• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಷ ಕೊಟ್ಟು ಪುಟಿನ್ ಶತ್ರು ಕೊಲೆಗೆ ಯತ್ನ..?

|

ರಷ್ಯಾದಲ್ಲಿ ವಿಪಕ್ಷ ನಾಯಕನ ಹತ್ಯೆಗೆ ಪ್ರಯತ್ನ ನಡೆದಿದೆ. ವಿಷ ಹಾಕಿ ರಷ್ಯಾ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಕೊಲೆಗೆ ಯತ್ನಿಸಲಾಗಿದೆ. ವಿಷ ದೇಹಕ್ಕೆ ಹೊಕ್ಕಿರುವ ಪರಿಣಾಮ ಅಲೆಕ್ಸಿ ನವಲ್ನಿ ಕೋಮಾ ಸೇರಿದ್ದಾರೆ. ರಷ್ಯಾದಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಈ ಘಟನೆಗೂ, ಅಧ್ಯಕ್ಷ ಪುಟಿನ್‌ಗೂ ಸಂಬಂಧ ಕಲ್ಪಿಸಲಾಗುತ್ತಿದೆ.

ಏಕೆಂದರೆ ಇದೀಗ ವಿಷ ಉಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಅಲೆಕ್ಸಿ ನವಲ್ನಿ ಪುಟಿನ್‌ರ ಶತ್ರು. ಇಡೀ ರಷ್ಯಾ ಪುಟಿನ್ ವಿರುದ್ಧ ಧ್ವನಿ ಎತ್ತಲು ನಡುಗುತ್ತಿರುವಾಗ ಪುಟಿನ್ ಕ್ರಮಗಳನ್ನು ಪ್ರಶ್ನಿಸಿ, ಹೋರಾಟಕ್ಕೆ ಇಳಿಯುವ ತಾಕತ್ತು ಇರುವ ಏಕೈಕ ನಾಯಕ ನವಲ್ನಿ. ಆದರೆ ಇಂತಹ ವ್ಯಕ್ತಿಯ ಮೇಲೆ ದಾಳಿ ನಡೆದಿದೆ. ಅದು ಕಾರ್ಕೋಟಕ ವಿಷ ಉಣಿಸಿ ನವಲ್ನಿ ಕೊಲೆಗೆ ಪ್ರಯತ್ನ ನಡೆದಿದೆ.

ರಷ್ಯಾದಲ್ಲಿ ಪುಟಿನ್ ಅಧ್ಯಕ್ಷ ಪಟ್ಟ ಉಳಿಸುವ ಸಾಂವಿಧಾನಿಕ ತಿದ್ದುಪಡಿ!

ಆದರೆ ಇದನ್ನು ಮಾಡಿಸಿದ್ದು ಯಾರು ಎಂಬ ಪ್ರಶ್ನೆ ಇಡೀ ಜಗತ್ತನ್ನು ಕಾಡುವಾಗಲೇ ಪುಟಿನ್ ವಿರೋಧಿಗಳು ವ್ಲಾದಿಮಿರ್ ಪುಟಿನ್ ವಿರುದ್ಧವೇ ಬೆರಳು ಮಾಡುತ್ತಿದ್ದಾರೆ. ಇನ್ನು ನವಲ್ನಿ ಹಾಗೂ ಪುಟಿನ್ ನಡುವೆ ಇದ್ದ ರಾಜಕೀಯ ದ್ವೇಷ ಕೂಡ ಇಂತಹದ್ದೇ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ತಮ್ಮ ರಾಜಕೀಯ ವಿರೋಧಿಯನ್ನು ಮುಗಿಸಲು ಪುಟಿನ್ ಈ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ರಾಸಾಯನಿಕ ದಾಳಿಯೂ ನಡೆದಿತ್ತು

ರಾಸಾಯನಿಕ ದಾಳಿಯೂ ನಡೆದಿತ್ತು

44 ವರ್ಷದ ಅಲೆಕ್ಸಿ ನವಲ್ನಿ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2017ರಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ನವಲ್ನಿ ಮೇಲೆ ಕೆಮಿಕಲ್ ಎರಚಲಾಗಿತ್ತು. ಇದರಿಂದ ನವಲ್ನಿ ಕಣ್ಣಿಗೆ ಹಾನಿ ಕೂಡ ಆಗಿದೆ. ‘ಫ್ಯೂಚರ್ ಆಫ್ ದಿ ರಷ್ಯಾ' ಎಂಬ ಹೆಸರಿನ ಪಕ್ಷದ ಮುಖ್ಯಸ್ಥ ನವಲ್ನಿ ಪುಟಿನ್‌ರ ಕಡು ವಿರೋಧಿ. ಹೀಗೆ ಪುಟಿನ್ ಆಡಳಿತದ ವಿರುದ್ಧ ಈ ಹಿಂದೆ ಪ್ರತಿಭಟನೆ ನಡೆಸುವಾಗಲೇ ನವಲ್ನಿ ಮೇಲೆ ಅಟ್ಯಾಕ್ ಆಗಿತ್ತು. ಆದರೆ ದಾಳಿಯಿಂದ ಬಚಾವ್ ಆಗಿ ಜೀವ ಉಳಿಸಿಕೊಂಡಿದ್ದ ನವಲ್ನಿಗೆ ಈಗ ಮತ್ತೆ ಆಪತ್ತು ಎದುರಾಗಿದೆ. ನವಲ್ನಿಗೆ ಆಹಾರದಲ್ಲಿ ವಿಷ ಹಾಕಿ ಕೊಟ್ಟಿರುವ ಬಗ್ಗೆ ಗಂಭೀರ ಆರೋಪ ಕೇಳಿಬರುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಅಲ್ಲದೆ ಸಿನಿಮಾ ಕೂಡ ನಿರ್ದೇಶನ ಮಾಡಿರುವ ಅನುಭವ ನವಲ್ನಿಗೆ ಇದೆ. ಇನ್ನು ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ನವಲ್ನಿ ಹಿಂದಿನಿಂದಲೂ ಭಾರಿ ಹೋರಾಟವನ್ನೇ ನಡೆಸುತ್ತಿದ್ದಾರೆ. ಆದರೆ ಇದೇ ಅವರ ಜೀವಕ್ಕೆ ಮುಳುವಾಗಿದೆ ಎಂಬುದು ಆಪ್ತರ ಮಾತು.

ದಿಢೀರ್ ರಾಜಕೀಯ ಬೆಳವಣಿಗೆ: ರಷ್ಯಾ ಸರ್ಕಾರವನ್ನೇ ಕೆಳಗಿಳಿಸಿದ ಪುತಿನ್!

ಪುಟಿನ್ ರಷ್ಯಾದ ಪ್ರಶ್ನಾತೀತ ನಾಯಕ..!

ಪುಟಿನ್ ರಷ್ಯಾದ ಪ್ರಶ್ನಾತೀತ ನಾಯಕ..!

ಇತ್ತೀಚೆಗೆ ರಷ್ಯಾದಲ್ಲಿ ಕೈಗೊಂಡ ಸಾಂವಿಧಾನಿಕ ಸುಧಾರಣೆಗಳು ಇಡೀ ವಿಶ್ವದ ಗಮನವನ್ನು ಸೆಳೆದಿದ್ದವು. ಅದರಲ್ಲೂ ರಷ್ಯಾದ ಬದ್ಧ ವಿರೋಧಿ ಅಮೆರಿಕ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಆದರೆ ದಿಢೀರ್ ಅಂತಾ ರಷ್ಯಾದಲ್ಲಿ ಎಲ್ಲವೂ ನಡೆದುಹೋಗಿತ್ತು. ಪುಟಿನ್‌ಗೆ ಅಗತ್ಯವಾದ ರಾಜಕೀಯ ವಾತಾವರಣ ಅಲ್ಲಿ ನಿರ್ಮಾಣವಾಗಿದೆ. ರಷ್ಯಾದ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದ ಪುಟಿನ್, ಇನ್ನೆರಡು ಅವಧಿಗೆ ಅಧಿಕಾರವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಪುಟಿನ್ ಅವರ ಈ ನಡೆಯ ವಿರುದ್ಧ ನವಲ್ನಿ ತೀವ್ರ ಹೋರಾಟ ನಡೆಸಿದ್ದರು. ಇದೀಗ ನವಲ್ನಿ ಕೂಡ ಕೋಮಾ ಸೇರಿದ ಹಿನ್ನೆಲೆ ಪುಟಿನ್ ರಷ್ಯಾದ ಪ್ರಶ್ನಾತೀತ ನಾಯಕರಾಗಿದ್ದಾರೆ.

ನವಲ್ನಿ ವಕ್ತಾರೆ ಹೇಳೋದು ಏನು..?

ನವಲ್ನಿ ವಕ್ತಾರೆ ಹೇಳೋದು ಏನು..?

ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ಅಲೆಕ್ಸಿ ಆರೋಗ್ಯ ಹದಗೆಟ್ಟಿದ್ದು, ತಕ್ಷಣ ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಲಾಯಿತು ಎಂದು ನವಲ್ನಿ ವಕ್ತಾರೆ ಕಿರಾ ಯರ್ಮಿಶ್ ಟ್ವೀಟ್ ಮಾಡಿದ್ದಾರೆ. ಚಹಾದಲ್ಲಿ ವಿಷ ಬೆರೆಸಿ ನೀಡಲಾಗಿದೆ ಎಂಬುದು ನಮ್ಮ ಊಹೆ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲೆಕ್ಸಿ ಆರೋಗ್ಯ ಸ್ಥಿತಿ ಬಗ್ಗೆ ಕಿರಾ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದು, ನವಲ್ನಿ ಬದುಕುಳಿದರೆ ಅದನ್ನು ಪವಾಡ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಒಟ್ಟಾರೆ ರಷ್ಯಾ ರಾಜಕೀಯದಲ್ಲಿ ಮೂಡಿದ್ದ ದೊಡ್ಡದೊಂದು ಧನಿ ಕ್ಷೀಣಿಸುವ ಸಾಧ್ಯತೆ ದಟ್ಟವಾಗಿದ್ದು, ಪುಟಿನ್ ವಿರೋಧಿಗಳಿಗೆ ನಡುಕ ಶುರುವಾಗಿದೆ.

ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್

English summary
Alexei Navalny, The Leader Of Russian Opposition Is In Coma Stage After Allegedly Eating Poisoned Food. Allies Believe Is Linked To His political activity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X