ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕವಾಗಿ ಕೊರೊನಾ ಸೋಂಕಿತರು, ಸಾವಿನ ಸಂಖ್ಯೆ ದಿನದಿನಕ್ಕೂ ಏರಿಕೆ

|
Google Oneindia Kannada News

ಕೊರೊನಾದಿಂದ ಮೃತಪಟ್ಟವರು ಹಾಗೂ ಸೋಂಕಿತರ ಸಂಖ್ಯೆ ಬಗ್ಗೆ ಮಾಹಿತಿ ಇಲ್ಲಿದೆ. ಈ ಸಂಖ್ಯೆಯನ್ನು ನೀಡುತ್ತಿರುವುದು, ಕೊರೊನಾದ ಗಂಭೀರತೆಯನ್ನು ತಿಳಿಯಬೇಕು ಅಂತಲೇ ಹೊರತು ಹೆದರಿಸುವುದಕ್ಕಲ್ಲ. ಹಾಗಿದ್ದರೆ ಯಾವ ದೇಶದಲ್ಲಿ ಏನು ಸ್ಥಿತಿ ಇದೆ ಎಂಬುದರ ವಿವರ ಇಲ್ಲಿದೆ.

ಸ್ಪೇನ್
ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 769 ಸಾವಿನ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಒಟ್ಟಾರೆಯಾಗಿ ಸಾವಿನ ಸಂಖ್ಯೆ 4858 ತಲುಪಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕೊರೊನಾ ಪಾಸಿಟಿವ್ ಆದವರ ಸಂಖ್ಯೆ 64,059.

ಇರಾನ್
ಕೊರೊನಾ ವೈರಸ್ ನಿಂದ ಹೊಸದಾಗಿ 144 ಸಾವಿನ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 2378 ತಲುಪಿದೆ. ದೇಶದಾದ್ಯಂತ ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 2926 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಒಟ್ಟಾರೆಯಾಗಿ ಖಾತ್ರಿಯಾದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕನಿಷ್ಠ 32,332 ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 11,133 ಮಂದಿ ಚೇತರಿಸಿಕೊಂಡಿದ್ದಾರೆ.

Corona Infected And Death Cases Increased Globally

ಕುವೈತ್
ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 17 ಹೊಸ ಪ್ರಕರಣಗಳು ಖಾತ್ರಿಯಾಗಿವೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 225 ಮುಟ್ಟಿದೆ.

ಹಾಂಕಾಂಗ್
ಹಾಂಕಾಂಗ್ ನಲ್ಲಿ 65 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ ಕಾಣಿಸಿಕೊಂಡ ಅತಿ ದೊಡ್ಡ ಸಂಖ್ಯೆ ಇದು. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 518 ಆಗಿದೆ.

ರಷ್ಯಾ
196 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಅಧಿಕೃತವಾಗಿ ಸಂಖ್ಯೆ 1036ಕ್ಕೆ ಮುಟ್ಟಿದೆ. ಕಳೆದ 24 ಗಂಟೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.

English summary
Corona infected and deceased people increasing day by day globally. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X