ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್

|
Google Oneindia Kannada News

ಬೀಜಿಂಗ್, ಮೇ 22: ಜಗತ್ತಿನಾದ್ಯಂತ 3 ಲಕ್ಷಕ್ಕೂ ಅಧಿಕ ಜನರ ಜೀವ ನುಂಗಿರುವ ಮಾರಣಾಂತಿಕ ಕೊರೊನಾ ವೈರಸ್ 'ಮೂಲ'ದ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ವುಹಾನ್ ಲ್ಯಾಬ್ ನಿಂದ ನೋವೆಲ್ ಕೊರೊನಾ ವೈರಸ್ ಲೀಕ್ ಆಗಿದೆ ಅಂತ ಕೆಲವರು ವಾದಿಸಿದರೆ, ವುಹಾನ್ ನಲ್ಲಿರುವ ಕುಖ್ಯಾತ ಮಾಂಸ ಮಾರುಕಟ್ಟೆಯಿಂದಲೇ ನೋವೆಲ್ ಕೊರೊನಾ ವೈರಸ್ ಮನುಷ್ಯರಿಗೆ ಹಬ್ಬಿದೆ ಎಂಬುದು ಹಲವರ ಪ್ರತಿವಾದ.

ವುಹಾನ್ ನ 'ವೆಟ್ ಮಾರ್ಕೆಟ್' ವಿರುದ್ಧವೇ ಹಲವು ದೇಶಗಳು ಬೆಟ್ಟು ಮಾಡಿ ತೋರಿಸುತ್ತಿದ್ದರೂ, ಅದನ್ನ ಇತ್ತೀಚೆಗಷ್ಟೇ ಮತ್ತೆ ತೆರೆಯಲಾಗಿತ್ತು.

ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್

''ಆ ಮಾಂಸ ಮಾರುಕಟ್ಟೆಯನ್ನು ಮೊದಲು ಬಂದ್ ಮಾಡಬೇಕು. ಪ್ರಾಣಿಗಳಿಂದ ಮನುಷ್ಯರಿಗೆ ಎಷ್ಟೊಂದು ಕಾಯಿಲೆ ಬಂದಿರುವಾಗ, ಅದನ್ನ ಏಕೆ ತೆರೆಯಬೇಕು'' ಎಂದು ಅಮೇರಿಕಾದ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಆಂಥೋನಿ ಫೌಸಿ ಕೂಡ ಕಿಡಿಕಾರಿದ್ದರು.

ಇದಾದ ಬಳಿಕ ಕಾಡುಪ್ರಾಣಿಗಳ ಮಾಂಸ ಸೇವನೆಯನ್ನು ವುಹಾನ್ ನಿಷೇಧಿಸಿತು. ಇದೀಗ ಸಿಂಹ, ಹುಲಿ, ಬಾವಲಿ, ನವಿಲು ಮತ್ತು ಪ್ಯಾಂಗೋಲಿನ್ ಮಾಂಸ ಸೇವನೆಯ ಮೇಲೂ ವುಹಾನ್ ನಿಷೇಧ ಹೇರಿದೆ.

ಹೊಸ ನಿಯಮ ಜಾರಿ

ಹೊಸ ನಿಯಮ ಜಾರಿ

ಕೋವಿಡ್-19 ನ ಮೊದಲ ಕೆಲ ಪ್ರಕರಣಗಳು ವುಹಾನ್ ನ ವೆಟ್ ಮಾರ್ಕೆಟ್ ನಿಂದಲೇ ಪತ್ತೆಯಾಗಿರುವ ಕಾರಣ ಕಾಡುಪ್ರಾಣಿಗಳ ಮಾಂಸ ಸೇವನೆಯನ್ನು ವುಹಾನ್ ನ ಮುನಿಸಿಪಾಲ್ ಗವರ್ನ್ಮೆಂಟ್ ನಿಷೇಧಿಸಿದೆ. ಇದರ ಅನ್ವಯ ಸಿಂಹ, ಹುಲಿ, ಬಾವಲಿ, ನವಿಲು, ಪ್ಯಾಂಗೋಲಿನ್, ಹಾವು ಮುಂತಾದ ವನ್ಯಜೀವಿಗಳ ಮಾಂಸವನ್ನು ಯಾರೂ ಮಾರುವಂತಿಲ್ಲ, ಸೇವಿಸುವಂತಿಲ್ಲ. ಈ ನಿಯಮ ಮುಂದಿನ ಐದು ವರ್ಷಗಳವರೆಗೆ ಚಾಲ್ತಿಯಲ್ಲಿರಲಿದೆ.

ವನ್ಯಜೀವಿಯನ್ನು ಕೊಲ್ಲುವಂತಿಲ್ಲ

ವನ್ಯಜೀವಿಯನ್ನು ಕೊಲ್ಲುವಂತಿಲ್ಲ

ಹೊಸ ನಿಯಮದ ಪ್ರಕಾರ, ವುಹಾನ್ ನಲ್ಲಿ ಯಾವುದೇ ವನ್ಯಜೀವಿಯನ್ನು ಕೊಲ್ಲುವಂತಿಲ್ಲ. ಸಂಶೋಧನೆಗಾಗಿ ಮಾತ್ರ ಪ್ರಾಣಿಗಳನ್ನು ಕೊಲ್ಲಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!

ವೆಟ್ ಮಾರ್ಕೆಟ್ ನ ಒಟ್ಟು ಮೌಲ್ಯ ಎಷ್ಟು ಗೊತ್ತೇ.?

ವೆಟ್ ಮಾರ್ಕೆಟ್ ನ ಒಟ್ಟು ಮೌಲ್ಯ ಎಷ್ಟು ಗೊತ್ತೇ.?

ವನ್ಯಜೀವಿಗಳ ಮಾಂಸವನ್ನು ಮಾರಾಟ ಮಾಡುವ ಕುಖ್ಯಾತ 'ವುಹಾನ್ ವೆಟ್ ಮಾರ್ಕೆಟ್'ನ ಒಟ್ಟು ಮೌಲ್ಯ ಅಂದಾಜು $73 ಮಿಲಿಯನ್.! 14 ಮಿಲಿಯನ್ ಗೂ ಅಧಿಕ ಮಂದಿ ಇದೇ ವೆಟ್ ಮಾರ್ಕೆಟ್ ನಲ್ಲಿನ ಕೆಲಸದ ಮೇಲೆ ಅವಲಂಬಿತರಾಗಿದ್ದಾರೆ.

ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!

ವನ್ಯಜೀವಿಗಳ ಮಾಂಸ ಮಾರಾಟಕ್ಕೆ ಬ್ರೇಕ್

ವನ್ಯಜೀವಿಗಳ ಮಾಂಸ ಮಾರಾಟಕ್ಕೆ ಬ್ರೇಕ್

ವುಹಾನ್ ನ ವೆಟ್ ಮಾರ್ಕೆಟ್ ನಲ್ಲಿ ಬಾವಲಿ, ಪ್ಯಾಂಗೋಲಿನ್, ಹಾವು, ಕಾಳಿಂಗ ಸರ್ಪ, ಸಿಂಹ, ಹುಲಿ, ಮೊಲ, ಜಿಂಕೆ, ಕಾಡುಬೆಕ್ಕು, ನವಿಲು, ಕಾಡು ಹಂದಿ ಸೇರಿದಂತೆ ಹಲವು ವನ್ಯಜೀವಿಗಳ ಮಾಂಸ ಮಾರಾಟ ಮಾಡಲಾಗುತ್ತಿತ್ತು. ಇದೀಗ ಅವೆಲ್ಲದಕ್ಕೂ ಬ್ರೇಕ್ ಬಿದ್ದಿದೆ.

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

English summary
Consumption Of Lion, Bat, Peacock, Pangolin meat banned in Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X