• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಲಂಕಾ ಸ್ಫೋಟ: ಚರ್ಚ್ ದಾಳಿಗೂ ಮೊದಲು ಉಗ್ರನನ್ನು ಪ್ರಶ್ನಿಸಿದ್ದ ಪಾದ್ರಿ

|

ಕೋಲಂಬೋ, ಏಪ್ರಿಲ್ 22: ಅಪರಿಚಿತ ಮುಖ ಕಂಡಾಗ ಪಾದ್ರಿ ಅವರಲ್ಲಿ ಸಣ್ಣ ಅನುಮಾನ ವ್ಯಕ್ತವಾಗಿತ್ತು. ಆದರೆ, ಪ್ರಾರ್ಥನೆಗೆ ತಡವಾಗುತ್ತದೆ ಎಂದು ಅವಸರ ಮಾಡಿದ್ದರಿಂದ ಅಲ್ಲಿಂದ ಹೊರಟರು. ಕೆಲ ನಿಮಿಷದಲ್ಲಿಯೇ ಭಾರಿ ಸ್ಫೋಟದ ಸದ್ದು ಕೇಳಿಬಂತು. ಪಾದ್ರಿ ಅಲ್ಲಿ ಹೋಗಿ ನೋಡಿದರೆ ಆ ಜಾಗದಲ್ಲಿ ಕಂಡಿದ್ದು, ಛಿದ್ರ ಛಿದ್ರವಾಗಿ ಬಿದ್ದಿದ್ದ ದೇಹಗಳು, ಹರಿಯುತ್ತಿದ್ದ ನೆತ್ತರ ಕೋಡಿ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಟ್ಟಿಕಲೋವಾದಲ್ಲಿರುವ ಜಿಯಾನ್ ಚರ್ಚ್‌ನ ಪಾದ್ರಿ ಕುಮಾರನ್ ಅವರು ಬಾಗಿಲಿನ ಮೆಟ್ಟಿಲ ಬಳಿಯೇ ಅಪರಿಚಿತನನ್ನು ಗಮನಿಸಿ ತಡೆದಿದ್ದರು.

ಒಂದು ಚೀಲ ಹೊತ್ತುಕೊಂಡು ಸಾಮಾನ್ಯ ದಿರಿಸು ತೊಟ್ಟಿದ್ದ ಆತ ವ್ಯಕ್ತಿಯನ್ನು ಕಂಡಾಗ ಅವರಿಗೆ ಅಸಹಜ ಎನಿಸಿತ್ತು. ಆಗ ಭಾನುವಾರ ಬೆಳಿಗ್ಗೆ 8.30ರ ಸಮಯ. ಸ್ಥಳೀಯ ನಿವಾಸಿಗಳು ಈಸ್ಟರ್ ಹಬ್ಬದ ಪ್ರಯುಕ್ತ ಪ್ರಾರ್ಥನೆಗೆಂದು ಚರ್ಚ್‌ನಲ್ಲಿ ಸೇರಿಕೊಂಡಿದ್ದರು.

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವು

'ನೀನು ಯಾರು? ನಿನ್ನ ಹೆಸರೇನು? ಎಂದು ನಾನು ಆತನನ್ನು ಕೇಳಿದ್ದೆ. ಆತ ನಾನು ಮುಸ್ಲಿಮನಾಗಿದ್ದು ಚರ್ಚ್ ನೋಡಲು ಬಂದಿದ್ದೇನೆ' ಎಂದು ಪ್ರತಿಕ್ರಿಯೆ ನೀಡಿದ್ದಾಗಿ ಕುಮಾರನ್ ತಿಳಿಸಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಎಲ್ಲೆಡೆ ರಕ್ತ, ಛಿದ್ರ ದೇಹ

ಆ ಶಂಕಿತ ಆತ್ಮಾಹುತಿ ಬಾಂಬರ್ ಜತೆ ವಾದ ನಡೆಸುವ ಸಂದರ್ಭದಲ್ಲಿಯೇ ಇತರೆ ಕೆಲವು ಪಾದ್ರಿಗಳು ಸಾಮೂಹಿಕ ಪ್ರಾರ್ಥನೆಗೆ ತಡವಾಗುತ್ತಿದೆ ಎಂದು ಕುಮಾರನ್ ಅವರನ್ನು ಕರೆದರು. ಕುಮಾರನ್ ಅವರು ಪೋಡಿಯಂ ಕಡೆಗೆ ನಡೆದುಕೊಂಡು ಹೋಗುತ್ತಿರುವಂತೆಯೇ ಭಾರಿ ಸ್ಫೋಟದ ಸದ್ದು ಕಿವಿಗಳಿಗೆ ಅಪ್ಪಳಿಸಿತು. ಅಘಾತಗೊಂಡು ಹಿಂದಕ್ಕೆ ತಿರುಗಿ ನೋಡಿದಾಗ ಹೃದಯವೇ ಒಡೆದಂತಾಗಿತ್ತು. ಗೋಡೆಯ ಮೇಲೆಲ್ಲಾ ರಕ್ತ ಸಿಡಿದಿತ್ತು. ದೇಹಗಳು ಅಡ್ಡಾದಿಡ್ಡಿಯಾಗಿ ಬಿದ್ದದ್ದವು. ಚರ್ಚ್‌ನ ಮೊದಲ ಮಹಡಿಯಲ್ಲಿ ಆಗಷ್ಟೇ ಭಾನುವಾರದ ತರಗತಿ ಮುಗಿಸಿ ಬಂದಿದ್ದ ಮಕ್ಕಳೇ ಹೆಚ್ಚಿದ್ದರು.

ಘಟನೆಯಲ್ಲಿ 28 ಮಂದಿ ಸತ್ತಿದ್ದರು. ಅವರಲ್ಲಿ 12 ಮಂದಿ ಮಕ್ಕಳು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಮಾರನ್ ವಿವರಿಸಿದ್ದಾರೆ.

ಏಳು ಮಂದಿ ಜೆಡಿಎಸ್ ಮುಖಂಡರು ಶ್ರೀಲಂಕಾದಲ್ಲಿ ನಾಪತ್ತೆ ?

ಮಕ್ಕಳ ದೇಹ ನೋಡಲು ಸಾಧ್ಯವಾಗುತ್ತಿರಲಿಲ್ಲ

'ಈ ಹಿಂದೆ ಬಾಂಬ್ ಸ್ಫೋಟದ ಸದ್ದು ಕೇಳಿರಲಿಲ್ಲ. ಹೀಗಾಗಿ ಟೈರ್ ಸ್ಫೋಟಗೊಂಡಿರಬೇಕು ಎಂದು ತಿಳಿದಿದ್ದೆವು. ಅದು ಸ್ಫೋಟದ ಸದ್ದು ಎಂಬುದು ಅರಿವಾಗುವ ವೇಳೆಗೆ ಅಗ್ನಿಶಾಮಕ ದಳ ಮತ್ತು ಆಂಬುಲೆನ್ಸ್‌ಗಳ ಶಬ್ಧ ಕೇಳಿಸತೊಡಗಿತು. ಅಲ್ಲಿನ ದೃಶ್ಯ ಭಯಾನಕವಾಗಿತ್ತು. ಅಲ್ಲಿ ರಕ್ತ ಮತ್ತು ದೇಹಗಳು ಎಲ್ಲ ಕಡೆ ಹರಡಿ ಬಿದ್ದಿದ್ದವು. ಮಕ್ಕಳ ದೇಹಗಳನ್ನು ನೋಡಿದಾಗ ಕರಳು ಕಿವುಚಿದಂತೆ ಆಗುತ್ತಿತ್ತು' ಎಂದು ಚರ್ಚ್‌ನಿಂದ ಮೂರು ಕಿ.ಮೀ. ದೂರವಿರುವ ಕಲ್ಲಾಡಿಯ ನಿವಾಸಿ ಎಸ್. ವಿಕಾಶ್ ತಿಳಿಸಿದ್ದಾರೆ.

ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ

ಏಕೈಕ ಮಗನ ಸಾವು

ಎಂಟನೇ ತರಗತಿ ಓದುತ್ತಿದ್ದ 13 ವರ್ಷದ ಮಗ ವಿ. ಜಾಕ್ಸನ್‌ನನ್ನು ಕಳೆದುಕೊಂಡ ದುಃಖದಲ್ಲಿದ್ದರು ಟ್ಯಾಕ್ಸಿ ಚಾಲಕ ಅರಸರತ್ನಂ ವರ್ಲ್. ಭಾನುವಾರದ ತರಗತಿ ಮುಗಿಸಿ ಚರ್ಚ್ ಬಾಗಿಲಿನ ಸಮೀಪ ನಿಂತಿದ್ದ ಆತ ಸ್ಫೋಟಕ್ಕೆ ಬಲಿಯಾಗಿದ್ದ. ಏಕೈಕ ಮಗನನ್ನು ಮಾತ್ರವಲ್ಲ, ವರ್ಲ್ ಅವರು ಅವರ ಹಿರಿಯಕ್ಕನನ್ನೂ ಕಳೆದುಕೊಂಡಿದ್ದರು. ಅವರ ಇಬ್ಬರು ಕಿರಿಯ ಸಹೋದರಿಯರು ಮತ್ತು ಮೈದುನನ ಸ್ಥಿತಿ ಗಂಭೀರವಾಗಿದೆ. ಜತೆಗೆ ಅವರ ಸ್ನೇಹಿತ ರಮೇಶ್ ಕೂಡ ಬಲಿಯಾಗಿದ್ದರು.

ಶ್ರೀಲಂಕಾ ಸ್ಫೋಟ: 7 ಮಂದಿ ಶಂಕಿತರ ಬಂಧನ, ಸಂಜೆಯಿಂದ ಕರ್ಫ್ಯೂ ಜಾರಿ

ಉಗ್ರನನ್ನು ವಿಚಾರಿಸಿದ್ದ ರಮೇಶ್

'ಆ ಬಾಂಬರ್‌ನನ್ನು ರಮೇಶ್ ಪ್ರಶ್ನಿಸಿದ್ದ. ಆತನ ಹೆಸರು, ವಿಳಾಸ ಎಲ್ಲ ಕೇಳಿದ್ದ. ಬಳಿಕ ಆತನನ್ನು ಚರ್ಚ್‌ನ ಬಾಗಿಲಿನಿಂದ ಹೊರಕ್ಕೆ ತಳ್ಳಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಆ ವ್ಯಕ್ತಿ ತನ್ನನ್ನು ಸ್ಫೋಟಿಸಿಕೊಂಡ' ಎಂದು ವರ್ಲ್ ವಿವರಿಸಿದ್ದಾರೆ.

ಪ್ರಾರ್ಥನೆಗೆಂದು ತೆರಳಿದ್ದ ಎಸ್. ರಮ್ಯಾ, ನೀರು ಕುಡಿಯುವ ಸಲುವಾಗಿ ಚರ್ಚ್‌ನಿಂದ ಆಗಷ್ಟೇ ಹೊರಗೆ ಹೊರಟಿದ್ದರು. ಸ್ಫೋಟದ ತೀವ್ರತೆಗೆ ಅವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

English summary
Pastor of Zion Church in Batticaloa Fr Kumaran said that, he saw a stranger in doostep of the church when the church was packed with members of the Easter congregation and qustioned him who he was and his name, The Times of India reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X