ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಲಸಿಕೆಯಲ್ಲಿ ಲೋಪ: 16 ಲಕ್ಷ ಡೋಸ್ ಮಾಡರ್ನಾ ಲಸಿಕೆ ರದ್ದುಗೊಳಿಸಿದ ಜಪಾನ್!

|
Google Oneindia Kannada News

ನವದೆಹಲಿ, ಆಗಸ್ಟ್ 26: ಕೊರೊನಾವೈರಸ್ ಲಸಿಕೆಯ ಕೆಲವು ಬಾಟಲಿಗಳು ಕಲುಷಿತಗೊಂಡಿರುವ ಬಗ್ಗೆ ವರದಿ ಪ್ರಕಟಗೊಂಡ ಒಂದೇ ವಾರದಲ್ಲಿ ಜಪಾನ್ ಸರ್ಕಾರವು 16.3 ಲಕ್ಷ ಡೋಸ್ ಮಾಡರ್ನಾ ಲಸಿಕೆ ಬಳಕೆಯನ್ನು ಗುರುವಾರ ಸ್ಥಗಿತಗೊಳಿಸಿದೆ.

ಮಾಡರ್ನಾ ಲಸಿಕೆಯ ಪರಿಣಾಮಕಾರಿತ್ವ ಹಾಗೂ ಸುರಕ್ಷತೆ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಕೇವಲ ಮುನ್ನಚ್ಚರಿಕೆ ಕ್ರಮವಾಗಿ ಲಸಿಕೆ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಪಾನ್ ಸರ್ಕಾರ ಹಾಗೂ ಮಾಡರ್ನಾ ಕಂಪನಿಯು ತಿಳಿಸಿದೆ. ಇದರ ಮಧ್ಯೆ ದೇಶದ ಹಲವು ಕಂಪನಿಗಳು ಗುರುವಾರ ತಮ್ಮ ಉದ್ಯೋಗಿಗಗಳಿಗೆ ಲಸಿಕೆ ನೀಡುವ ಯೋಜನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿವೆ.

ಬೊಂಬಾಟ್ ಸುದ್ದಿ: ಕೊರೊನಾವೈರಸ್ ವಿರುದ್ಧ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಮಿಶ್ರಣವೇ ಬೆಸ್ಟ್!ಬೊಂಬಾಟ್ ಸುದ್ದಿ: ಕೊರೊನಾವೈರಸ್ ವಿರುದ್ಧ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಮಿಶ್ರಣವೇ ಬೆಸ್ಟ್!

"ಮಾಡರ್ನಾ ತನ್ನ ಕೋವಿಡ್ -19 ಲಸಿಕೆಯ ಔಷಧ ಉತ್ಪನ್ನ ಬಾಟಲಿಗಳಲ್ಲಿ ಕೆಲವು ಕಣ ಅಂಶಗಳು ಪತ್ತೆಯಾಗಿರುವುದರ ಬಗ್ಗೆ ದೃಢಪಡಿಸುತ್ತದೆ," ಎಂದು ಮಾಡರ್ನಾ ಕಂಪನಿಯು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. "ಮಾಡರ್ನಾ ಕಂಪನಿಯು ವರದಿಗಳ ಬಗ್ಗೆ ತನಿಖೆ ನಡೆಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ತನ್ನ ಪಾಲುದಾರ ಸಂಸ್ಥೆಯಾದ ಟಕೆಡಾ ಮತ್ತು ನಿಯಂತ್ರಕರೊಂದಿಗೆ ತ್ವರಿತವಾಗಿ ಕೆಲಸ ಮಾಡಲು ಬದ್ಧವಾಗಿದೆ" ಎಂದು ತಿಳಿಸಿದೆ. ಜಪಾನ್‌ನ ಟಕೆಡಾ ಫಾರ್ಮಾಸ್ಯುಟಿಕಲ್ (4502.T) ದೇಶದಲ್ಲಿ ಲಸಿಕೆ ವಿತರಿಸುವ ಹೊಣೆ ಹೊತ್ತುಕೊಂಡಿದೆ.

ಮೊದಲು ಕಲುಷಿತ ಅಂಶ ಪತ್ತೆಯಾಗಿದ್ದು ಯಾವಾಗ?

ಮೊದಲು ಕಲುಷಿತ ಅಂಶ ಪತ್ತೆಯಾಗಿದ್ದು ಯಾವಾಗ?

ಕಳೆದ ಆಗಸ್ಟ್ 16ರಂದು ಮೊದಲ ಬಾರಿಗೆ ಮಾಡರ್ನಾ ಕಂಪನಿಯ ಕೊವಿಡ್-19 ಲಸಿಕೆಯಲ್ಲಿ ಕಲುಷಿತ ಅಂಶ ಪತ್ತೆಯಾಗಿತ್ತು ಎಂದು ಜಪಾನ್ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಆದರೆ ಯಾವ ಬಾಟಲಿಗಳಲ್ಲಿನ ಲಸಿಕೆಯಲ್ಲಿ ಕಲುಷಿತ ಅಂಶವಿದೆ, ಆ ಲಸಿಕೆಯ ಬಾಟಲಿಗಳನ್ನು ಯಾವ ಪ್ರದೇಶದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕೆ ಟಕೆಡಾ ಕಂಪನಿಯ ಸಮಯಾವಕಾಶ ಬೇಕಾಗಿತ್ತು.

ಉತ್ಪಾದನೆ ಸಂದರ್ಭದಲ್ಲಿಯೇ ಮಾಡರ್ನಾ ಲಸಿಕೆ ಕಲುಷಿತ

ಉತ್ಪಾದನೆ ಸಂದರ್ಭದಲ್ಲಿಯೇ ಮಾಡರ್ನಾ ಲಸಿಕೆ ಕಲುಷಿತ

ಸ್ಪೇನ್ ನಲ್ಲಿನಲ್ಲಿರುವ ಗುತ್ತಿಗೆ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಸಂದರ್ಭ ಅದರ ಒಂದು ಮಾರ್ಗದಲ್ಲಿ ಉತ್ಪಾದನಾ ಸಮಸ್ಯೆಯಾಗಿದೆ. ಇದರಿಂದಾಗಿ ಲಸಿಕೆ ಕಲುಷಿತಚಗೊಂಡಿರುವ ಸಾಧ್ಯತೆಯಿದೆ ಎಂದು ಮಾಡರ್ನಾ ಕಂಪನಿ ಹೇಳಿದೆ. ಸ್ಪಾನಿಷ್ ಫಾರ್ಮಾ ಕಂಪನಿ ರೋವಿ(Rovi.MC)ಯು ಲಸಿಕೆಯನ್ನು ಬಾಟಲಿಗಳಿಗೆ ತುಂಬಿಸುವ ಮತ್ತು ಅಂತಿಮಗೊಳಿಸುವ ಕಾರ್ಯವನ್ನು ಮಾಡುತ್ತದೆ. ಹೀಗೆ ತುಂಬಿಸಿದ ಮಾಡರ್ನಾ ಕಂಪನಿಯ ಲಸಿಕೆಯನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ರವಾನಿಸಲಾಗುತ್ತದೆ. ಅದೇ ರೀತಿ ಇತ್ತೀಚಿಗೆ ಜಪಾನಿಗೆ ಕಳುಹಿಸಿದ ಲಸಿಕೆಯ ಬಾಟಲಿಯಲ್ಲಿ ದೋಷ ಕಂಡು ಬಂದಿದೆ.

Explained: ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರದಲ್ಲಿ ಯಾವುದು ಡೇಂಜರ್!?Explained: ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರದಲ್ಲಿ ಯಾವುದು ಡೇಂಜರ್!?

ಮಾಡರ್ನಾ ಕಂಪನಿ ಕೊವಿಡ್-19 ಲಸಿಕೆ ಉತ್ಪಾದನೆಗೆ ಹಿನ್ನಡೆ

ಮಾಡರ್ನಾ ಕಂಪನಿ ಕೊವಿಡ್-19 ಲಸಿಕೆ ಉತ್ಪಾದನೆಗೆ ಹಿನ್ನಡೆ

ಕಳೆದ ತಿಂಗಳಷ್ಟೇ ಮಾಡರ್ನಾ ಕಂಪನಿಯ ಕೊರೊನಾವೈರಸ್ ಲಸಿಕೆ ಉತ್ಪಾದನೆಯಲ್ಲಿ ವಿಳಂಬದಿಂದ ದಕ್ಷಿಣ ಕೊರಿಯಾ ಸೇರಿ ಹಲವು ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದರ ಮಧ್ಯೆ ಮಾಡರ್ನಾ ಲಸಿಕೆಯನ್ನು ರದ್ದುಗೊಳಿಸಿರುವುದು ಮತ್ತಷ್ಟು ಹಿನ್ನಡೆಯಾಗಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಮಾಡರ್ನಾ ಮತ್ತು ಟಕೆಡಾ ಕಂಪನಿಗಳು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಮಾಡರ್ನಾ ಲಸಿಕೆ ವಿತರಣೆ ನಂತರ ಪರಿಣಾಮದ ಬಗ್ಗೆ ಅಸ್ಪಷ್ಟತೆ

ಮಾಡರ್ನಾ ಲಸಿಕೆ ವಿತರಣೆ ನಂತರ ಪರಿಣಾಮದ ಬಗ್ಗೆ ಅಸ್ಪಷ್ಟತೆ

ಜಪಾನ್‌ನ ರಕ್ಷಣಾ ಸಚಿವಾಲಯವು ಒಸಾಕಾದಲ್ಲಿ ಸಾಮೂಹಿಕವಾಗಿ ಲಸಿಕೆ ವಿತರಣೆ ಅಭಿಯಾನವನ್ನು ನಡೆಸುತ್ತಿದೆ. ಪಶ್ಚಿಮ ಪ್ರಾಂತ್ಯದಲ್ಲಿ ಕಳೆದ ಆಗಸ್ಟ್ 6 ರಿಂದ 20ರವರೆಗೂ ಒಟ್ಟು 565,400 ಮಂದಿಗೆ ಲಸಿಕೆ ವಿತರಿಸಲಾಗಿದೆ. ಆದರೆ ಅದೆಷ್ಟು ಜನರಲ್ಲಿ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಮಾಡರ್ನಾ "ಮುಚ್ಚರಿಕೆ ಕ್ರಮವಾಗಿ" ಎರಡು ಘಟಕಗಳಲ್ಲಿ ಹಲವು ಪ್ರಶ್ನೆಗಳನ್ನು ಇರಿಸಲಾಗುತ್ತಿದೆ. ಇನ್ನು ಲಸಿಕೆಯ ಬಾಟಲಿಗಳಲ್ಲಿ ದೋಷ ಕಂಡು ಬಂದಿರುವುದು ಗೊತ್ತಾಗುತ್ತಿದ್ದಂತೆ ತುರ್ತಾಗಿ ಬಹುತೇಕ ಲಸಿಕೆ ಬಾಟಲಿಗಳನ್ನು ಪರಿಶೀಲನೆ ಮಾಡಲಾಯಿತು ಎಂದು ಟಕೆಡಾ ಸಂಸ್ಥೆಯು ತಿಳಿಸಿದೆ.

ಜಪಾನಿನಲ್ಲಿ ಕೊವಿಡ್-19 ಬೂಸ್ಟರ್ ಡೋಸ್ ನೀಡುವ ಸ್ಥಿತಿ ಇಲ್ಲ

ಜಪಾನಿನಲ್ಲಿ ಕೊವಿಡ್-19 ಬೂಸ್ಟರ್ ಡೋಸ್ ನೀಡುವ ಸ್ಥಿತಿ ಇಲ್ಲ

ಕೊವಿಡ್-19 ಲಸಿಕೆ ವಿತರಣೆಗೆ ಈ ದೋಷದಿಂದ ಸ್ವಲ್ಪ ಮಟ್ಟಿನ ಸಮಸ್ಯೆ ಆಗಲಿದೆ ಎಂದು ಗುರುವಾರ ಜಪಾನ್ ಪ್ರಧಾನಮಂತ್ರಿ ಯೋಶಿಹಿದೆ ಸುಗಾ ಹೇಳಿದ್ದಾರೆ. ಈ ಹೇಳಿಕೆ ನೀಡುವುದಕ್ಕೂ ಮುನ್ನ ದಿನ ಮಾತನಾಡಿದ್ದ ಪ್ರಧಾನಿ, ಸಪ್ಟೆಂಬರ್ ಅಂತ್ಯದ ವೇಳೆಗೆ ದೇಶದ ಶೇ.60ರಷ್ಟು ಮಂದಿಗೆ ಲಸಿಕೆ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದರು. ಅಲ್ಲದೇ ಬೂಸ್ಟರ್ ಡೋಸ್ ಲಸಿಕೆ ನೀಡುವುದಕ್ಕೆ ನಿರ್ಧಾರ ತೆಗೆದುಕೊಂಡರೆ ಅದಕ್ಕಾಗಿ ಸಾಕಾಗುವಷ್ಟು ಲಸಿಕೆಯು ದೇಶದಲ್ಲಿದೆ ಎಂದು ಹೇಳಿದ್ದರು. ಆದರೆ ದಿಢೀರ್ ಬೆಳವಣಿಗೆಯೊಂದರಲ್ಲಿ 16.3 ಲಕ್ಷ ಡೋಸ್ ಲಸಿಕೆಯ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

ಗುರುವಾರ ಜಪಾನಿನಲ್ಲಿ ಲಸಿಕೆ ವಿತರಣೆ ಬಂದ್

ಗುರುವಾರ ಜಪಾನಿನಲ್ಲಿ ಲಸಿಕೆ ವಿತರಣೆ ಬಂದ್

ಕೊರೊನಾವೈರಸ್ ಸೋಂಕಿಗಾಗಿ ಮಾಡರ್ನಾ ಲಸಿಕೆಯನ್ನು ಪಡೆದುಕೊಂಡವರ ಪೈಕಿ ಈವರೆಗೂ ಯಾರಿಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಜಪಾನ್ ಲಸಿಕೆಯಲ್ಲಿ ದೋಷ ಕಂಡು ಬಂದಿರುವ ಹಿನ್ನೆಲೆ ಏರ್ ಲೈನ್ಸ್ ಗುರುವಾರ ತನ್ನ ಸಿಬ್ಬಂದಿಗೆ ಲಸಿಕೆ ವಿತರಿಸುವುದನ್ನು ಸ್ಥಗಿತಗೊಳಿಸಿದೆ.

ಜಪಾನಿನಲ್ಲಿ ಶೇ.43ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ

ಜಪಾನಿನಲ್ಲಿ ಶೇ.43ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪೈಕಿ ಡೆಲ್ಟಾ ವೈರಸ್ ರೂಪಾಂತರ ತಳಿಯು ಜಪಾನಿನಲ್ಲಿ ಅತಿಹೆಚ್ಚು ಅಪಾಯಕಾರಿ ಎನಿಸಿದೆ. ಡೆಲ್ಟಾ ರೂಪಾಂತರ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾದ ಹಿನ್ನೆಲೆ ಆಗಸ್ಟ್ ತಿಂಗಳಿನಲ್ಲಿ ಒಂದೇ ದಿನ ಗರಿಷ್ಠ 25,000 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವರದಿಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ.54ರಷ್ಟು ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಶೇ.43ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳ 24,321 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 13,62,813ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 44 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಒಟ್ಟು ಸಾವಿನ ಸಂಖ್ಯೆ 15,737ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 2,28,590 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ಗೊತ್ತಾಗಿದೆ.

English summary
Contamination in Covid-19 Vaccine: Japan Govt suspends 16 Lakh doses of Moderna Vaccin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X