ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ರಾಜಧಾನಿ ಬೀಜಿಂಗ್ ಮೃಗಾಲಯ ಮತ್ತೆ ಆರಂಭ

|
Google Oneindia Kannada News

ಬೀಜಿಂಗ್, ಮಾರ್ಚ್ 24: ಚೀನಾದ ರಾಜಧಾನಿ ಬೀಜಿಂಗ್ ನಲ್ಲಿನ ಮೃಗಾಲಯ ಸೋಮವಾರದಿಂದ ಮತ್ತೆ ಆರಂಭವಾಗಿದೆ. ಕೊರೊನಾ ವೈರಾಣು ಹಬ್ಬುವುದನ್ನು ತಡೆಯುವ ದೃಷ್ಟಿಯಿಂದ ಜನವರಿ 24ರಿಂದ ಈ ಮೃಗಾಲಯ ಮುಚ್ಚಲಾಗಿತ್ತು. ಐದು ಸಾವಿರ ಪ್ರಾಣಿಗಳಿಗೆ ಉತ್ತಮವಾದ ಆಹಾರ ಒದಗಿಸಲಾಗುತ್ತಿದೆ. ಇಡೀ ಮೃಗಾಲಯವನ್ನು ಸ್ವಚ್ಛವಾಗಿ ಇರಿಸಲಾಗಿದೆ.

ಈ ಮೃಗಾಲಯದ ಡೆಪ್ಯೂಟಿ ಡೈರೆಕ್ಟರ್ ಜಾಂಗ್ ಚೆಂಗ್ಲಿನ್ ಮಾತನಾಡಿ, ಪಾಂಡಾದಂಥ ಪ್ರಾಣಿಗಳಿಗೆ ಮೃಗಾಲಯವನ್ನು ಮುಚ್ಚಿದಂಥ ಸಂದರ್ಭದಲ್ಲಿ ಹೆಚ್ಚಿನ ವ್ಯಾಯಾಮ ಬೇಕಾಗುತ್ತದೆ ಎಂದಿದ್ದಾರೆ. ಇನ್ನು ಪಶುವೈದ್ಯರು ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅದರಲ್ಲೂ ಗರ್ಭ ಧರಿಸಿರುವ ಮಲಯನ್ ಟಾಪಿರ್ ಬಗ್ಗೆ ಎಲ್ಲರ ಲಕ್ಷ್ಯ ಇದೆ.

ಮಾ ಟಾವೋ ಎಂಬ ಮೃಗಾಲಯದ ನೌಕರ ದಿನ ಬೆಳಗ್ಗೆ ಏಳು ಗಂಟೆಗೆ ತಮ್ಮ ಕೆಲಸ ಶುರು ಮಾಡುತ್ತಾರೆ. ಪ್ರಾಣಿಗಳಿಗೆ ಎರಡು ಸಾವಿರ ಕೇಜಿಯಷ್ಟು ಆಹಾರವನ್ನು ಸಿದ್ಧಪಡಿಸುತ್ತಾರೆ. ಅದರಲ್ಲಿ ಕ್ಯಾರೆಟ್, ತಾಜಾ ಸೌತೇಕಾಯಿ ಹಾಗೂ ಹಸಿ ಮಾಂಸ ಒಳಗೊಂಡಿರುತ್ತದೆ.

Corona: Beijing Zoo Opened For Public From March 23

"ಪ್ರಾಣಿಗಳು ಆಹಾರ ಸೇವಿಸುವ ಸಮಯವು ನನಗೆ ಬಹಳ ಖುಷಿಯಾದ ಸಮಯವಾಗಿರುತ್ತದೆ. ಎಷ್ಟೋ ಸಲ ಅವು ನನಗೆ ಕಡಿದಿರುವ ಉದಾಹರಣೆ ಸಹ ಇದೆ" ಎನ್ನುತ್ತಾರೆ ನಲವತ್ತು ವರ್ಷದ ಮಾ ತಮಾಷೆಯಾಗಿ. ಅವರಿಗೆ ಎಲ್ಲ ಪ್ರಾಣಿಗಳಿಗೂ ಆಹಾರ ವಿತರಣೆ ಮಾಡುವುದಕ್ಕೆ ಮೂರು ಗಂಟೆ ಸಮಯ ಹಿಡಿಸುತ್ತದೆ.

ಅಪರೂಪಕ್ಕೆ ಪ್ರಾಣಿಗಳಿಗೆ "ಮಧ್ಯಾಹ್ನದ ಟೀ" ನೀಡಬೇಕಾಗುತ್ತದೆ. ಅದರಲ್ಲೂ ದ್ರಾಕ್ಷಿ ಅಂದರೆ ಕೆಂಪು ಪಾಂಡಾಗಳಿಗೆ ಅಚ್ಚುಮೆಚ್ಚು. ಮಾ ಅವರು ಪಾಂಡಾಗೆ ಹಲವು ಸಲ ತಮ್ಮ ಕೈಯಾರೆ ಆಹಾರ ಉಣಿಸುತ್ತಾರೆ. ಕಳೆದ ತಿಂಗಳು ಮಧ್ಯದಲ್ಲಿ ಬೀಜಿಂಗ್ ನಲ್ಲಿ ಹಿಮ ಬಿದ್ದಿದೆ. ಈ ವೇಳೆ ಕೆಲವು ಪ್ರಾಣಿಗಳು ಬೆಚ್ಚಗಿರುವುದಕ್ಕೆ ಆದ್ಯತೆ ನೀಡಿದರೆ, ಕೆಲವು ಹೊರಗೆ ಸುತ್ತಾಡುವುದನ್ನು ಇಷ್ಟಪಡುತ್ತವೆ ಎನ್ನುತ್ತಾರೆ ಮಾ.

ಪ್ರತಿ ವಾರ ಇಡೀ ಮೃಗಾಲಯದ ಸ್ವಚ್ಛತೆ ಕೈಗೊಳ್ಳುತ್ತೇವೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ. ಪ್ರಾಣಿಗಳಿಗೆ ನೀಡುವ ಆಹಾರಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಿ, ಖರೀದಿಸುತ್ತೇವೆ ಎಂಬ ಮಾಹಿತಿಯನ್ನೂ ನೀಡುತ್ತಾರೆ. ಅಂದ ಹಾಗೆ ಈ ಮೃಗಾಲಯದ ಆನ್ ಲೈನ್ ಟ್ರಿಪ್ ಕೂಡ ಲಭ್ಯವಿದೆ ಎಂಬುದು ಆಸಕ್ತಿಕರ ಸಂಗತಿ. ಆದರೆ ಸ್ಥಳೀಯರಿಗೆ ಈ ಮೃಗಾಲಯಕ್ಕೆ ಭೇಟಿ ನೀಡುವುದೇ ಬಹಳ ಮೆಚ್ಚಿನ ಸಂಗತಿ.

English summary
Good news! Corona hit China capital Beijing zoo opened for public from Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X