ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಬಹುಮತ ಇಲ್ಲದವರಿಗೆ ಅಧಿಕಾರ!

|
Google Oneindia Kannada News

ಕೊಲಂಬೊ, ಅಕ್ಟೋಬರ್ 27: ಶ್ರೀಲಂಕಾದಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಲಂಕಾದ ಪ್ರಧಾನಿಯನ್ನೇ ಪದಚ್ಯುತಿಗೊಳಿ, ಹೊಸ ಪ್ರಧಾನಿಯನ್ನು ನೇಮಕ ಮಾಡಲಾಗಿದೆ ಇದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ.

ಮೈತ್ರಿ ಪಕ್ಷಗಳ ಬಿಕ್ಕಟ್ಟು, ಶ್ರೀಲಂಕಾ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ನೇಮಕ ಮೈತ್ರಿ ಪಕ್ಷಗಳ ಬಿಕ್ಕಟ್ಟು, ಶ್ರೀಲಂಕಾ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ನೇಮಕ

ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಿಗೊಳಿಸಿರುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೊಸ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಅವರನ್ನು ನೇಮಕ ಮಾಡಿ ಪ್ರಮಾಣವಚನ ಬೋಧಿಸಿದ್ದಾರೆ. ಆದರೆ ರಾಜಪಕ್ಸೆ ಪಕ್ಷ ಗೆದ್ದಿರುವ ಸೀಟು ಕೇವಲ 96 ಅವರಿಗೆ ಬಹುಮತ ಇಲ್ಲ.

ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ

ಈ ಹಿನ್ನೆಲೆಯಲ್ಲಿ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಮತ್ತು ಯುನೈಟೆಡ್ ಪೀಪಲ್‌ ಫ್ರೀಡಂ ಅಲೆಯನ್ಸ್‌ ಮೈತ್ರಿ ಮಾಡಿಕೊಂಡು ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಮಾಡಲಾಗಿತ್ತು. ಆದರೆ ಯುನೈಟೆಡ್ ಪೀಪಲ್ ಫ್ರೀಡಂ ಅಲೆಯನ್ಸ್‌ ಮೈತ್ರಿಯಿಂದ ಹೊರಬಂದ ಕಾರಣ ಪ್ರಧಾನಿಯನ್ನು ಪದಚ್ಯುತಗೊಳಿಸಿ ಮಹಿಂದ ರಾಜಪಕ್ಸ ಅವರನ್ನು ಪ್ರಧಾನಿಯನ್ನಾಗಿಸಿದ್ದಾರೆ ಅಧ್ಯಕ್ಷ ಸಿರಿಸೇನ.

constitutional crisis in Sri Lanka, second majority party ruling

2015 ರಲ್ಲಿ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಿತ್ತು. ಆಗ ಮೈತ್ರಿಪಾಲ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ರಾಜಪಕ್ಸ ಅವರ 10 ವರ್ಷದ ಆಡಳಿತಕ್ಕೆ ಆ ಚುನಾವಣೆ ಕೊನೆ ಹಾಡಿತ್ತು. ಆದರೆ ಈಗ ಮತ್ತೆ ರಾಜಪಕ್ಸ ಅವರೇ ಪ್ರಧಾನಿ ಆಗಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಹತ್ಯೆ ಸಂಚು ಪ್ರಕರಣದಲ್ಲಿ ಭಾರತೀಯನ ಸೆರೆ ಶ್ರೀಲಂಕಾ ಅಧ್ಯಕ್ಷ ಹತ್ಯೆ ಸಂಚು ಪ್ರಕರಣದಲ್ಲಿ ಭಾರತೀಯನ ಸೆರೆ

ಇತ್ತೀಚೆಗಷ್ಟೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು 'ನನ್ನನ್ನು ಕೊಲ್ಲಲು ಸಂಚು ನಡೆಸಲಾಗುತ್ತಿದೆ, ವಿಷಯವನ್ನು ಪ್ರಧಾನಿ ಕಾರ್ಯಾಲಯ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ' ಎಂದು ಹೇಳಿದ್ದರು ಇದು ಲಂಕಾದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಪ್ರಧಾನಿ ಮೇಲಿನ ಅಪನಂಬಿಕೆಯಿಂದಲೇ ಅವರನ್ನು ಸಿರಿಸೇನಾ ಪದಚ್ಯುತ ಗೊಳಿಸಿದ್ದಾರೆ.

ಪದಚ್ಯುತವಾಗಿರುವ ರನಿಲ್ ವಿಕ್ರಮಸಿಂಘೆ ಅವರ ಪಕ್ಷವು ಕಳೆದ ಚುನಾವಣೆಯಲ್ಲಿ 106 ಸೀಟುಗಳನ್ನು ಪಡೆದಿದೆ ಆದರೆ ಏಳು ಸ್ಥಾನಗಳಿಂದ ಅದೂ ಸಹ ಬಹುಮತದಿಂದ ಹಿಂದೆ ಉಳಿದಿದೆ. ಪ್ರಸ್ತುತ ಕಡಿಮೆ ಸ್ಥಾನ ಪಡೆದಿರುವ ಪಕ್ಷವೊಂದು ಶ್ರೀಲಂಕಾದಲ್ಲಿ ಆಡಳಿತ ನಡೆಸುತ್ತಿದ್ದು, ಇದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಠಿಸಿದೆ.

English summary
Constitutional crisis occurred in Sri Lanka. No party has majority but second largest party ruling the nation. first majority party not able to do anything.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X