ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲ್ವಾನ್ ಕಣಿವೆ ಸಂಘರ್ಷ: ತನ್ನ 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನುವುದು 'ಸುಳ್ಳು ಸುದ್ದಿ' ಎಂದ ಚೀನಾ

|
Google Oneindia Kannada News

ನವದೆಹಲಿ ಜೂನ್ 23: ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗಿನ ಸಂಘರ್ಷದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕನಿಷ್ಠ 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಚೀನಾ ಹೇಳಿದೆ.

ಪಿಎಲ್‌ಎ ಸಾವು-ನೋವುಗಳ ಕುರಿತ ವರದಿಗಳನ್ನು ನಿರಾಕರಿಸಿದ ಚೀನಾ ವಿದೇಶಾಂಗ ಸಚಿವಾಲಯ ಜೂನ್ 22 ರಂದು ಮಾತುಕತೆಗಳ ಮೂಲಕ ಉದ್ವಿಗ್ನತೆಯನ್ನು ಪರಿಹರಿಸಲು ಸಭೆ ನಡೆಸಿದೆ ಎಂದು ಹೇಳಿದೆ.

ಲಡಾಖ್ ಘರ್ಷಣೆ: ಚೀನಾ ಸೈನಿಕರ ಸಾವಿನ ರಹಸ್ಯ ಬಿಚ್ಚಿಟ್ಟ US ಗುಪ್ತಚರ ವರದಿಲಡಾಖ್ ಘರ್ಷಣೆ: ಚೀನಾ ಸೈನಿಕರ ಸಾವಿನ ರಹಸ್ಯ ಬಿಚ್ಚಿಟ್ಟ US ಗುಪ್ತಚರ ವರದಿ

"ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಚೀನಾ ಮತ್ತು ಭಾರತ ಪರಸ್ಪರ ಮಾತುಕತೆ ನಡೆಸುತ್ತಿವೆ" ಎಂದು ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ.

Claims That 40 PLA Soldiers Died In Galwan Valley Clash Is Fake News:China

"ನೀವು ಮಾಧ್ಯಮ ವರದಿಯಲ್ಲಿ, ಚೀನಾದ ಕಡೆಯಿಂದ ಸಂಭವಿಸಿದ ಸಾವುನೋವುಗಳು 40 ಎಂದು ಕೆಲವರು ಆರೋಪಿಸಿದ್ದಾರೆ, ಇದು ನಕಲಿ ಸುದ್ದಿ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ" ಎಂದು ಜಾವೋ ಹೇಳಿದರು.

ಈ ವಾರದ ಆರಂಭದಲ್ಲಿ, ಚೀನಾದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕರೆಗೆ ಪ್ರತಿಕ್ರಿಯೆಯಾಗಿ ಹೇಳಿಕೆ ನೀಡಿತ್ತು. "ಗಡಿ ಘರ್ಷಣೆಯ ಜವಾಬ್ದಾರಿ ಸಂಪೂರ್ಣವಾಗಿ ಭಾರತದ ಮೇಲಿದೆ. ಚೀನಾ-ಭಾರತ ಸಂಬಂಧಗಳಿಗೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳ ದೀರ್ಘಕಾಲೀನ ಅಭಿವೃದ್ಧಿಯನ್ನು ಕಾಪಾಡಲು ಇಬ್ಬರೂ ಕೆಲಸ ಮಾಡಬಹುದೆಂದು ಭಾವಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

2015ರಿಂದ ಚೀನಾ ನಡೆಸಿರುವ ಆಕ್ರಮಣದ ಕುರಿತು ಪ್ರಶ್ನೆ ಕೇಳಲಿ: ಚಿದಂಬರಂ2015ರಿಂದ ಚೀನಾ ನಡೆಸಿರುವ ಆಕ್ರಮಣದ ಕುರಿತು ಪ್ರಶ್ನೆ ಕೇಳಲಿ: ಚಿದಂಬರಂ

ಜೂನ್ 15 ರ ರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯು 20 ಸೈನಿಕರನ್ನು ಕಳೆದುಕೊಂಡಿದ್ದರೆ, ಪಿಎಲ್‌ಎ ಅನುಭವಿಸಿದ ಸಾವುನೋವುಗಳ ವಿವರಗಳನ್ನು ಬಹಿರಂಗಪಡಿಸಲು ಚೀನಾ ಇದುವರೆಗೆ ನಿರಾಕರಿಸಿದೆ. ಆದರೆ ಅಮೆರಿಕಾ ಗುಪ್ತಚರ ಇಲಾಖೆ ಚೀನಾದ 40 ಸೈನಿಕರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಿತ್ತು.

English summary
The Chinese Foreign Ministry released a statement on Tuesday claiming that reports of at least 40 soldiers of the PLA being killed in the violent face-off in Galwan Valley as "Fake News".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X