ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ? ಸಂಪೂರ್ಣ ವಿವರ

|
Google Oneindia Kannada News

ಬೀಜಿಂಗ್, ಫೆಬ್ರವರಿ 25: ಚೀನಾದಲ್ಲಿ ಕೊರೊನಾ ವೈರಸ್ ಹಾವಳಿ ಮುಂದುವರಿದಿದ್ದು, ಮಂಗಳವಾರ 508 ಹೊಸ ಪ್ರಕರಣಗಳು ವರದಿಯಾಗಿವೆ. ಜತೆಗೆ ಏಷ್ಯಾದ ಇತರೆ ಭಾಗಗಳು, ಮಧ್ಯಪ್ರಾಚ್ಯ ಮತ್ತು ಯುರೋಪ್‌ನ ದೇಶಗಳಿಗೂ ಕೊರೊನಾ ವೈರಸ್ ಸೋಂಕು ಹರಡಿದೆ.

ಕೊರೊನಾ ದಾಳಿಯಿಂದ ಚೀನಾದಲ್ಲಿ ಮತ್ತೆ 71 ಸಾವುಗಳು ವರದಿಯಾಗಿದ್ದು, ಅದರಲ್ಲಿ 68 ವುಹಾನ್ ನಗರದಲ್ಲಿಯೇ ಸಂಭವಿಸಿವೆ. ಇದರಿಂದ ಚೀನಾದಲ್ಲಿ ಒಟ್ಟಾರೆ ಕೊರೊನಾ ವೈರಸ್‌ಗೆ ಒಳಗಾದವರ ಸಂಖ್ಯೆ 77,658ಕ್ಕೆ ತಲುಪಿದ್ದು, 2,663 ಮಂದಿ ಮೃತಪಟ್ಟಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಮಂಗಳವಾರ 60 ಹೊಸ ಪ್ರಕರಣಗಳು ಕಂಡುಬಂದಿದ್ದು, ಕೊರೊನಾ ಸೋಂಕಿತರ ಸಂಖ್ಯೆ 893 ಮುಟ್ಟಿದೆ. ದಕ್ಷಿಣ ಕೊರಿಯಾ ಸೇನಾಪಡೆಯಲ್ಲಿರುವವರಲ್ಲಿಯೇ 13 ಜನರಲ್ಲಿ ಕೊರೊನಾ ಕಂಡುಬಂದಿದೆ. ಜಪಾನ್‌ನಲ್ಲಿ ಕೂಡ ಕೊರೊನಾ ಭೀತಿ ತೀವ್ರವಾಗಿದ್ದು, ಡೈಮಂಡ್ ಪ್ರಿನ್ಸ್ ಹಡಗಿನಲ್ಲಿ ಕೊರೊನಾ ಪತ್ತೆಯಾಗಿದ್ದವರಲ್ಲಿ ನಾಲ್ಕನೆಯ ಪ್ರಯಾಣಿಕ ಮೃತಪಟ್ಟಿದ್ದಾರೆ.

ದ. ಕೊರಿಯಾದಲ್ಲಿ ಅಮೆರಿಕದ ಸೈನಿಕರು

ದ. ಕೊರಿಯಾದಲ್ಲಿ ಅಮೆರಿಕದ ಸೈನಿಕರು

ದಕ್ಷಿಣ ಕೊರಿಯಾದಲ್ಲಿ 28 ಸಾವಿರಕ್ಕೂ ಅಧಿಕ ಅಮೆರಿಕದ ಸೈನಿಕರಿದ್ದಾರೆ. ಉತ್ತರ ಕೊರಿಯಾದ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಅಮೆರಿಕ ತನ್ನ ಸೇನೆಯನ್ನು ಅಲ್ಲಿ ನಿಯೋಜಿಸಿದೆ. ಕೊರೊನಾ ಭಯದ ಕಾರಣ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳು ಉದ್ದೇಶಿತ ಕಮಾಂಡೋ ಪೋಸ್ಟ್ ತರಬೇತಿ ಕಾರ್ಯಕ್ರಮವನ್ನು ಮುಂದೂಡಲು ಚಿಂತನೆ ನಡೆಸಿವೆ.

ಇರಾನ್‌ನಲ್ಲಿ ಮತ್ತೆ ಇಬ್ಬರ ಸಾವು

ಇರಾನ್‌ನಲ್ಲಿ ಮತ್ತೆ ಇಬ್ಬರ ಸಾವು

ಇರಾನ್‌ನಲ್ಲಿ ಮತ್ತೆ ಇಬ್ಬರು ಕೊರೊನಾದಿಂದ ಮೃತಪಟ್ಟಿದ್ದು, ಇದರಿಂದ ಇಸ್ಲಾಮಿಕ್ ರಿಪಬ್ಲಿಕ್‌ನಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಮೃತರಲ್ಲಿ ಕೊರೊನಾ ವೈರಸ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಸವೇಹ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯಸ್ಥರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಭಾರತದ 14 ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಭಾರತದ 14 ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ

ವಿಯ್ನೆಟ್ನಾಂನಲ್ಲಿ ಎಲ್ಲರೂ ಗುಣಮುಖ

ವಿಯ್ನೆಟ್ನಾಂನಲ್ಲಿ ಎಲ್ಲರೂ ಗುಣಮುಖ

ಥಾಯ್ಲೆಂಡ್‌ನಲ್ಲಿ ಎರಡು ಹೊಸ ಪ್ರಕರಣಗಳು ದೃಢಪಟ್ಟಿದ್ದು, ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ತಲುಪಿದೆ. ವಿಯೆಟ್ನಾಂದಲ್ಲಿ 16 ಮಂದಿಯಲ್ಲಿ ಕೊರೊನಾ ಕಂಡುಬಂದಿದ್ದು, ಎಲ್ಲರೂ ಗುಣುಮುಖರಾಗಿದ್ದಾರೆ. ಫೆ. 13ರ ಬಳಿಕ ಯಾವುದೇ ಹೊಸ ಪ್ರಕರಣ ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಚೀನಾದ ವುಹಾನ್ ಪ್ರಾಂತ್ಯದಿಂದ ಬಂದಿದ್ದ ಯುವತಿಯ 50 ವರ್ಷದ ತಂದೆ ಕೂಡ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದಲ್ಲದೆ ಮೂರು ತಿಂಗಳ ಮಗು ಸೇರಿದಂತೆ ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

ಬಹರೇನ್ ವಿಮಾನ ತಾತ್ಕಾಲಿಕ ಸ್ಥಗಿತ

ಬಹರೇನ್ ವಿಮಾನ ತಾತ್ಕಾಲಿಕ ಸ್ಥಗಿತ

ಕೊರೊನಾ ವೈರಸ್ ಕಾರಣದಿಂದ ಬಹ್ರೇನ್ ದ್ವೀಪ ರಾಷ್ಟ್ರವು ದುಬೈ ಮತ್ತು ಶಾರ್ಜಾಗಳ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ. ಇರಾನ್‌ನಿಂದ ಬರುವಾಗ ದುಬೈಗೆ ಬಂದು ಬಹ್ರೇನ್‌ಗೆ ಮರಳಿದ್ದ ಶಾಲಾ ಬಸ್ ಚಾಲಕನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ದುಬೈ ಮೂಲಕ ಇರಾನ್‌ನಿಂದ ಬಂದ ಮತ್ತೊಬ್ಬ ಪ್ರವಾಸಿಗನಲ್ಲಿಯೂ ಕೊರೊನಾ ಕಂಡುಬಂದಿದೆ. ಹೀಗಾಗಿ ತಕ್ಷಣದಿಂದಲೇ ಮುಂದಿನ 48 ಗಂಟೆಗಳವರೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ವಿಮಾನಕ್ಕೆ ನೀಡದ ಅನುಮತಿ: ಚೀನಾಕ್ಕೆ ಕಠಿಣ ಕ್ರಮದ ಪ್ರತಿಕ್ರಿಯೆ ಕೊಟ್ಟ ಭಾರತವಿಮಾನಕ್ಕೆ ನೀಡದ ಅನುಮತಿ: ಚೀನಾಕ್ಕೆ ಕಠಿಣ ಕ್ರಮದ ಪ್ರತಿಕ್ರಿಯೆ ಕೊಟ್ಟ ಭಾರತ

ಫಿಲಿಪ್ಪೀನ್ಸ್ ವಿಮಾನ ಜಪಾನ್‌ಗೆ

ಫಿಲಿಪ್ಪೀನ್ಸ್ ವಿಮಾನ ಜಪಾನ್‌ಗೆ

ಜಪಾನ್‌ನ ಯೊಕೊಹಮಾ ಬಂದರಿನಲ್ಲಿ ಸಿಲುಕಿರುವ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿರುವ ತನ್ನ ನೂರಾರು ಸಿಬ್ಬಂದಿ ಮತ್ತು ಪ್ರಜೆಗಳನ್ನು ವಾಪಸ್ ಕರೆದುಕೊಂಡು ಬರಲು ಫಿಲಿಪ್ಪೀನ್ಸ್ ಸಿದ್ಧತೆ ನಡೆಸಿದೆ. ಎರಡು ವಿಮಾನಗಳು ಜಪಾನ್‌ಗೆ ತೆರಳುತ್ತಿದ್ದು, ಕೊರೊನಾ ವೈರಸ್ ಪತ್ತೆಯಾಗಿರುವ ಸಿಬ್ಬಂದಿಯನ್ನು ವಾಪಸ್ ಕರೆದೊಯ್ಯುತ್ತಿಲ್ಲ. ಬದಲಾಗಿ ಅವರು ಜಪಾನ್‌ನಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.

ಎಲ್ಲೆಲ್ಲಿ ಎಷ್ಟು ಪ್ರಕರಣ?

ಎಲ್ಲೆಲ್ಲಿ ಎಷ್ಟು ಪ್ರಕರಣ?

ಅಫ್ಘಾನಿಸ್ತಾನ, ಬೆಲ್ಜಿಯಂ, ಕಾಂಬೋಡಿಯಾ, ಈಜಿಪ್ಟ್, ಫಿನ್ಲೆಂಡ್, ಇರಾಕ್, ಲೆಬನಾನ್, ನೇಪಾಳ, ಶ್ರೀಲಂಕಾ, ಸ್ವೀಡನ್ ದೇಶಗಳಲ್ಲಿ ತಲಾ 1 ಕೊರೊನಾ ವೈರಸ್ ಪ್ರಕರಣ ಕಂಡುಬಂದಿವೆ.

ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ

ಬಹರೇನ್, ಇಸ್ರೇಲ್‌, ಒಮನ್, ರಷ್ಯಾ, ಸ್ಪೇನ್ ದೇಶಗಳಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಮೂರು ಮಂದಿಯಲ್ಲಿ ಕೊರೊನಾ ಕಂಡುಬಂದಿದೆ.

ಈ ದೇಶಗಳಲ್ಲಿ ಕೊರೊನಾ ಹಾವಳಿ ಅಧಿಕ

ಈ ದೇಶಗಳಲ್ಲಿ ಕೊರೊನಾ ಹಾವಳಿ ಅಧಿಕ

ಕೆನಡಾ 11, ಆಸ್ಟ್ರೇಲಿಯಾ 22, ಜರ್ಮನಿ 16, ಕುವೈತ್ 5, ಮಕಾವೊ 10, ಮಲೇಷ್ಯಾ 22, ಫಿಲಿಪ್ಪೀನ್ಸ್ 3 (1 ಸಾವು), ಸಿಂಗಪುರ 90, ಥಾಯ್ಲೆಂಡ್ 37, ಯುಎಇ 9, ಯುನೈಟೆಡ್ ಕಿಂಗ್‌ಡಮ್ 13, ಅಮೆರಿಕ 53, ವಿಯೆಟ್ನಾಂ 16 ಪ್ರಕರಣಗಳು ಪತ್ತೆಯಾಗಿವೆ.

ಫ್ರಾನ್ಸ್ 12 (ಒಂದು ಸಾವು), ಹಾಂಕಾಂಗ್ 81 (2 ಸಾವು), ಇರಾನ್ 61 (14 ಸಾವು), ಇಟಲಿ 229 (7 ಸಾವು), ಜಪಾನ್ 840 (4 ಸಾವು-693 ಪ್ರಕರಣಗಳು ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಪತ್ತೆಯಾಗಿವೆ). ದಕ್ಷಿಣ ಕೊರಿಯಾ 893 (9 ಸಾವು), ತೈವಾನ್ 30 (1 ಸಾವು),

English summary
Coronavirus: 71 more deaths were reported in China by COVID-19 on Tuesday. Here is the detailed report on Coronavirus cases across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X