ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಹೆಚ್ಚಳ: ಮಕ್ಕಳ ಆರೋಗ್ಯದ್ದೇ ಚಿಂತೆ

|
Google Oneindia Kannada News

ಜೊಹಾನ್ಸ್‌ಬರ್ಗ್, ಡಿಸೆಂಬರ್ 04: ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರಿ ಹೆಚ್ಚಳವಾಗಿದ್ದು, ಮಕ್ಕಳ ಆರೋಗ್ಯದ ಚಿಂತೆ ಕಾಡುತ್ತಿದೆ.

ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬಂದಿದ್ದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ದಕ್ಷಿಣ ಆಫ್ರಿಕಾ ತಜ್ಞರಲ್ಲಿ ಆತಂಕವನ್ನುಂಟುಮಾಡಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 16 ಸಾವಿರದ 55 ಮಂದಿಯಲ್ಲಿ ಸೋಂಕು ವಕ್ಕರಿಸಿದ್ದು 25 ಮಂದಿ ಮೃತಪಟ್ಟಿದ್ದಾರೆ.

ಓಮಿಕ್ರಾನ್‌ ರೋಗಿ ಪರಾರಿ: ನಾಪತ್ತೆಯಾದ 10 ಪ್ರಯಾಣಿಕರ ಹುಡುಕಾಟ!ಓಮಿಕ್ರಾನ್‌ ರೋಗಿ ಪರಾರಿ: ನಾಪತ್ತೆಯಾದ 10 ಪ್ರಯಾಣಿಕರ ಹುಡುಕಾಟ!

ಹಲವು ದೇಶಗಳಲ್ಲಿ ಇದು ಕೋವಿಡ್ ನಾಲ್ಕನೇ ಅಲೆಯ ಆರಂಭವಾಗಿದ್ದು ವಿಶೇಷವಾಗಿ ಮಕ್ಕಳಲ್ಲಿ ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಬೇಗವಾಗಿ ಹರಡುತ್ತಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ (NICD)ಯ ಡಾ ವಾಸಿಲಾ ಜಸ್ಸತ್ ಹೇಳಿದ್ದಾರೆ.

Concern Over COVID In Children Under Five As South Africas Daily Cases Shoot Up

ಈ ಮೊದಲು ಒಂದು ಮತ್ತು ಎರಡನೇ ಕೋವಿಡ್ ಅಲೆ ಸಂದರ್ಭದಲ್ಲಿ ಮಕ್ಕಳು ಹೆಚ್ಚಾಗಿ ಸೋಂಕಿಗೆ ತುತ್ತಾಗಿರಲಿಲ್ಲ. ಆಸ್ಪತ್ರೆಗಳಿಗಂತೂ ದಾಖಲಾಗಿರುವ ಮಕ್ಕಳ ಸಂಖ್ಯೆ ಇಡೀ ವಿಶ್ವದಲ್ಲಿ ಕಡಿಮೆಯೇ. ಆದರೆ ಮೂರನೇ ಅಲೆಯಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು 15ರಿಂದ 19 ವರ್ಷದೊಳಗಿನ ಹದಿಹರೆಯದವರು ಮೂರನೇ ಅಲೆಯ ಕೋವಿಡ್ ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ.

ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ಓಮಿಕ್ರಾನ್‌ನಿಂದಾಗಿ ದೇಶದಲ್ಲಿ ಕೋವಿಡ್‌ 4ನೇ ಅಲೆ ಕಾಣಿಸಿಕೊಂಡಿದೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ. ಮೊದಲ ಓಮಿಕ್ರಾನ್ ಕೇಸು ಪತ್ತೆಯಾದ ತಿಂಗಳೊಳಗೇ, ಅದು ಮತ್ತೊಂದು ಕೋವಿಡ್‌ ಅಲೆಗೆ ಕಾರಣವಾಗಿರುವುದು, ವಿಶ್ವದ ಇತರೆ ದೇಶಗಳಲ್ಲೂ ಅಂಥದ್ದೇ ಭೀತಿಯನ್ನು ಹುಟ್ಟುಹಾಕಿದೆ.

ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ , ' ಕೋವಿಡ್‌ನ ಹೊಸ ತಳಿ ಒಮಿಕ್ರೋನ್‌ ಪತ್ತೆಯಾಗುವ ಮೂಲಕ ಆಫ್ರಿಕಾಕ್ಕೆ ಕೊರೊನಾದ 4ನೇ ಲಗ್ಗೆ ಇಟ್ಟಿದೆ.

ಇದುವರೆಗೂ ದೇಶದ ಒಟ್ಟು 9 ಪ್ರಾಂತ್ಯಗಳ ಪೈಕಿ 7ರಲ್ಲಿ ಓಮಿಕ್ರಾನ್ ವೈರಸ್‌ ಕಾಣಿಸಿಕೊಂಡಿದೆ. ಆದರೂ ಹೆಚ್ಚಿನ ಪ್ರಾಣಹಾನಿಯಾಗದಂತೆ ನಾವು ಈ ವೈರಸ್‌ ನಿಯಂತ್ರಿಸಲಿದ್ದೇವೆ ಎಂಬ ವಿಶ್ವಾಸವಿದೆ. ದೇಶದ ಪ್ರತಿ ಪ್ರಜೆಯೂ ಪೂರ್ಣ ಲಸಿಕೆ ಪಡೆದುಕೊಂಡರೆ, ನಾವು ಕ್ರಿಸ್‌ಮಸ್‌ ವೇಳೆ ಯಾವುದೇ ಕಠಿಣ ಲಾಕ್‌ಡೌನ್‌ ಹೇರದೇ 4ನೇ ಅಲೆಯನ್ನು ಎದುರಿಸಬಹುದು' ಎಂದು ಹೇಳಿದ್ದಾರೆ.

ಅದರಲ್ಲೂಓಮಿಕ್ರಾನ್ ಪತ್ತೆಯಾದ ಬಳಿಕ ಚಿಕ್ಕ ಮಕ್ಕಳು ಮತ್ತು ಯುವಸಮೂಹದಲ್ಲೇ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಆಫ್ರಿಕಾದಲ್ಲಿ ಮೊದಲ ಓಮಿಕ್ರಾನ್ ಕೇಸು ಪತ್ತೆಯಾದ ಗೌಟೆಂಗ್‌ ಪ್ರಾಂತ್ಯದಲ್ಲಿ ಪತ್ತೆಯಾದ ಒಟ್ಟು ಪ್ರಕರಣದಲ್ಲಿ ಶೇ.10ರಷ್ಟುಮಕ್ಕಳದ್ದೇ ಆಗಿದೆ. ಅದರಲ್ಲೂ 0-2 ವರ್ಷ ಮತ್ತು 28-38ರ ವಯೋಮಾನದವರಲ್ಲೇ ಹೆಚ್ಚಿನ ಸೋಂಕು ಕಂಡುಬಂದಿದೆ. ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ 180ಕ್ಕೂ ಹೆಚ್ಚು ಒಮಿಕ್ರೋನ್‌ ಪ್ರಕರಣ ಪತ್ತೆಯಾಗಿದೆ.

ಅತ್ಯಂತ ಅಪಾಯಕಾರಿ ವೈರಸ್‌ ಎಂದು ಬಣ್ಣಿಸಲಾಗಿರುವ ಓಮಿಕ್ರಾನ್ ವೈರಸ್‌ನ ಸ್ವರೂಪ ಮತ್ತು ಲಕ್ಷಣಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿರುವಾಗಲೇ ರೂಪಾಂತರಿ ತಳಿ ದಕ್ಷಿಣ ಆಫ್ರಿಕಾದಲ್ಲಿ ಯುವಜನತೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತಿದೆ

ಸಚಿವರ ಈ ಹೇಳಿಕೆಗೆ ಪೂರಕವೆಂಬಂತೆ ಕಳೆದ 5 ದಿನಗಳ ಅವಧಿಯಲ್ಲಿ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ದೇಶದಲ್ಲಿ ನ.28ರಂದು 2818, ನ.29ರಂದು 2273, ನ.20ರಂದು 4373, ಡಿ.1ರಂದು 8561 ಮತ್ತು ಡಿ.2ರಂದು 11535 ಪ್ರಕರಣಗಳು ದಾಖಲಾಗಿವೆ.

ನವೆಂಬರ್‌ ಮಧ್ಯಭಾಗದಲ್ಲಿ ದೇಶದಲ್ಲಿ ನಿತ್ಯ 200-300 ಕೇಸು ಕಂಡುಬರುತ್ತಿತ್ತು. ಅದೀಗ 10000ದ ಗಡಿದಾಟಿದೆ. 2021ರಲ್ಲಿ ಡೆಲ್ಟಾಹಾವಳಿ ಹೆಚ್ಚಾದ ಅವಧಿ ಅಂದರೆ ಜೂನ್‌, ಜುಲೈ ತಿಂಗಳಲ್ಲಿ ನಿತ್ಯ ಆಫ್ರಿಕಾದಲ್ಲಿ 25000 ಕೇಸು ದಾಖಲಾಗಿದ್ದೇ ಅತಿ ಗರಿಷ್ಠವಾಗಿತ್ತು. ಇದೀಗ ಮತ್ತೇ ಅಂಥದ್ದೇ ಪ್ರಮಾಣದಲ್ಲಿ ಕೇಸು ದಾಖಲಾಗುವ ಭೀತಿ ಎದುರಾಗಿದೆ.

Recommended Video

ಇಡೀ ದೇಶದಲ್ಲಿ ಒಮಿಕ್ರೋನ್ ಪತ್ತೆಯಾಗಿದ್ದು ಕರ್ನಾಟಕದಲ್ಲಿ, ತುರ್ತು ಸಭೆ ಕರೆದ CM | Oneindia Kannada

English summary
South African experts have expressed concern about the rising number of COVID-19 infections among young children, even as the country recorded a further 16,055 infections and 25 deaths overnight on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X