ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ್ಲಿನ್ ನಲ್ಲಿ ಲಂಗ ದಾವಣಿ ತೊಟ್ಟ ಜರ್ಮನ್ ಬೆಡಗಿಯರು

By Nayana
|
Google Oneindia Kannada News

ಬರ್ಲಿನ್, ಮೇ 22: ಭಾರತದ ಕೆಲವು ರಾಜ್ಯಗಳಲ್ಲಿ ನಡೆಯುವ ಜಾತ್ರೆಯಂತೆ ಬರ್ಲಿನ್‌ನಲ್ಲಿ ಕೂಡ ಕಲ್ಚರ್ ಕಾರ್ನಿವಲ್ ಎನ್ನುವ ಜಾತ್ರೆಯಂತೆನಿಸುವ ವಿಶೇಷ ಹಬ್ಬವನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಪ್ರತಿ ವರ್ಷ ವಸಂತ ಋತುವಿನಲ್ಲಿ ಬರ್ಲಿನ್‌ನಲ್ಲಿ ಕಾರ್ನಿವಲ್ ಆಫ್‌ ಕಲ್ಚರ್‌ ಹಬ್ಬ ನಡೆಯುತ್ತದೆ. ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಹಬ್ಬ ಸೋಮವಾರ ಅಂತ್ಯಗೊಂಡಿದೆ. ಭಾರತೀಯರಂತೆ ಲಂಗ ದವಣಿ ತೊಟ್ಟು ಬರ್ಲಿನ್ ಬೆಡಗಿಯರು ಕಾಣಿಸಿಕೊಂಡಿದ್ದು ತುಂಬಾ ವಿಶೇಷವಾಗಿತ್ತು. ಇಡೀ ರಸ್ತೆಯ ತುಂಬೆಲ್ಲಾ ಮೆರವಣಿಗೆ ಮಾಡಿಕೊಂಡು, ನೃತ್ಯ ಮಾಡುತ್ತಾ ಇಡೀ ಬೀದಿಯನ್ನೇ ಬಣ್ಣಯುಕ್ತವನ್ನಾಗಿ ಮಾಡಿದ್ದರು.

ಧೂಳು ಮಿಶ್ರಿತ ಬಿರುಗಾಳಿ ಉತ್ತರ ಭಾರತ ತತ್ತರ! ಸ್ಥಿತಿ ಹೇಗಿದೆ? ಧೂಳು ಮಿಶ್ರಿತ ಬಿರುಗಾಳಿ ಉತ್ತರ ಭಾರತ ತತ್ತರ! ಸ್ಥಿತಿ ಹೇಗಿದೆ?

ಪ್ರತಿ ವರ್ಷ ವಸಂತ ಋತುವಿನಲ್ಲಿ ಈ ಹಬ್ಬ ನಡೆಸಲಾಗುತ್ತದೆ. ಬರ್ಲಿನ್ ನ ಸಂಸ್ಕೃತಿಯನ್ನು ಸಾರುವ ಹಬ್ಬ ಇದಾಗಿದೆ. ಈ ಹಬ್ಬದಂದು ಬರ್ಲಿನ್‌ನ ಪ್ರಜೆಗಳ ತಮ್ಮ ಸಾಂಸ್ಕೃತಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಭಾನುವಾರ ಬರ್ಲಿನ್‌ನ ಕ್ರ್ಯೂಸ್‌ಬರ್ಗ್ ಸಾಂಸ್ಕೃತಿಕ ಉಡುಗೆಯೊಂದಿಗೆ ಸಾವಿರಾರು ನೃತ್ಯಗಾರರು ನೃತ್ಯ ಮಾಡುತ್ತಾ ಸಾಗಿದರು. ವಿಶ್ವದಾದ್ಯಂತ ಇರುವ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಈ ನಾಲ್ಕು ದಿನ ನಡೆಯುವ ಹಬ್ಬದಲ್ಲಿ 300 ಕ್ಕೂ ಹೆಚ್ಚು ಆಕರ್ಷಕ ವಸ್ತುಗಳ ಮಳಿಗೆಯೂ ನಿರ್ಮಾಣಗೊಂಡಿತ್ತು.

ಬರ್ಲಿನ್‌ನ ಕಲ್ಚರಲ್ ಕಾರ್ನಿವಲ್ ನಲ್ಲಿ ಮಿಂಚಿದ ಬೆಡಗಿಯರು

ಬರ್ಲಿನ್‌ನ ಕಲ್ಚರಲ್ ಕಾರ್ನಿವಲ್ ನಲ್ಲಿ ಮಿಂಚಿದ ಬೆಡಗಿಯರು

ಜೆರ್ಮನಿಯ ಬರ್ಲಿನ್‌ನಲ್ಲಿ ಸೋಮವಾರ ನಡೆದ ಕಲ್ಚರ್ ಕಾರ್ನಿವಲ್ ಹಬ್ಬದಲ್ಲಿ ಅಲ್ಲಿನ ಸ್ಥಳೀಯರು ಲಂಗ ದಾವಣಿ ತೊಟ್ಟು ರಸ್ತೆಯಲ್ಲಿ ನೃತ್ಯ ಮಾಡುತ್ತಾ ಸಾಗಿದ್ದು ವಿಶೇಷವಾಗಿತ್ತು. ಅಲ್ಲಿಯ ವಿಶೇಷತೆಯನ್ನು ಸಾರುವ ಹಲವು ಕಾರ್ಯಕ್ರಮಗಳು ಕೂಡ ನಡೆದವು.

ಗೊಂಬೆಯಂತೆ ಕಂಡ ಬರ್ಲಿನ್ ಯುವತಿಯರು

ಗೊಂಬೆಯಂತೆ ಕಂಡ ಬರ್ಲಿನ್ ಯುವತಿಯರು

ಪ್ರತಿ ವರ್ಷ ವಸಂತ ಋತುವಿನಲ್ಲಿ ಬರ್ಲಿನ್‌ನಲ್ಲಿ ನಡೆಯುವ ಕಲ್ಚರ್ ಕಾರ್ನಿವಲ್ ಈ ಬಾರಿಯೂ ಕೂಡ ವಿಶೇಷವಾಗಿತ್ತು. ಬರ್ಲಿನ್ ಯುವತಿಯರು ಬಿಳಿಯ ಫ್ರಾಕ್‌ ಗಳನ್ನು ಧರಿಸಿ ಅಲ್ಲಿನ ಸಂಪ್ರದಾಯದಂತೆ ಹಾಡಿಗೆ ಹೆಜ್ಜೆ ಹಾಕಿದರು.

ಡರ್ಟಿ ಪಿಗ್ ಹಬ್ಬ ಹೀಗಿರುತ್ತೆ ನೋಡಿ

ಡರ್ಟಿ ಪಿಗ್ ಹಬ್ಬ ಹೀಗಿರುತ್ತೆ ನೋಡಿ

ಜೆರ್ಮನಿಯ ಹೇರಿಸ್‌ಡಾರ್ಫ್‌ನಲ್ಲಿ ಸೋಮವಾರ ನಡೆದ ಡರ್ಟಿ ಪಿಗ್ ಹಬ್ಬದಲ್ಲಿ ಯುವಕರು ಅಲ್ಲಿನ ಸಂಪ್ರದಾಯದಂತೆ ಕೆಸರಿನಲ್ಲಿ ಮುಳುಗೆದ್ದರು. ಒಬ್ಬಿಗೊಬ್ಬರು ಕೆಸರೆರೆಚಿಕೊಂಡು ಸಂತಸ ಪಡುತ್ತಿರುವ ದೃಶ್ಯವನ್ನು ನೋಡಬಹುದು.

ಪುಷ್ಪ ಪ್ರದರ್ಶನದಲ್ಲಿ ಭರತನಾಟ್ಯ

ಪುಷ್ಪ ಪ್ರದರ್ಶನದಲ್ಲಿ ಭರತನಾಟ್ಯ

ಲಂಡನ್‌ ಶಾಲೆಯೊಂದರಲ್ಲಿ ರಾಯಲ್ ಹಾರ್ಟಿಕಲ್ಚರ್ ಸೊಸೈಟಿ ಆಯೋಜಿಸಿದ್ದ ಪುಷ್ಪ ಪ್ರದರ್ಶನದ ವೇಳೆ 10-13 ವರ್ಷದ ವಿದ್ಯಾರ್ಥಿಗಳು ಭಾರತದ ಸಂಪ್ರದಾಯ ಎತ್ತಿ ಹಿಡಿಯುವ ಭರತನಾಟ್ಯವನ್ನು ಪ್ರದರ್ಶಿಸಿದರು.

ಇರಾನ್ ಅಣು ಒಪ್ಪಂದ ರದ್ದುಪಡಿಸಿದ ಅಮೇರಿಕ ನಿಲುವು ಚರ್ಚೆ

ಇರಾನ್ ಅಣು ಒಪ್ಪಂದ ರದ್ದುಪಡಿಸಿದ ಅಮೇರಿಕ ನಿಲುವು ಚರ್ಚೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ರಷ್ಯಾದ ಕಪ್ಪು ಸಮುದ್ರದ ಕರಾವಳಿ ತೀರದ ನಗರಿ ಸೋಚಿಯಲ್ಲಿ ಸೋಮವಾರ ಭೇಟಿ ಮಾಡಿದರು. ಇರಾನ್ ನ್ಯೂಕ್ಲಿಯರ್ ಡೀಲ್‌ ರದ್ದುಪಡಿಸಿದ ಅಮೇರಿಕಾದ ನಿರ್ಧಾರ ಸೇರಿದಂತೆ ಹಲವು ಪ್ರಾದೇಶಿಕ ಹಾಗೂ ಜಾಗತಿಕ ಮಹತ್ತರ ವಿಷಯಗಳ ಕುರಿತು ಸೋಚಿ ಸಮ್ಮೇಳನದ ವೇಳೆ ಮೋದಿ ಮತ್ತು ಪುಟಿನ್ ಚರ್ಚಿಸಿದರು.

ಮೋದಿ ಹಿಟ್ಲರ್, ಅಮಿತ್ ಶಾ ಗೂಬೆಲ್ಸ್: ಸಿದ್ದರಾಮಯ್ಯ ಕಿಡಿಮೋದಿ ಹಿಟ್ಲರ್, ಅಮಿತ್ ಶಾ ಗೂಬೆಲ್ಸ್: ಸಿದ್ದರಾಮಯ್ಯ ಕಿಡಿ

English summary
Thousands of dancers have taken part in the street parade on Pentecost on May 21, in Berlin, Germany where they performed, with about half a million people from all over the world watching the Carnival of Cultures. For four days, professional artists and amateurs, as well as people from all over the world, participated in the enchanting spectacle containing traditional and contemporary cultural elements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X