ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಿ ಕ್ರಿಸ್ಟಿಯಾ ಫ್ರೀಲ್ಯಾಂಡ್‌ ಆಯ್ಕೆ ಸಾಧ್ಯತೆ

|
Google Oneindia Kannada News

ಒಟ್ಟಾವಾ, ಆಗಸ್ಟ್ 18: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹಿರಿಯ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್‌ರನ್ನು ಕೆನಡಾದ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿ ಆಯ್ಕೆ ಮಾಡಲಿದ್ದಾರೆ ಎಂದು ಸ್ಥಳೀಯ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

52 ರ ಹರೆಯದ ಫ್ರೀಲ್ಯಾಂಡ್, ಲಿಬರಲ್ ಸರ್ಕಾರದಲ್ಲಿ ಪ್ರಸ್ತುತ ಉಪ ಪ್ರಧಾನ ಮಂತ್ರಿಯಾಗಿ ಮತ್ತು ಈ ಹಿಂದೆ ವಿದೇಶಾಂಗ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಅಮೆರಿಕಾ ಮತ್ತು ಮೆಕ್ಸಿಕೊದೊಂದಿಗೆ ಮುಕ್ತ ವ್ಯಾಪಾರ ಮಾತುಕತೆಗಳನ್ನು ನಡೆಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೊರೊನಾ ಲಸಿಕೆ ಉತ್ಪಾದನೆ: ನಾಗರಿಕರಿಗೆ ಉಚಿತಆಸ್ಟ್ರೇಲಿಯಾದಲ್ಲಿ ಕೊರೊನಾ ಲಸಿಕೆ ಉತ್ಪಾದನೆ: ನಾಗರಿಕರಿಗೆ ಉಚಿತ

ಎರಡನೆಯ ಮಹಾಯುದ್ಧದ ನಂತರ ಕೆನಡಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಅವರು ದೇಶದ ಉನ್ನತ ಹಣಕಾಸು ಕೆಲಸವನ್ನು ವಹಿಸಿಕೊಳ್ಳಲಿದ್ದಾರೆ.

Chrystia Freeland To Be Canadas First Female Finance Minister : Local Media

ಐದು ವರ್ಷಗಳ ಕೆಲಸದಲ್ಲಿ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಬಿಲ್ ಮೊರ್ನಿಯೊ ಸೋಮವಾರ ತಡರಾತ್ರಿ ರಾಜಕೀಯಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್‌ಮೆಂಟ್ (ಒಇಸಿಡಿ) ಯಲ್ಲಿ ಕೆಲಸ ಮಾಡಲು ಹೊರಟಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಕೊರೊನಾವೈರಸ್ ಸಾಂಕ್ರಾಮಿಕದಿಂದ ದುರ್ಬಲಗೊಂಡ ಕೆನಡಾದ ಆರ್ಥಿಕತೆಯನ್ನು ಹೇಗೆ ಸರಿಹಾದಿಗೆ ತರುವುದು ಎಂಬುದರ ಕುರಿತು ಚರ್ಚೆಯಾಗಿದೆ. ಏಕೆಂದರೆ ಸರ್ಕಾರದ ಬಜೆಟ್ ಕೊರತೆಯು 340 ಬಿಲಿಯನ್ ಕ್ಯಾನ್ (ಯುಎಸ್ ಡಾಲರ್ 257 ಬಿಲಿಯನ್) ಗಿಂತ ಹೆಚ್ಚಾಗಿದೆ.

English summary
Prime Minister Justin Trudeau will tap veteran minister Chrystia Freeland to be Canada's first female finance minister, local media said Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X