• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿ

|

ಕ್ರೈಸ್ಟ್ ಚರ್ಚ್, ಮಾರ್ಚ್ 15: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಎರಡು ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿ ಘಟನೆ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಬಂದೂಕುಧಾರಿಯು ಶಸ್ತ್ರಾಸ್ತ್ರದ ಮೇಲೆ ಬರೆದಿರುವ ಹೆಸರುಗಳು ಸಾಕಷ್ಟು ಕುತೂಹಲ ಮೂಡಿಸಿವೆ.

ಈ ದಾಳಿಯು ಮುಸ್ಲಿಮರ ವಿರುದ್ಧ ದ್ವೇಷ ಭಾವನೆಯನ್ನು ಹೊಂದಿರುವ ವ್ಯಕ್ತಿ ನಡೆಸಿದ್ದಾನೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಪೂರಕವಾದ ಅಂಶಗಳು ಇದರಲ್ಲಿವೆ. ಶಸ್ತ್ರಾಸ್ತ್ರದ ಮೇಲೆ ಅನೇಕರ ಹೆಸರುಗಳನ್ನು ಬರೆಯಲಾಗಿದ್ದು, ಅವರೆಲ್ಲರೂ ಇತಿಹಾಸದಲ್ಲಿ ಮುಸ್ಲಿಂ ದಾಳಿಕೋರರ ವಿರುದ್ಧ ಹೋರಾಟ ನಡೆಸಿದವರೇ ಆಗಿದ್ದಾರೆ. ಅವರನ್ನು ಈತ ಪ್ರೇರಣೆಯನ್ನಾಗಿರಿಸಿಕೊಂಡು ದಾಳಿ ನಡೆಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

'1992ರ ಬಳಿಕ ಮೊದಲ ಶೂಟೌಟ್ ನ್ಯೂಜಿಲೆಂಡ್‌ಗೆ ಇಂದು ಕರಾಳದಿನ'

ಈ ಮಾಹಿತಿಗಳು ದಾಳಿಕೋರ ಇತಿಹಾಸದಲ್ಲಿ ದಾಖಲಾದ ಮುಸ್ಲಿಂ ದಾಳಿಕೋರರ ವಿರುದ್ಧದ ಹೋರಾಟಗಳ ಕಥನಗಳಿಂದ ತೀವ್ರ ಪ್ರಭಾವಿತನಾಗಿದ್ದ ಎಂಬುದನ್ನು ತಿಳಿಸುತ್ತವೆ. ಭಾರತದ ಸಂಶೋಧಕ, ರಕ್ಷಣಾ ವ್ಯವಹಾರ ಕಾರ್ಯತಂತ್ರ ತಜ್ಞ ದಿವ್ಯ ಕುಮಾರ್ ಸೋಟಿ ಈ ಮಹತ್ವದ ಹಾಗೂ ಕುತೂಹಲಕಾರಿ ಅಂಶಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಶುಕ್ರವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.45ರ ಸುಮಾರಿಗೆ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿ ಅನೇಕರನ್ನು ಕೊಂದು ಹಾಕಿದ್ದಾನೆ. ದಾಳಿಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ನಿಖರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ದಾಳಿಗೆ ಕಾರಣ ಏನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ದಾಳಿಕೋರ ಶಸ್ತ್ರಾಸ್ತ್ರದ ಮೇಲೆ ಬರೆದಿರುವ ಹೆಸರುಗಳು ಆತ ಮುಸ್ಲಿಮರ ವಿರುದ್ಧದ ಚರಿತ್ರೆಯ ಹೋರಾಟಗಳಿಂದ ಸ್ಫೂರ್ತಿಗೊಂಡಿದ್ದ ಎಂಬುದನ್ನು ತಿಳಿಸಿವೆ.

ಚಾರ್ಲ್ಸ್ ಮಾರ್ಟೆಲ್

ಮಸೀದಿಗಳ ಮೇಲೆ ದಾಳಿ ನಡೆಸಿದ ಶೂಟರ್, ಶಸ್ತ್ರಾಸ್ತ್ರದ ಮೇಲೆ ಧರ್ಮಯುದ್ಧಕ್ಕೆ ಸಂಬಂಧಿಸಿದ ಬರಹಗಳನ್ನು ಉಲ್ಲೇಖಿಸಿದ್ದಾನೆ. ಫ್ರಾನ್ಸ್‌ನಲ್ಲಿ ಕ್ರಿ.ಶ 732ರ ವೇಳೆ ಇಸ್ಲಾಮಿಕ್ ಆಕ್ರಮಣಕಾರರ ವಿರುದ್ಧ ಸೇನೆಯನ್ನು ಮುನ್ನಡೆಸಿದ್ದ ಸೇನಾ ಕಮಾಂಡರ್ ಚಾರ್ಲ್ಸ್ ಮಾರ್ಟೆಲ್ ಹೆಸರನ್ನು ದಾಳಿಕೋರ ಬರೆದಿದ್ದಾನೆ.

ವಿಯೆನ್ನಾ ಮತ್ತು ಏಕರ್ ಕದನ

ಮಸೀದಿ ದಾಳಿಕೋರನ ಶಸ್ತ್ರಾಸ್ತ್ರದ ಮೇಲೆ 'ವಿಯೆನ್ನಾ 1683' ಮತ್ತು 'ಏಕರ್ 1189' ಎಂದು ಬರೆಯಲಾಗಿದೆ. 1683ರ ವಿಯೆನ್ನಾ ಕದನದಲ್ಲಿ ಒಟ್ಟೋಮನ್ ಟರ್ಕ್ ಮುಸ್ಲಿಮರ ವಿರುದ್ಧ ಚರ್ಚ್‌ ಕ್ರಿಶ್ಚಿಯನ್ ಕಾನ್ಫೆಡರಿ ಮೂಲಕ ಹೋರಾಟ ಸಂಘಟಿಸಿತ್ತು. 1189ರ ಏಕರ್ ಯುದ್ಧದಲ್ಲಿ ಈಜಿಪ್ಟಿನ ಮುಸ್ಲಿಮರ ವಿರುದ್ಧ ಕ್ರೈಸ್ತರು ಕದನ ನಡೆಸಿದ್ದರು.

ನ್ಯೂಜಿಲೆಂಡ್ ನಲ್ಲಿ ಕರಾಳ ಶುಕ್ರವಾರ : ಮಸೀದಿಯಲ್ಲಿ ರಕ್ತದೋಕುಳಿ

ನಾಲ್ಕನೇ ಗ್ಯಾಸ್ಟನ್

ಮತ್ತೊಂದರಲ್ಲಿ ಸ್ಪೇನ್‌ ದೇಶದ ಬರ್ನ್‌ನ ಹೋರಾಟಗಾರ ನಾಲ್ಕನೇ ಗ್ಯಾಸ್ಟನ್‌ನ ಹೆಸರನ್ನು ಬರೆಯಲಾಗಿದೆ. ಈತ ಸ್ಪೇನ್‌ನ ಹೋಲಿ ಲ್ಯಾಂಡ್‌ಅನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುವ ಟರ್ಕ್ ಮುಸ್ಲಿಮರ ವಿರುದ್ಧದ ಮೊದಲನೇ ಧರ್ಮಯುದ್ಧದಲ್ಲಿ ಪಾಲ್ಗೊಂಡಿದ್ದ.

ಕಾನ್‌ಸ್ಟ್ಯಾಂಟಿನ್ II ಆಸೆನ್

ಬಲ್ಗೇರಿಯಾದಲ್ಲಿ ಟರ್ಕ್ ಮುಸ್ಲಿಮರ ವಿರುದ್ಧ ಬಂಡಾಯ ಏಳುವ ಪ್ರಯತ್ನಗಳನ್ನು ನಡೆಸಿದ್ದ ಬಲ್ಗೇರಿಯಾದ ಕೊನೆಯ ಕ್ರೈಸ್ತ ದೊರೆ ಕಾನ್‌ಸ್ಟ್ಯಾಂಟಿನ್ II ಆಸೆನ್ ಹೆಸರನ್ನು ಕೂಡ ದಾಳಿಕೋರ ಬರೆದಿದ್ದಾನೆ.

ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಶೂಟೌಟ್,ಮೃತರ ಸಂಖ್ಯೆ 40ಕ್ಕೆ ಏರಿಕೆ

ಮಿಖಾಯಲ್ ಸಿಲಗಿ

ಶಸ್ತ್ರಾಸ್ತ್ರದ ತುದಿಯಲ್ಲಿ ಹಂಗೇರಿಯಾದ ಜನರಲ್ ಮಿಖಾಯಲ್ ಸಿಲಗಿ ಹೆಸರನ್ನು ಉಲ್ಲೇಖಿಸಲಾಗಿದೆ. ಮಿಖಾಯಲ್, ಒಟ್ಟೋಮನ್ ಮುಸ್ಲಿಮರು ಹಂಗೇರಿಯಾದ ಬೆಲ್ಗ್ರೇಡ್ ಕೋಟೆಯನ್ನು ವಶಕ್ಕೆ ಪಡೆದುಕೊಂಡಿದ್ದಾಗ ಹೋರಾಟದ ನೇತೃತ್ವ ವಹಿಸಿ ಅವರಿಂದ ಹತ್ಯೆಗೆ ಒಳಗಾಗಿದ್ದ.

ಬೊಹೆಮೊಂಡ್ ಐ

ದಾಳಿಕೋರ ಬರೆದ ಮತ್ತೊಂದು ಇತಿಹಾಸದ ಹೆಸರೆಂದರೆ ಟರ್ಕ್ ಮುಸ್ಲಿಮರ ವಿರುದ್ಧ ಮೊದಲ ಧರ್ಮಯುದ್ಧವನ್ನು ಮುನ್ನಡೆಸಿದ್ದ ಇಟಲಿಯ ಟರಾಂಟೊ ರಾಜಕುಮಾರ ಬೊಹೆಮೊಂಡ್ ಐ ಎಂಬಾತನದ್ದು.

English summary
Pictures of weaponry used by Christchurch mosque attacker shows the written names of people who fought against Islamic invasions in history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X