ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕಾನೂನು: ಮೊಬೈಲ್, ಟ್ಯಾಬ್ಲೆಟ್‌ಗಳಿಗೆ ಒಂದೇ ರೀತಿ ಚಾರ್ಜರ್

|
Google Oneindia Kannada News

ಯುರೋಪ್, ಅಕ್ಟೋಬರ್ 04: ಮೊಬೈಲ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ 2024ರ ಹೊತ್ತಿಗೆ ಯುಎಸ್‌ಬಿ C ಮಾದರಿ(ಟೈಪ್-ಸಿ) ಸಾಮಾನ್ಯ ಚಾರ್ಜರ್ ಆಗಿರಬೇಕು ಎಂಬ ಹೊಸ ಕಾನೂನನ್ನು ಯುರೋಪಿಯನ್ ಯೂನಿಯನ್ (ಯುರೋಪಿಯನ್ ಒಕ್ಕೂಟ) ಅಂಗೀಕರಿಸಿದೆ.

ಹೊಸ ಕಾನೂನಿನ ಪರವಾಗಿ 602 ಮತ, ವಿರುದ್ಧವಾಗಿ 13 ಮತ ಹಾಗೂ 8 ಸದಸ್ಯರು ಗೈರು ಹಾಜರಾಗಿದ್ದು, ಆ ಮೂಲಕ ಮಂಗಳವಾರ ಹೊಸ ಕಾನೂನಿಗೆ ಅಂಗೀಕಾರ ನೀಡಲಾಯಿತು. ಇದರಿಂದ ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ಹೆಚ್ಚು ಸಮರ್ಥನೀಯ ಆಯ್ಕೆಗಳನ್ನು ಆಯ್ದುಕೊಳ್ಳುವ ಗ್ರಾಹಕರಿಗೆ ಹೆಚ್ಚಿನ ಅವಕಾಶವನ್ನು ನೀಡುವ ಯುರೋಪಿಯನ್ ಒಕ್ಕೂಟದ ಭಾಗವಾಗಿದೆ.

ಬೆಂಗಳೂರಿನ ಈ ಮಾಲ್‌ನಲ್ಲಿವೆ 46 ಹೊಸ ಇವಿ ಚಾರ್ಜಿಂಗ್ ಪಾಯಿಂಟ್‌ಬೆಂಗಳೂರಿನ ಈ ಮಾಲ್‌ನಲ್ಲಿವೆ 46 ಹೊಸ ಇವಿ ಚಾರ್ಜಿಂಗ್ ಪಾಯಿಂಟ್‌

ಈ ಕ್ರಮದಿಂದ ಪರಿಸರ ಸ್ನೇಹಿ ನಿಯಮ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಪೋರ್ಟಬಲ್ ಸಾಧನಗಳಿಗೆ ಹೊಸ ಮಾನದಂಡವಾಗಿದೆ, ಉತ್ತಮ ಗುಣಮಟ್ಟದ ಚಾರ್ಜಿಂಗ್ ಮತ್ತು ದತ್ತಾಂಶ ವರ್ಗಾವಣೆಯ ಅವಕಾಶವನ್ನು ನೀಡುತ್ತದೆ.

ಈ ನಿಯಮ ಅಂಗೀಕಾರದ ಹಿಂದಿನ ಉದ್ದೇಶ

ಈ ನಿಯಮ ಅಂಗೀಕಾರದ ಹಿಂದಿನ ಉದ್ದೇಶ

ಹೊಸ ನಿಯಮಗಳ ಅಡಿಯಲ್ಲಿ, ಗ್ರಾಹಕರು ಹೊಸ ಸಾಧನವನ್ನು ಖರೀದಿಸಿದಾಗ ಪ್ರತಿ ಬಾರಿಯೂ ವಿಭಿನ್ನ ಚಾರ್ಜರ್ ಅಗತ್ಯವಿಲ್ಲ, ಏಕೆಂದರೆ ಅವರು ಸಣ್ಣ ಮತ್ತು ಮಧ್ಯಮ ಗಾತ್ರದ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳ ಸಂಪೂರ್ಣ ಶ್ರೇಣಿಗೆ ಒಂದೇ ಚಾರ್ಜರ್ ಅನ್ನು ಬಳಸಲು ಸಾಧ್ಯವಾಗುತ್ತದೆ.

 ಒಂದೇ ಮಾದರಿಯಲ್ಲಿ ಚಾರ್ಜಿಂಗ್ ಕೇಬಲ್

ಒಂದೇ ಮಾದರಿಯಲ್ಲಿ ಚಾರ್ಜಿಂಗ್ ಕೇಬಲ್

ಎಲ್ಲಾ ಹೊಸ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಹೆಡ್‌ಫೋನ್‌ಗಳು ಮತ್ತು ಹೆಡ್‌ಸೆಟ್‌ಗಳು, ಹ್ಯಾಂಡ್‌ಹೆಲ್ಡ್ ವೀಡಿಯೊಗೇಮ್ ಕನ್ಸೋಲ್‌ಗಳು ಮತ್ತು ಪೋರ್ಟಬಲ್ ಸ್ಪೀಕರ್‌ಗಳು, ಇ-ರೀಡರ್‌ಗಳು, ಕೀಬೋರ್ಡ್‌ಗಳು, ಮೈಸ್, ಪೋರ್ಟಬಲ್ ನ್ಯಾವಿಗೇಷನ್ ಸಿಸ್ಟಮ್‌ಗಳು, ಇಯರ್‌ಬಡ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಹಾಗೂ 100 ವ್ಯಾಟ್‌ಗಳವರೆಗೆ ಚಾರ್ಜಿಂಗ್ ಮಾಡುವ ಎಲ್ಲ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರಬೇಕು.

ಸಾಮಾನ್ಯ ವೇಗದಲ್ಲಿ ಎಲ್ಲವೂ ಚಾರ್ಜ್

ಸಾಮಾನ್ಯ ವೇಗದಲ್ಲಿ ಎಲ್ಲವೂ ಚಾರ್ಜ್

ಈ ರೀತಿಯ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಎಲ್ಲಾ ಸಾಧನಗಳು ಒಂದೇ ರೀತಿಯ ಚಾರ್ಜಿಂಗ್ ವೇಗವನ್ನು ಹೊಂದಿದ್ದು, ಯಾವುದೇ ಹೊಂದಾಣಿಕೆ ಚಾರ್ಜರ್‌ನೊಂದಿಗೆ ತಮ್ಮ ಸಾಧನಗಳನ್ನು ಅದೇ ವೇಗದಲ್ಲಿ ಚಾರ್ಜ್ ಮಾಡಲು ಬಳಕೆದಾರರಿಗೆ ಅವಕಾಶ ಸಿಗುತ್ತದೆ. ಯುರೋಪಿಯನ್ ಗ್ರಾಹಕರಿಗೆ ಎಲೆಕ್ಟ್ರಾನಿಕ್ ಸಾಧನಗಳ ದೊಡ್ಡ ಪೂರೈಕೆದಾರರಲ್ಲಿ ಆಪಲ್ ತನ್ನ ಸಾಧನಗಳಲ್ಲಿ ಲೈಟ್ನಿಂಗ್ ಕನೆಕ್ಟರ್ ಅನ್ನು ಬಳಸುವುದರಿಂದ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರಸ್ತಾಪವು ನಾವೀನ್ಯತೆಗೆ ಹಾನಿ ಮಾಡುತ್ತದೆ. ಎಲೆಕ್ಟ್ರಾನಿಕ್ಸ್ ತ್ಯಾಜ್ಯದ ಪ್ರಮಾಣವು ಭಾರೀ ಮಟ್ಟದಲ್ಲಿ ಸೃಷ್ಟಿ ಆಗುತ್ತದೆ ಎಂದು ಆಪಲ್ ಈ ಹಿಂದೆಯೇ ಎಚ್ಚರಿಸಿತ್ತು.

ಗ್ರಾಹಕರ ಉಳಿತಾಯ ಹೆಚ್ಚಿಸುವುದು ಒಂದು ಚಾರ್ಜರ್!

ಗ್ರಾಹಕರ ಉಳಿತಾಯ ಹೆಚ್ಚಿಸುವುದು ಒಂದು ಚಾರ್ಜರ್!

ಒಂದೇ ಚಾರ್ಜರ್ ಗ್ರಾಹಕರಿಗೆ ಸುಮಾರು 250 ಮಿಲಿಯನ್ ಯುರೋಗಳನ್ನು ($247.3 ಮಿಲಿಯನ್) ಉಳಿಸುತ್ತದೆ ಎಂದು ಯುರೋಪಿಯನ್ ಕಮಿಷನ್ ಅಂದಾಜಿಸಿದೆ.

2018 ರಲ್ಲಿ ಮೊಬೈಲ್ ಫೋನ್‌ಗಳೊಂದಿಗೆ ಮಾರಾಟವಾದ ಅರ್ಧದಷ್ಟು ಚಾರ್ಜರ್‌ಗಳು ಯುಎಸ್‌ಬಿ ಮೈಕ್ರೋ-ಬಿ ಕನೆಕ್ಟರ್ ಹೊಂದಿದ್ದರೆ, ಶೇ.29ರಷ್ಟು ಯುಎಸ್‌ಬಿ-ಸಿ ಕನೆಕ್ಟರ್ ಮತ್ತು ಶೇ.21ರಷ್ಟು ಲೈಟ್ನಿಂಗ್ ಕನೆಕ್ಟರ್ ಅನ್ನು ಹೊಂದಿದ್ದವು. ಇದನ್ನು ಆಪಲ್ ಬಳಸುತ್ತದೆ ಎಂದು 2019 ರ ಆಯೋಗದ ಅಧ್ಯಯನವು ತೋರಿಸಿದೆ.

English summary
Common charger for mobile phones, tablets by 2024: Here read about European Union new law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X