ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಅಲ್ಲ: ಹೊಸ ಕಿಡಿ ಹೊತ್ತಿಸಿತು ಚೀನಾದ ಅದೊಂದು ಮಾತು!

|
Google Oneindia Kannada News

ಬೀಜಿಂಗ್, ಮೇ.25: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಮೂಲವಾಗಿರುವ ಚೀನಾ ವಿರುದ್ಧ ಅಮೆರಿಕಾ ಕಾದು ಕೆಂಡವಾಗಿದೆ. ಪೊಲಿಟಿಕಲ್ ವೈರಸ್ ಮೂಲಕ ಪ್ರಾಬಲ್ಯ ಸಾಧಿಸಲು ಚೀನಾ ಹವಣಿಸುತ್ತಿದೆ ಎಂದು ಅಮೆರಿಕಾ ದೂಷಿಸುತ್ತಿದೆ.

Recommended Video

ಟಿಕ್‌ಟಾಕ್ ಬ್ಯಾನ್ ಮಾಡಿ , ಮಿತ್ರೋ ಆಪ್ ಬಳಸಿ , ಏನಿದು ಸ್ಟೋರಿ | Oneindia Kannada

ಚೀನಾದ ಒಂದು ಭಾಗವೇ ಆಗಿರುವ ಹಾಂಗ್-ಕಾಂಗ್ ಮತ್ತು ಚೀನಾ ನಡುವಿನ ಸಂಬಂಧ ಹಳಸಿದೆ. ಎರಡು ರಾಷ್ಟ್ರಗಳ ನಡುವಿನ ಶೀತಲ ಸಮರದ ಲಾಭ ಪಡೆಯಲು ಅಮೆರಿಕಾ ಸ್ಕೆಚ್ ಹಾಕಿದಂತೆ ತೋರುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಹಾಂಗ್ ಕಾಂಗ್ ಗೆ ಬೆನ್ನೆಲುಬಾಗಿ ನಿಂತಿದೆ.

ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?

ಮೇ.24ರಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅಮೆರಿಕಾ ವಿರುದ್ಧ ಕಿಡಿ ಕಾರಿದ್ದರು. ದೈತ್ಯ ರಾಷ್ಟ್ರಗಳು ಚೀನಾವನ್ನು ದೂಷಿಸುವುದು ಬಿಟ್ಟು ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಕರೆ ಕೊಟ್ಟಿದ್ದರು. ಇದರ ಮಧ್ಯೆ ಪೊಲಿಟಿಕಲ್ ವೈರಸ್ ಎಂಬ ಒಂದೇ ಒಂದು ಮಾತು ಹೊಸ ಕಿಡಿಯನ್ನು ಹೊತ್ತಿಸಿದೆ.

ಚೀನಾದ ಆಂತರಿಕ ಸಮಸ್ಯೆ ಎಂದಿದ್ದ ವಾಂಗ್ ಯಿ

ಚೀನಾದ ಆಂತರಿಕ ಸಮಸ್ಯೆ ಎಂದಿದ್ದ ವಾಂಗ್ ಯಿ

ರಾಷ್ಟ್ರೀಯ ಭದ್ರತಾ ಶಾಸನದ ಬಗ್ಗೆ ಉಲ್ಲೇಖಿಸಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಹಾಂಗ್-ಕಾಂಗ್ ಬಗ್ಗೆ ಮಾತನಾಡಿದ್ದರು. ಹಾಂಗ್-ಕಾಂಗ್ ಮತ್ತು ಚೀನಾ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಈ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುವುದಾಗಿ ಹೇಳಿತ್ತು. ಮೂರನೇ ವ್ಯಕ್ತಿ ಇದರಲ್ಲಿ ಮಧ್ಯಪ್ರವೇಶಿಸುವುದನ್ನು ಸಹಿಸಲು ಆಗುವುದಿಲ್ಲ ಎಂದು ವಾಂಗ್ ಯಿ ಕಿಡಿ ಕಾರಿದ್ದರು.

ಪ್ರಜಾಪ್ರಭುತ್ವ ಪರ ಜೂನ್ ತಿಂಗಳಿನಿಂದಲೇ ಪ್ರತಿಭಟನೆ

ಪ್ರಜಾಪ್ರಭುತ್ವ ಪರ ಜೂನ್ ತಿಂಗಳಿನಿಂದಲೇ ಪ್ರತಿಭಟನೆ

ಕಳೆದ ಜೂನ್ ನಲ್ಲಿ ಹಾಂಗ್-ಕಾಂಗ್ ನಲ್ಲಿ ನಡೆದ ಪ್ರಜಾಪ್ರಭುತ್ವದ ಹೋರಾಟ ಹಿಂಸಾತ್ಮಕ ರೂಪ ಪಡೆದುಕೊಂಡಿತು. ನಂತರದಲ್ಲಿ ಹೊಸ ಶಾಸಕಾಂಗದ ಜೊತೆಗೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು ಎಂದು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ವೈಸ್ ಪ್ರೆಸಿಡೆಂಟ್ ತಿಳಿಸಿದ್ದಾರೆ.

ಹಾಂಗ್-ಕಾಂಗ್ ನಲ್ಲಿ ಮತ್ತೆ ಮುಂದುವರಿದ ಹೋರಾಟ

ಹಾಂಗ್-ಕಾಂಗ್ ನಲ್ಲಿ ಮತ್ತೆ ಮುಂದುವರಿದ ಹೋರಾಟ

ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಭಾನುವಾರ ಸಾವಿರಾರು ಜನರು ಪ್ರತಿಭಟನೆಗೆ ಇಳಿದರು. ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಈ ಸಂಬಂಧ ತೈವಾನ್ ಅಧ್ಯಕ್ಷೆ ಸೈ-ಇಂಗ್-ವೆನ್, ಹಾಂಗ್-ಕಾಂಗ್ ಪ್ರಜೆಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹಾಂಗ್-ಕಾಂಗ್ ಸ್ವಾತಂತ್ರ್ಯ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಬೇಡಿಕೆಗೆ ತೈವಾನ್ ಸಾಥ್ ಕೊಡಲಿದೆ ಎಂದು ತಿಳಿಸಿದ್ದಾರೆ.

ತೈವಾನ್ ಸ್ವಾತಂತ್ರ್ಯ ರಾಷ್ಟ್ರ ಎಂದ ಸೈ-ಇಂಗ್-ವೆನ್

ತೈವಾನ್ ಸ್ವಾತಂತ್ರ್ಯ ರಾಷ್ಟ್ರ ಎಂದ ಸೈ-ಇಂಗ್-ವೆನ್

ಹಾಂಗ್-ಕಾಂಗ್ ನಂತೆ ತೈವಾನ್ ನನ್ನೂ ಕೂಡಾ ಚೀನಾದ ಒಂದು ಭಾಗ ಎಂದು ಭಾವಿಸಲಾಗಿತ್ತು. ಆದರೆ ಇಂದು ತೈವಾನ್ ಒಂದು ಸ್ವಾತಂತ್ರ್ಯ ರಾಷ್ಟವಾಗಿದೆ. ತೈವಾನ್ ಅಧ್ಯಕ್ಷೆ ಸೈ-ಇಂಗ್-ವೆನ್ ರನ್ನು ಚೀನಾ ಒಬ್ಬ ಪ್ರತ್ಯೇಕವಾದಿ ಎಂದು ಕರೆಯುತ್ತಿದೆ. ಅದೇನೇ ಇದ್ದರೂ ತೈವಾನ್, ಚೀನಾದ ಕಪಿಮುಷ್ಟಿಯಿಂದ ಪಾರಾಗಿ ಸ್ವಾತಂತ್ರ್ಯ ರಾಷ್ಟ್ರ ಎನಿಸಿದೆ. ಇದರ ಮಧ್ಯೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಆಡಿದ ಮಾತುಗಳು ಅಮೆರಿಕಾವನ್ನೂ ಕೆರಳಿಸಿದೆ.

ಚೀನಾ-ಅಮೆರಿಕಾ ನಡುವಿನ ಸಂಬಂಧ ಹಳಸಿತಾ?

ಚೀನಾ-ಅಮೆರಿಕಾ ನಡುವಿನ ಸಂಬಂಧ ಹಳಸಿತಾ?

ಕಳೆದ ನವೆಂಬರ್ ನಲ್ಲಿ ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕಿದ್ದಾರೆ. ವಿಶ್ವ ಹಣಕಾಸಿನ ಕೇಂದ್ರವಾಗಿರುವ ನಿಟ್ಟಿನಲ್ಲಿ ಹಾಂಗ್ ಕಾಂಗ್ ಜೊತೆಗೆ ಅಮೆರಿಕಾ ಸಂಬಂಧ ಬೆಸೆದುಕೊಂಡಿದೆ. ಆದರೆ ಕೊರೊನಾ ವೈರಸ್ ಸೋಂಕು ಹರಡುವಿಕೆಯಿಂದ ಇದೀಗ ಚೀನಾ ಮತ್ತು ಅಮೆರಿಕಾ ನಡುವಿನ ಸಂಬಂಧ ಹಳಸಿದೆ. ಎರಡು ರಾಷ್ಟ್ರಗಳ ನಡುವೆ ಶೀತಲ ಸಮರ ನಡೆಯುತ್ತಿದೆ.

ಅಮೆರಿಕಾಗೆ ಚೀನಾ ವಿದೇಶಾಂಗ ಸಚಿವರ ತಿರುಗುಬಾಣ

ಅಮೆರಿಕಾಗೆ ಚೀನಾ ವಿದೇಶಾಂಗ ಸಚಿವರ ತಿರುಗುಬಾಣ

ವಿಶ್ವವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗ ನೊವೆಲ್ ಕೊರೊನಾ ವೈರಸ್ ಮೇಲೆ ಅಮೆರಿಕಾ ಲಕ್ಷ್ಯ ವಹಿಸಬೇಕು. ಅದರ ವಿನಃ ಕೊರೊನಾ ವೈರಸ್ ಟೀಕಿಸುತ್ತಾ ರಾಜಕೀಯದ ವೈರಸ್ ನ್ನು ಹರಿಬಿಡುವುದು ಒಳಿತಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅಮೆರಿಕಾ ವಿರುದ್ಧ ಕಿಡಿ ಕಾರಿದ್ದರು. ಅತ್ಯಮೂಲ್ಯ ಸಮಯವನ್ನು ವೃಥಾ ಆರೋಪ ಮಾಡುವುದಕ್ಕಾಗಿ ವ್ಯರ್ಥ ಮಾಡಬಾರದು ಎಂದು ವಾಂಗ್ ಯಿ ವಾಗ್ದಾಳಿ ನಡೆಸಿದ್ದರು.

ಚೀನಾ ವಿರುದ್ಧ ಬೊಟ್ಟು ಮಾಡುವುದಕ್ಕೆ ಬೇರೆಯೇ ಕಾರಣ

ಚೀನಾ ವಿರುದ್ಧ ಬೊಟ್ಟು ಮಾಡುವುದಕ್ಕೆ ಬೇರೆಯೇ ಕಾರಣ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ನಿಯಂತ್ರಿಸಲು ಸಾಧ್ಯವಾಗದ ಬೆನ್ನಲ್ಲೇ ಪ್ರಜೆಗಳ ಗಮನವನ್ನು ಬೇರೆಡೆ ಸೆಳೆಯಲು ಚೀನಾ ವಿರುದ್ಧ ಬೊಟ್ಟು ಮಾಡಿ ಆರೋಪಿಸುತ್ತಿದ್ದಾರೆ ಎಂದು ವಾಂಗ್ ಯಿ ದೂಷಿಸಿದ್ದಾರೆ.

'ಪೊಲಿಟಿಕಲ್ ವೈರಸ್' ವಿರುದ್ಧ ವಾಂಗ್ ವಾಗ್ದಾಳಿ

'ಪೊಲಿಟಿಕಲ್ ವೈರಸ್' ವಿರುದ್ಧ ವಾಂಗ್ ವಾಗ್ದಾಳಿ

ಕೊರೊನಾ ವೈರಸ್ ಗಿಂತಲೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೆಲವು ರಾಜಕಾರಣಿಗಳು ಹುಟ್ಟುಹಾಕಿರುವ ಪೊಲಿಟಿಕಲ್ ವೈರಸ್ ಹೆಚ್ಚು ಅಪಾಯಕಾರಿಯಾಗಿದೆ. ಅಮೆರಿಕಾ ಮತ್ತು ಚೀನಾ ನಡುವಿನ ಸಂಬಂಧವನ್ನು ಹಾಳುಗೆಡುವ ಉದ್ದೇಶದಿಂದ ಈ ಪೊಲಿಟಿಕಲ್ ವೈರಸ್ ನ್ನು ಹರಡಿಸಲಾಗುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆರೋಪಿಸಿದ್ದಾರೆ.

English summary
Cold War Between China-Hong Kong On The Back Of Chinese Foreign Minister Wang yi News Conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X