ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಸ್ಫೋಟದಲ್ಲಿ ರಾಮಲಿಂಗಾ ರೆಡ್ಡಿ ಸಂಬಂಧಿ ನಾಗರಾಜ ರೆಡ್ಡಿ ಸಾವು

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ಶ್ರೀಲಂಕಾದಲ್ಲಿ ನಿನ್ನೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಕೆಲವು ಕನ್ನಡಿಗರು ಸಾವನ್ನಪ್ಪಿದ್ದು, ಇನ್ನೂ ಕೆಲವರು ನಾಪತ್ತೆ ಆಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ಶಾಸಕ, ಮಾಜಿ ಮಂತ್ರಿ ರಾಮಲಿಂಗಾ ರೆಡ್ಡಿ ಅವರ ಸಂಬಂಧಿ ನಾಗರಾಜ ರೆಡ್ಡಿ ಅವರು ಸಹ ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಂದು ಸಂಜೆ ವೇಳೆಗೆ ತಿಳಿದುಬಂದಿದೆ. ಇವರು ನಾಪತ್ತೆ ಆಗಿದ್ದಾರೆ ಎನ್ನಲಾಗಿತ್ತು.

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವು ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವು

ಆದರೆ ಸಂಜೆ ವೇಳೆಗೆ ಶ್ರೀಲಂಕಾದ ರಾಯಭಾರಿ ಕಚೇರಿ ಸುದ್ದಿಯನ್ನು ಸ್ಪಷ್ಟಪಡಿಸಿದ್ದು, ರಾಮಲಿಂಗಾ ರೆಡ್ಡಿ ಅವರ ಸಂಬಂಧಿ ಆಗಿದ್ದ ನಾಗರಾಜ ರೆಡ್ಡಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ತುಮಕೂರಿನ ರಮೇಶ್ ಗೌಡ ಅವರು ಸಹ ಬಾಂಬ್ ಬ್ಲಾಸ್ಟ್‌ನಲ್ಲಿ ನಿಧನ ಹೊಂದಿರುವುದಾಗಿ ಲಂಕಾದ ರಾಯಭಾರ ಕಚೇರಿ ಹೇಳಿದೆ.

Congress MLA Ramalinga Reddys relative died in SriLanka bomb blast

ಲಕ್ಷ್ಮಿ ನಾರಾಯಣ್ ಚಂದ್ರಶೇಖರ್, ರಮೇಶ್ , ಕೆ.ಜಿ.ಹನುಮಂತರಾಯಪ್ಪ, ಎಂ.ರಂಗಪ್ಪ ಅವರುಗಳು ಮೃತರಾಗಿದ್ದಾಗಿ ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿ ಹೇಳಿತ್ತು. ಈಗ ನಾಗರಾಜ ರೆಡ್ಡಿ ಮತ್ತು ಮತ್ತೊಬ್ಬ ಕನ್ನಡಿಗರು ಮೃತರಾಗಿರುವುದಾಗಿ ಹೇಳಿದೆ ಆ ಮೂಲಕ ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತರಾದ ಕನ್ನಡಿಗರ ಸಂಖ್ಯೆ ಆರಕ್ಕೆ ಏರಿದೆ, ಇನ್ನೂ ಕೆಲವರು ನಾಪತ್ತೆ ಆಗಿದ್ದು, ಹುಡುಕಾಟ ಚಾಲ್ತಿಯಲ್ಲಿದೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

ಶ್ರೀಲಂಕಾದಲ್ಲಿ ಮೃತರಾಗಿರುವ ಹಾಗೂ ಕಾಣೆಯಾಗಿರುವ ಕನ್ನಡಿಗರ ಶೋಧ ಹಾಗೂ ಸಹಾಯಕ್ಕೆಂದು ರಾಜ್ಯ ಸರ್ಕಾರವು ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಭಾರತ ಹಾಗೂ ರಾಜ್ಯ ಸರ್ಕಾರವು ಶ್ರೀಲಂಕಾದೊಂದಿಗೆ ಸತತ ಸಂಪರ್ಕದಲ್ಲಿದ್ದು ಭಾರತೀಯರ ಸುರಕ್ಷತೆ ಬಗ್ಗೆ ಹಾಗೂ ಮೃತ ದೇಹಗಳ ರವಾನೆಗೆ ವ್ಯವಸ್ಥೆ ಮಾಡುತ್ತಿದೆ.

English summary
Congress MLA, former minister Ramalinga Reddy relative Nagaraju Reddy died in Sri Lanka's bomb blast yesterday. Ramesh Gowda of Tumkur also reportedly died in bomb blast in Sri Lanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X