ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಬೋಡಿಯಾ ಈಗ ಸಂಪೂರ್ಣ ಕೋವಿಡ್ ಮುಕ್ತ ದೇಶ

|
Google Oneindia Kannada News

ನಾಮ್ ಪೆನ್ ಜೂನ್ 7: ಕಾಂಬೋಡಿಯಾ ಈಗ ಸಂಪೂರ್ಣ ಕೋವಿಡ್ ಮುಕ್ತ ದೇಶವಾಗಿದೆ. ದೇಶದ ಕೊನೆಯ ಕೊರೊನಾ ರೋಗಿ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಯಾದ ನಂತರ ಕಾಂಬೋಡಿಯಾ ದೇಶವನ್ನು ಸಂಪೂರ್ಣ ಕೋವಿಡ್ ಮುಕ್ತ ದೇಶ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಘೋಷಿಸಿದೆ.

ಕಳೆದ 31 ದಿನಗಳಿಂದ ಕಾಂಬೋಡಿಯಾದಲ್ಲಿ ಒಂದೇ ಒಂದು ಕೋವಿಡ್-19 ಪ್ರಕರಣ ಕೂಡ ಪತ್ತೆಯಾಗಿಲ್ಲ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಉತ್ತರ ಕೊರಿಯಾಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಯುಎಸ್ಉತ್ತರ ಕೊರಿಯಾಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಯುಎಸ್

2020 ರ ಜನವರಿಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಪತ್ತೆಯಾದ ನಂತರ ಇಲ್ಲಿಯವರೆಗೆ ಕಾಂಬೋಡಿಯಾದಲ್ಲಿ ಒಟ್ಟು 1,36,262, ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ 1,33,206 ಮಂದಿ ಗುಣಮುಖರಾಗಿದ್ದಾರೆ. ಕೊರೊನಾದಿಂದ 3,056 ನಾಗರಿಕರು ಮೃತಪಟ್ಟಿದ್ದಾರೆ.

Combodia Has Become COVID Free Now

"ಕಾಂಬೋಡಿಯಾ ಸರಕಾರದ ಸೂಕ್ತ ನಾಯಕತ್ವ ಮತ್ತು ಕೋವಿಡ್-19 ಲಸಿಕೆಗಳ ಪರಿಣಾಮದಿಂದ ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ,'' ಎಂದು ಕಾಂಬೋಡಿಯಾ ಆರೋಗ್ಯ ಸಚಿವಾಲಯದ ವಕ್ತಾರೆ ಓರ್ ವಂಡೈನ್ ಹೇಳಿದರು.

ಇಮ್ರಾನ್ ಖಾನ್‌ಗೆ ಸಮಸ್ಯೆಯಾದರೆ ಆತ್ಮಹುತಿ ದಾಳಿ: ಸಂಸದನ ಬೆದರಿಕೆಇಮ್ರಾನ್ ಖಾನ್‌ಗೆ ಸಮಸ್ಯೆಯಾದರೆ ಆತ್ಮಹುತಿ ದಾಳಿ: ಸಂಸದನ ಬೆದರಿಕೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಬೋಡಿಯಾ ಪ್ರಧಾನಿ ಹುನ್ ಸೇನ್ ಅವರು ದೇಶದಲ್ಲಿ ವಾಸಿಸುವ ಎಲ್ಲ ಕಾಂಬೋಡಿಯನ್ನರು ಮತ್ತು ವಿದೇಶಿಯರಿಗೆ ಉಚಿತ ಕೋವಿಡ್-19 ಲಸಿಕೆಗಳನ್ನು ನೀಡಲು ಸರಿಯಾದ ಮತ್ತು ಸಮಯೋಚಿತ ನಿರ್ಧಾರವನ್ನು ತಾಳಿದ್ದಾರೆ. ಕೋವಿಡ್-19 ವಿರುದ್ಧ ಜೀವಗಳನ್ನು ರಕ್ಷಿಸಲು ಲಸಿಕೆ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಇದು ಸೋಂಕು ಹರಡುವುದು ಮತ್ತು ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ,'' ಎಂದರು.

ಕಾಂಬೋಡಿಯಾದಲ್ಲಿ ಸುಮಾರು 16 ಮಿಲಿಯನ್ ಜನಸಂಖ್ಯೆ ಇದೆ. ಈ ಪೈಕಿ 15 ಮಿಲಿಯನ್ ಜನರು ಅಥವಾ ಶೇಖಡ 94 ಪ್ರತಿಶತದಷ್ಟು ಜನರು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. 14.3 ಮಿಲಿಯನ್ ಜನರು ಅಥವಾ ಶೇಖಡ 89.4 ಪ್ರತಿಶತದಷ್ಟು ಜನರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ.

Combodia Has Become COVID Free Now

ಅಲ್ಲದೇ 9.25 ಮಿಲಿಯನ್ ಜನರು ಅಥವಾ ಶೇಖಡ 58 ಪ್ರತಿಶತದಷ್ಟು ಜನರು ಮೂರನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. 2.58 ಮಿಲಿಯನ್ ಜನರು ಅಥವಾ ಶೇಖಡ 16 ಪ್ರತಿಶತದಷ್ಟು ಜನರು ನಾಲ್ಕನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಜತೆಗೆ ಕಾಂಬೋಡಿಯಾದಲ್ಲಿ ಕಳೆದ ಗುರುವಾರದಿಂದ ಆದ್ಯತೆಯ ಗುಂಪುಗಳಿಗೆ ಐದನೇ ಡೋಸ್ ಕೋವಿಡ್ ಲಸಿಕೆ ನೀಡಲು ಅಲ್ಲಿನ ಸರಕಾರ ಪ್ರಾರಂಭಿಸಿದೆ.

ಕೊರೊನಾ ಪ್ರಕರಣಗಳು ತಗ್ಗಿರುವ ಹಿನ್ನೆಲೆಯಲ್ಲಿ ಕಾಂಬೋಡಿಯಾದಲ್ಲಿ ಎಲ್ಲಾ ಸಾಮಾಜಿಕ, ಆರ್ಥಿಕ ಚುಟುವಟಿಕೆಗಳು ಪುನರಾರಂಭವಾಗಿದೆ. ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಅಲ್ಲದೇ ಕಳೆದ ನವೆಂಬರ್ ನಿಂದ ಕೋವಿಡ್ ಲಸಿಕೆ ಪಡೆದ ವಿದೇಶಿ ಪ್ರವಾಸಿಗರಿಗೆ ಕಾಂಬೋಡಿಯಾಗೆ ಮುಕ್ತ ಅವಕಾಶವನ್ನು ಅಲ್ಲಿನ ಸರಕಾರ ಕಲ್ಪಿಸಿದೆ.

English summary
Combodia has become covid free now after last patient recovered on june 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X