ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ರಾಜಕುಮಾರ ಚಾರ್ಲ್ಸ್ ಗೆ ಕೊರೊನಾ ಪಾಸಿಟಿವ್

|
Google Oneindia Kannada News

ಲಂಡನ್, ಮಾರ್ಚ್ 25: ಬ್ರಿಟನ್ ನ ರಾಜಕುಮಾರ ಚಾರ್ಲ್ಸ್ ಗೆ ಬುಧವಾರ ಕೊರೊನಾ ಪರೀಕ್ಷೆ ಪಾಸಿಟಿವ್ ಬಂದಿದೆ ಎಂದು ಅವರ ಕಚೇರಿ ಖಚಿತ ಪಡಿಸಿದೆ. 71 ವರ್ಷದ ಚಾರ್ಲ್ಸ್ ಅವರು ರಾಣಿ ಎಲಿಜಬೆತ್ II ಹಿರಿಯ ಮಗ ಮತ್ತು ಉತ್ತರಾಧಿಕಾರಿಯೂ ಹೌದು. "ಅಲ್ಪ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳಿವೆ ಮತ್ತು ಅವರ ಆರೋಗ್ಯ ಉತ್ತಮವಾಗಿದೆ" ಎಂದು ಮಾಹಿತಿ ನೀಡಲಾಗಿದೆ.

20 ಕೋಟಿಗೂ ಹೆಚ್ಚು ಮಂದಿ ಬಲಿ ಪಡೆದಿತ್ತು 'ದ ಬ್ಲ್ಯಾಕ್ ಡೆತ್'20 ಕೋಟಿಗೂ ಹೆಚ್ಚು ಮಂದಿ ಬಲಿ ಪಡೆದಿತ್ತು 'ದ ಬ್ಲ್ಯಾಕ್ ಡೆತ್'

ಚಾರ್ಲ್ಸ್ ರ ಪತ್ನಿ, 72 ವರ್ಷದ ಕ್ಯಾಮಿಲಾರಿಗೆ ವೈರಾಣು ಪರೀಕ್ಷೆಯು ನೆಗೆಟಿವ್ ಬಂದಿದೆ. ಈ ದಂಪತಿ ಸ್ಕಾಟ್ಲೆಂಡ್ ನಲ್ಲಿ ಸ್ವಯಂ ದಿಗ್ಬಂಧನದಲ್ಲಿ ಇದ್ದಾರೆ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ. "ಈ ಪರೀಕ್ಷೆಯನ್ನು ನ್ಯಾಷನಲ್ ಹೆಲ್ತ್ ಸರ್ವೀಸ್ ನಿಂದ ಅಬೆರ್ದೀನ್ ಶೈರ್ ನಲ್ಲಿ ಮಾಡಲಾಗಿದೆ. ಪರೀಕ್ಷೆಗೆ ಅಗತ್ಯ ಇರುವ ಮಾನದಂಡಗಳನ್ನು ಅವರು ಅಲ್ಲಿ ಪೂರೈಸಿದ್ದಾರೆ" ಎಂದು ವರದಿ ತಿಳಿಸಿದೆ.

Corona Positive To Britain Prince Charles

ಚೀನಾದ ವುಹಾನ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಾಣು, ವಿಶ್ವದಾದ್ಯಂತ ನಾನಾ ದೇಶಗಳಲ್ಲಿ ಹರಡಿದೆ. ಕೊರೊನಾ ವಿರುದ್ಧ ಹೋರಾಡುವ ದೃಷ್ಟಿಯಿಂದ ಭಾರತದಲ್ಲಿ ಮಾರ್ಚ್ 25ರಿಂದ ಅನ್ವಯ ಆಗುವಂತೆ 15 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಬಂಧವನ್ನು ಘೋಷಣೆ ಮಾಡಿದ್ದಾರೆ.

English summary
Britain prince, 71 year old Charles Corona test positive. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X