• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಪೊಲೀಸ್-ಸೇನೆ ಸಂಘರ್ಷ: ನಾಗರಿಕ ಯುದ್ಧದ ಭೀತಿ

|

ಕರಾಚಿ, ಅಕ್ಟೋಬರ್ 21: ಪಾಕಿಸ್ತಾನದಲ್ಲಿ ಸೇನೆ ಮತ್ತು ಪೊಲೀಸ್ ಇಲಾಖೆ ನಡುವೆ ಸಂಘರ್ಷ ನಡೆದಿದ್ದು, ನಾಗರಿಕ ಯುದ್ಧದ ಭೀತಿ ಆವರಿಸಿದೆ. ಗಡಿಪಾರಾಗಿರುವ ಮಾಜಿ ಪ್ರಧಾನಿ ನವಾಜ್ ಷರೀಪ್ ಅವರ ಅಳಿಯ ಸಫ್ದಾರ್ ಅವರನ್ನು ಬಂಧಿಸುವಂತೆ ಆದೇಶ ನೀಡಲು ಒತ್ತಾಯಿಸಲು ಸೇನೆಯು ಸಿಂಧ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥನನ್ನು ಅಪಹರಣ ಮಾಡಿದೆ ಎಂಬ ಸುದ್ದಿ ಹರಡಿದೆ. ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಆದೇಶಿಸಿದ್ದಾರೆ.

ಸಿಂಧ್ ಪ್ರಾಂತ್ಯದಲ್ಲಿ ಪೊಲೀಸರು ಮತ್ತು ಪಾಕಿಸ್ತಾನ ಸೇನೆಯ ವಿರುದ್ಧದ ಸಂಬಂಧ ಹದಗೆಟ್ಟಿದ್ದು, ಪೊಲೀಸ್ ಇಲಾಖೆಗೆ ಅಗೌರವ ತೋರಲಾಗುತ್ತಿದೆ ಎಂದು ಸಿಂಧ್ ಪೊಲೀಸರು ಆರೋಪಿಸಿದ್ದಾರೆ. ಸಿಂಧ್ ಪೊಲೀಸ್ ಮುಖ್ಯ ಕಚೇರಿಯನ್ನು ವಶಪಡಿಸಿಕೊಳ್ಳಲು ಪಾಕ್ ಸೇನೆ ಮುಂದಾಗಿದೆ ಎನ್ನಲಾಗಿದೆ.

ಪಾಕ್ ಸೈನಿಕನ ಸಮಾಧಿ ಮರು ಸ್ಥಾಪಿಸಿದ ಭಾರತೀಯ ಯೋಧರು

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮುಖಂಡರಾಗಿರುವ ಮೊಹಮ್ಮದ್ ಸಫ್ದಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸುವಂತೆ ಸೇನೆಯು ಒತ್ತಡ ಹೇರಿರುವುದು ಆಘಾತಕಾರಿ ಎಂದಿರುವ ಅನೇಕ ಪೊಲೀಸ್ ಅಧಿಕಾರಿಗಳು ಮಂಗಳವಾರ ರಜೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಕರಾಚಿಯಲ್ಲಿ ಪೊಲೀಸರು ಮತ್ತು ಸೇನಾ ಪಡೆಗಳ ನಡುವೆ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿದ್ದು, ಹಲವು ಸ್ಫೋಟಗಳು ಕೂಡ ಸಂಭವಿಸಿವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಮಾಧ್ಯಮಗಳನ್ನು ಕೂಡ ಅಲ್ಲಿಯ ಸೇನೆ ಹಿಡಿತಕ್ಕೆ ತೆಗೆದುಕೊಂಡಿದೆ. ಮುಂದೆ ಓದಿ.

ಹತ್ತು ಪೊಲೀಸರ ಸಾವು

ಹತ್ತು ಪೊಲೀಸರ ಸಾವು

ಇಂಟರ್‌ನ್ಯಾಷನಲ್ ಹೆರಾಲ್ಡ್ ವರದಿ ಪ್ರಕಾರ, ಕರಾಚಿಯಲ್ಲಿ ಸಂಭವಿಸಿರುವ ಸಂಘರ್ಷಗಳಲ್ಲಿ ಹತ್ತು ಪೊಲೀಸರು ಮೃತಪಟ್ಟಿದ್ದಾರೆ. ಸಿಂಧ್ ಪೊಲೀಸರು ಮತ್ತು ಪಾಕಿಸ್ತಾನ ಸೇನೆ ನಡುವಣ ಘರ್ಷಣೆ ಬಳಿಕ ನಾಗರಿಕ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.

ಸೇನೆಯ ಮಾಧ್ಯಮ ಘಟಕದ ಹೇಳಿಕೆ ಪ್ರಕಾರ, ವಾಸ್ತವವನ್ನು ಕೆಡಿಸುವ ಸನ್ನಿವೇಶಗಳ ಬಗ್ಗೆ ತಕ್ಷಣವೇ ತನಿಖೆ ನಡೆಸಿ ಆದಷ್ಟು ಶೀಘ್ರವೇ ವರದಿ ನೀಡುವಂತೆ ಸೇನಾ ಮುಖ್ಯಸ್ಥರು ಕರಾಚಿ ಕಾರ್ಪ್ಸ್ ಕಮಾಂಡರ್‌ಗೆ ಸೂಚನೆ ನೀಡಿದ್ದಾರೆ. ಆದರೆ ಯಾವ ಘಟನೆ ಕುರಿತು ಈ ಹೇಳಿಕೆ ನೀಡಲಾಗಿದೆ ಎನ್ನುವುದನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ.

ಸಫ್ದಾರ್ ಬಂಧನ, ಬಿಡುಗಡೆ

ಸಫ್ದಾರ್ ಬಂಧನ, ಬಿಡುಗಡೆ

ಸಫ್ದಾರ್ ಮತ್ತು ಅವರ ಪತ್ನಿ, ಪಿಎಂಎಲ್-ಎನ್ ಉಪಾಧ್ಯಕ್ಷೆ ಮರ್ಯಮ್ ನವಾಜ್ ಅವರು ವಿರೋಧಪಕ್ಷಗಳ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರಾಚಿ ನಗರಕ್ಕೆ ಆಗಮಿಸಿದ್ದರು. ಆಗ ಸಫ್ದಾರ್ ಅವರನ್ನು ಬಂಧಿಸಲಾಗಿತ್ತು. ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಅಗೌರವಿಸಿದ ಆರೋಪದಡಿ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕಾಮಲ್ ವೆಲ್ತ್ ನಲ್ಲಿ ಕೆಣಕಿದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು

ಇಮ್ರಾನ್ ಖಾನ್ ವಿರುದ್ಧ ಆರೋಪ

ಇಮ್ರಾನ್ ಖಾನ್ ವಿರುದ್ಧ ಆರೋಪ

ತಾವು ಪತಿಯೊಂದಿಗೆ ಉಳಿದುಕೊಂಡಿದ್ದ ಹೋಟೆಲ್‌ನ ಕೊಠಡಿಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ ಕರಾಚಿ ಪೊಲೀಸರು ಸಫ್ದಾರ್ ಅವರನ್ನು ಬಂಧಿಸಿದ್ದರು ಎಂದು ಮರ್ಯಮ್ ಆರೋಪಿಸಿದ್ದಾರೆ. ಸಮಾವೇಶದಲ್ಲಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮರ್ಯಮ್, ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಇಮ್ರಾನ್ ಖಾನ್ ಪಾಕಿಸ್ತಾನ ಸೇನೆಯ ವರ್ಚಸ್ಸನ್ನು ಕೆಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ರಜೆ ಹಾಕಿದ ಅಧಿಕಾರಿಗಳು

ರಜೆ ಹಾಕಿದ ಅಧಿಕಾರಿಗಳು

ಸಫ್ದಾರ್ ಅವರನ್ನು ಬಂಧಿಸಲು ಆದೇಶ ಹೊರಡಿಸುವಂತೆ ಸಿಂಧ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಮುಷ್ತಾಕ್ ಮೆಹರ್ ಅವರ ಮೇಲೆ ಪ್ಯಾರಾಮಿಲಿಟರಿ ರೇಂಜರ್‌ಗಳು ಒತ್ತಡ ಹೇರಿದ್ದರು. ಬಳಿಕ ರೇಂಜರ್‌ಗಳೇ ಸಫ್ದಾರ್ ಅವರನ್ನು ಬಂಧಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ರೇಂಜರ್ ಅಥವಾ ಇಮ್ರಾನ್ ಖಾನ್ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಮೆಹರ್ ಅವರನ್ನು ನಡೆಸಿಕೊಂಡ ರೀತಿ ವಿಚಾರವಾಗಿ ಆಕ್ರೋಶಗೊಂಡಿರುವ ಅನೇಕ ಪೊಲೀಸ್ ಅಧಿಕಾರಿಗಳು ರಜೆ ಹಾಕಿದ್ದಾರೆ ಎಂದು ವರದಿಯಾಗಿದೆ.

ನ.24ರೊಳಗೆ ಕೋರ್ಟ್‌ಗೆ ಹಾಜರಾಗದಿದ್ದರೆ ಷರೀಫ್ ಘೋಷಿತ ಅಪರಾಧಿ

ಮಾಹಿತಿ ನೀಡದ ಮೆಹರ್

ತಾವು ಕೂಡ ಗೈರು ಹಾಜರಿ ರಜೆ ತೆಗೆದುಕೊಳ್ಳಲು ಮುಂದಾಗಿದ್ದು, ಈ ಪ್ರಕರಣದ ತನಿಖೆ ನಡೆಸಲು ಅಧಿಕಾರಿಗಳಿಗೆ ಅನುಕೂಲವಾಗುವಂತೆ ನಿರ್ಧಾರ ಬದಲಿಸಿ ಹತ್ತು ದಿನಗಳ ರಜೆ ತೆಗೆದುಕೊಂಡಿರುವುದಾಗಿ ಮೆಹರ್ ತಿಳಿಸಿದ್ದಾರೆ. ಆದರೆ ಸೇನಾ ಪಡೆಯ ರೇಂಜರ್‌ಗಳನ್ನು ತಮ್ಮನ್ನು ಅಪಹರಿಸಿದ್ದು ಅಥವಾ ಒತ್ತಡ ಹೇರಿದ್ದರ ಆರೋಪದ ಬಗ್ಗೆ ಅವರು ಏನನ್ನೂ ಹೇಳಿಲ್ಲ.

ಸಿಂಧ್ ಪೊಲೀಸರ ಆಕ್ರೋಶ

ಸಿಂಧ್ ಪೊಲೀಸರ ಆಕ್ರೋಶ

ಘಟನೆಯ ಬಗ್ಗೆ ಸರಿಯಾದ ವಿವರಣೆ ನೀಡದ ಸಿಂಧ್ ಪೊಲೀಸರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. 'ದುರದೃಷ್ಟಕರ ಘಟನೆ. ಸಿಂಧ್ ಪೊಲೀಸ್‌ನ ಎಲ್ಲ ಶ್ರೇಣಿಯ ಅಧಿಕಾರಿಗಳು ಇದರಿಂದ ಅಸಮಾಧಾನಗೊಂಡಿದ್ದು, ಮನಸಿಗೆ ತೀವ್ರ ನೋವಾಗಿದೆ. ಇದರ ಪರಿಣಾಮ ಸಿಂಧ್‌ನ ಐಜಿ ರಜೆ ಮೇಲೆ ಹೋಗಲು ನಿರ್ಧರಿಸಿದ್ದು, ಎಲ್ಲ ಶ್ರೇಣಿಯ ಅಧಿಕಾರಿಗಳೂ ಸಿಂಧ್ ಪೊಲೀಸರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಲು ರಜೆಗೆ ಅರ್ಜಿ ಸಲ್ಲಿಸಲಿದ್ದಾರೆ' ಎಂದು ಹೇಳಿದ್ದಾರೆ.

English summary
Civil was like situation errupted in Karachi, after a clash between Sindh police and Pakistan army over the kidnapping rumours of police chief Mushtaq Mehar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X