಿಗಳ ಮಾದರಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರು ಸಂಪೂರ್ಣವಾಗಿ ಪಿಪಿಇ ಕಿಟ್‌ಗಳಲ್ಲಿದ್ದಾರೆ ಮತ್ತು ಮನುಷ್ಯರಂತೆಯೇ ಮೀನುಗಳ ಬಾಯಿಯಿಂದ ಸ್ವ್ಯಾಬ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಏಡಿಗಳ ಚಿಪ್ಪುಗಳ ಮೇಲಿನಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ವಿಡಿಯೋ ಚೀನಾದಾದ್ಯಂತ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮೀನುಗಾರರು ಮತ್ತು ಸಮುದ್ರಾಹಾರ ಇಬ್ಬರಿಗೂ ಪರೀಕ್ಷೆ

ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ತನ್ನ ವಿಡಿಯೊದಲ್ಲಿ ಜಿಮೆಯ್ ಮ್ಯಾರಿಟೈಮ್ ಪ್ಯಾಂಡೆಮಿಕ್ ಕಂಟ್ರೋಲ್ ಕಮಿಟಿ, 'ಸಾಂಕ್ರಾಮಿಕ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಸಮುದ್ರಕ್ಕೆ ಹೋಗುವ ಎಲ್ಲಾ ಕಾರ್ಮಿಕರಿಗೆ ದೋಣಿಯಲ್ಲಿ ಹೋಗುವ ಮೊದಲು ಲಸಿಕೆ ಹಾಕಬೇಕು. ಮೀನುಗಾರರು ಸಮುದ್ರದಲ್ಲಿದ್ದಾಗ, ದಿನಕ್ಕೆ ಒಮ್ಮೆಯಾದರೂ ಪರೀಕ್ಷಿಸಿ. ಅವರು ಸಮುದ್ರದಿಂದ ಹಿಂತಿರುಗಿದಾಗ, ಮೀನುಗಾರರು ಮತ್ತು ಸಮುದ್ರಾಹಾರ ಎರಡನ್ನೂ ಪರಿಶೀಲಿಸಬೇಕು ಎಂಬ ನಿಯಮವನ್ನಿ ಚೀನಾದಲ್ಲಿ ಮಾಡಲಾಗಿದೆ' ಎಂದಿದೆ.

ಸಮುದ್ರ ಉತ್ಪನ್ನಗಳ ವಿನಿಮಯ ಮೂಲಕ ಕೊರೊನಾ

ಸಮುದ್ರ ಉತ್ಪನ್ನಗಳ ವಿನಿಮಯ ಮೂಲಕ ಕೊರೊನಾ

ಕ್ಸಿಯಾಮೆನ್ ಮುನ್ಸಿಪಲ್ ಓಷಿಯಾನಿಕ್ ಡೆವಲಪ್‌ಮೆಂಟ್ ಬ್ಯೂರೋ ಪ್ರಕಾರ, ಇದು ಏಕಾಏಕಿ ತುಂಬಾ ತೀವ್ರವಾಗಿದೆ. ಹೈನಾನ್‌ನಿಂದ ಇದು ಹೆಚ್ಚಾಗಿದೆ. ಇದು ಸ್ಥಳೀಯ ಮೀನುಗಾರರು ಮತ್ತು ಅವರ ವಿದೇಶಿ ಸಹವರ್ತಿಗಳ ನಡುವೆ ಸಮುದ್ರ ಉತ್ಪನ್ನಗಳ ವಿನಿಮಯದ ಮೂಲಕ ಹರಡಿತು ಎಂದು ಹೇಳಲಾಗುತ್ತದೆ. 'ದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ತನ್ನ ಶೀರ್ಷಿಕೆಯಲ್ಲಿ, 'ಸಾಂಕ್ರಾಮಿಕ ಆರೋಗ್ಯ ಕಾರ್ಯಕರ್ತರು ಲೈವ್ ಸೀಫುಡ್ ಪಿಸಿಆರ್ ಪರೀಕ್ಷೆಗಳನ್ನು ನೀಡುವ ವೀಡಿಯೊಗಳು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ' ಎಂದು ಬರೆದಿದ್ದಾರೆ.

Recommended Video

UAE ನಲ್ಲಿ ಅನುಭವವಿಲ್ಲದ ಭಾರತ ಪಾಕಿಸ್ತಾನದ‌ ಮುಂದೆ ಸೋಲೋದು‌ ಗ್ಯಾರೆಂಟಿ ಅಂತೆ!! | Oneindia Kannada

English summary
Twitter showed health workers testing seafood such as fish and crabs for the Covid-19 virus. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X