ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರೀ ಸೇನಾ ದಾಳಿ; 80 ಮಾಲಿ ಉಗ್ರರು ಮಟಾಶ್

|
Google Oneindia Kannada News

ಬುರ್ಕಿನಾ ಪಾಸೋ, ಡಿಸೆಂಬರ್ 25: ಪಶ್ಚಿಮ ಆಫ್ರೀಕಾ ಖಂಡದ ಬುರ್ಕಿನಾ ಪಾಸೋ ದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದ ಉಗ್ರರ ದಾಳಿಯಲ್ಲಿ 35 ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲಿನ ಸೇನೆ ನಡೆಸಿದ ಪ್ರತಿದಾಳಿಯಲ್ಲಿ 80 ಉಗ್ರರು ಸಾವನ್ನಪ್ಪಿದ್ದಾರೆ.

ಪತ್ರಕರ್ತ ಖಶೋಗ್ಗಿ ಹತ್ಯೆ: ಸೌದಿಯಲ್ಲಿ ಐವರಿಗೆ ಮರಣದಂಡನೆಪತ್ರಕರ್ತ ಖಶೋಗ್ಗಿ ಹತ್ಯೆ: ಸೌದಿಯಲ್ಲಿ ಐವರಿಗೆ ಮರಣದಂಡನೆ

ಬುರ್ಕಿನಾ ಪಾಸೋ ದೇಶದ ಉತ್ತರ ಭಾಗದಲ್ಲಿರುವ ಮಾಲಿ ಗಡಿಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ನಾಗರಿಕರಲ್ಲಿ ಮಹಿಳೆ ಮತ್ತು ಮಕ್ಕಳು ಹೆಚ್ಚಿದ್ದಾರೆ ಎಂದು ಅಲ್ಲಿನ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಬುರ್ಕಿನಾ ಪಾಸೋ ಸೇನಾ ಕ್ಯಾಂಪ್ ಇರುವ ಗಡಿಯಲ್ಲಿ ಏಕಾಏಕಿ ದಾಳಿ ನಡೆಸಿದ ಇಸ್ಲಾಂ ಮೂಲಭೂತವಾದಿ ಉಗ್ರರು ಮಾರುಕಟ್ಟೆ ಸ್ಥಳ ಗುರಿಯಾಗಿಸಿಕೊಂಡು ಮಹಿಳೆಯರು ಹಾಗೂ ಮಕ್ಕಳನ್ನು ಕೊಂದಿದ್ದಾರೆ. ತಕ್ಷಣವೇ ಪ್ರತಿ ದಾಳಿ ಮಾಡಿದ ಅಲ್ಲಿನ ಸೈನಿಕರು 80 ಉಗ್ರರನ್ನು ಹೊಡೆದುರಳಿಸಿದ್ದಾರೆ.

Civilians And Jihadists Killed In Terror Attack In Burkina Faso

ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಆ ದೇಶದ ರೋಕ್ ಕಾಬೋರೆ ತಿಳಿಸಿದ್ದಾರೆ. ಪಕ್ಕದ ಮಾಲಿ ದೇಶದಲ್ಲಿ ನಿರಂತರವಾಗಿ ಇಸ್ಲಾಂ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಬುರ್ಕಿನಾ ಪಾಸೋ ಮೇಲೆನೂ ಮಾಲಿ ಉಗ್ರರು ಕಣ್ಣಿಟ್ಟಿದ್ದಾರೆ.

English summary
35 civilians, 80 jihadists killed in attack in Burkina Faso.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X