ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಮಂದಿ ಜೆಡಿಎಸ್ ಮುಖಂಡರು ಶ್ರೀಲಂಕಾದಲ್ಲಿ ನಾಪತ್ತೆ ?

|
Google Oneindia Kannada News

ಕೋಲಂಬೋ, ಏಪ್ರಿಲ್ 22: ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿಸಿ ಶ್ರೀಲಂಕಾಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಏಳು ಮಂದಿ ಜೆಡಿಎಸ್ ಮುಖಂಡರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಈ ಏಳು ಮಂದಿ ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಅದರಲ್ಲಿಯೂ ಈ ಏಳೂ ಮಂದಿ ಬಾಂಬ್ ದಾಳಿ ನಡೆದ ಶ್ಯಾಂಗ್ರಿಲಾ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದು ಕಳವಳ ಹೆಚ್ಚಲು ಕಾರಣವಾಗಿದೆ.

ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ

ಮೃತರೆಲ್ಲರೂ ಬೆಂಗಳೂರು ಮತ್ತು ಸುತ್ತಮುತ್ತಲಿನ ನಿವಾಸಿಗಳಾಗಿದ್ದಾರೆ. ಇವರು ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ನಡೆಸಿ ಮತದಾನ ಮಾಡಿ ಏಪ್ರಿಲ್ 20ರಂದು ಶ್ರೀಲಂಕಾಕ್ಕೆ ತೆರಳಿದ್ದರು ಎನ್ನಲಾಗಿದೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

colombo bomb blast 7 jds leaders missing from karnataka

ನೆಲಮಂಗಲ ಶಿವಣ್ಣ, ಮುನಿಯಪ್ಪ, ಲಕ್ಷ್ಮೀನಾರಾಯಣ, ಬೆಂಗಳೂರಿನ ಹನುಮಂತರಾಯಪ್ಪ, ತುಮಕೂರಿನ ರಮೇಶ್, ಬೆಂಗಳೂರು ಉತ್ತರ ತಾಲ್ಲೂಕಿನ ನಿವಾಸಿ ಮಾರೇಗೌಡ, ಪುಟ್ಟರಾಜು ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಶ್ರೀಲಂಕಾ ಸ್ಫೋಟ: 7 ಮಂದಿ ಶಂಕಿತರ ಬಂಧನ, ಸಂಜೆಯಿಂದ ಕರ್ಫ್ಯೂ ಜಾರಿಶ್ರೀಲಂಕಾ ಸ್ಫೋಟ: 7 ಮಂದಿ ಶಂಕಿತರ ಬಂಧನ, ಸಂಜೆಯಿಂದ ಕರ್ಫ್ಯೂ ಜಾರಿ

ಈ ಪ್ರವಾಸಿಗರು ಶ್ಯಾಂಗ್ರಿಲಾ ಹೋಟೆಲ್ ತಲುಪಿದ ಬಳಿಕ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ, ಅಲ್ಲಿಂದ ಇದುವರೆಗೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

English summary
Seven JDS leaders were missing since bomb blast attack in Shangri la hotel In Colombo, Srilanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X