ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ದಾಳಿಗೆ ಹೆಲಿಕಾಪ್ಟರ್ ಪತನ, ಕೆನಡಾ ರಾಯಭಾರಿ ಲಕ್ಕಿ

By Mahesh
|
Google Oneindia Kannada News

ಇಸ್ಲಾಮಾಬಾದ್, ಮೇ.9: 'ಕ್ಷಿಪಣಿ ಹಾರಿಸಿ ಹೆಲಿಕಾಪ್ಟರ್ ಪತನಗೊಳಿಸಿದ್ದೇವೆ. ಪ್ರಧಾನಿ ನವಾಜ್ ಷರೀಫ್ ನಮ್ಮ ಗುರಿಯಾಗಿದ್ದರು' ಎಂದು ತೆಹ್ರಿಕ್ ಇ ತಾಲಿಬಾನ್ ಹೇಳಿಕೊಂಡಿದೆ. ಅದರೆ, ಉತ್ತರ ಪಾಕಿಸ್ತಾನದಲ್ಲಿ ಶುಕ್ರವಾರ ಉರುಳಿದ ಹೆಲಿಕಾಪ್ಟರ್ ನಲ್ಲಿ ಇಬ್ಬರು ರಾಯಭಾರಿಗಳು ಸೇರಿದಂತೆ ನಾಲ್ವರು ಅಮಾಯಕರು ಮೃತಪಟ್ಟಿದ್ದಾರೆ. ಈ ಪೈಕಿ ಕೆನಡಾ ರಾಯಭಾರಿ ಕೊನೆ ಕ್ಷಣದಲ್ಲಿ ಹೆಲಿಕಾಪ್ಟರ್ ಏರದೆ ಬಚಾವಾಗಿದ್ದಾರೆ.

ಪಾಕಿಸ್ತಾನಕ್ಕೆ ಕೆನಡಾ ರಾಯಭಾರಿ ಅವರು ಕೊನೆ ಕ್ಷಣದಲ್ಲಿ ಷರೀಫ್ ಅವರ ಕಾರ್ಯಕ್ರಮಕ್ಕೆ ಹೋಗುವುದನ್ನು ರದ್ದುಪಡಿಸಿದರು. ಮಹಿಳಾ ರಾಯಭಾರಿಗಳಿಗೆ ಪ್ರತ್ಯೇಕ ವಿಐಪಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಕೆನಡಾ ರಾಯಭಾರಿ ಬದಲಿಗೆ ಲೆಬನಾನ್, ಆಷ್ಟ್ರೀಯಾ ಹಾಗೂ ಫ್ರಾನ್ಸ್ ರಾಯಭಾರಿಗಳು ತೆರಳಿದರು. [ಉಗ್ರರು ಹೆಲಿಕ್ಯಾಪ್ಟರ್ ಹೊಡೆದುರುಳಿಸಿದ್ದು ಯಾಕೆ?]

ಮೊದಲ ಎರಡು ಹೆಲಿಕಾಪ್ಟರ್ ಗಳು ನಾಲ್ಟರ್ ಕಣಿವೆಯಲ್ಲಿ ಸುರಕ್ಷಿತವಾಗಿ ಇಳಿಯಿತು. ಮೂರನೇ ಹೆಲಿಕಾಪ್ಟರ್ ಏರಬೇಕಿದ್ದ ಕೆನಡಾ ರಾಯಭಾರಿ ಹೀಥರ್ ಕ್ರೂಡೆನ್ ಅವರು ನಾಲ್ಕನೆ ಹೆಲಿಕಾಪ್ಟ್ರರ್ ಏರಿ ಬಚಾವಾದರು. ಮೂರನೇ ಹೆಲಿಕಾಪ್ಟರ್ ಉಗ್ರರ ದಾಳಿಗೆ ಸಿಲುಕಿತು.

ಮೃತ ಪಟ್ಟವರಲ್ಲಿ ನಾರ್ವೆ ರಾಯಭಾರಿ ಲೈಫ್ ಎಚ್. ಲಾರ್ಸನ್, ಫಿಲಿಪ್ಪೀನ್ಸ್ ರಾಯಭಾರಿ ಡೊಮಿಂಗೊ ಡಿ ಲುಸನಾರಿಯೊ ಜೂನಿಯರ್, ಮಲೇಷ್ಯಾ ಮತ್ತು ಇಂಡೋನೇಷ್ಯಾಗಳ ರಾಯಭಾರಿಗಳ ಪತ್ನಿಯರು ಮತ್ತು ಹೆಲಿಕಾಪ್ಟರ್‌ನ ಇಬ್ಬರು ಸೇನಾ ಪೈಲಟ್‌ಗಳು ಸೇರಿದ್ದಾರೆ.

Chopper crash in Pakistan

ನಲ್ಟಾರ್ ಕಣಿವೆಯಲ್ಲಿ ಹೆಲಿಕಾಪ್ಟರ್ ಶಾಲಾ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆಯಿತು. ಆರು ಪಾಕಿಸ್ತಾನೀಯರು ಮತ್ತು 11 ವಿದೇಶೀಯರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪೋಲ್ಯಾಂಡ್ ಮತ್ತು ನೆದರ್‌ಲ್ಯಾಂಡ್‌ಗಳ ರಾಯಭಾರಿಗಳು ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರೊಬ್ಬರು ಹೇಳಿದರು.

ತೆಹ್ರಿಕ್ ಇ ತಾಲಿಬಾನ್ ಗೆ ಏನು ಬೇಕು?

ಪ್ರಧಾನಿ ನವಾಝ್ ಶರೀಫ್ ಭಾಷಣ ಮಾಡಲಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಎಂಐ-17 ಸೇನಾ ಹೆಲಿಕಾಪ್ಟರ್‌ಗಳು ವಿದೇಶಿ ರಾಯಭಾರಿಗಳನ್ನು ಹೊತ್ತೊಯ್ಯುತ್ತಿದ್ದವು.

ಎರಡು ವಿಮಾನಗಳು ಸುರಕ್ಷಿತವಾಗಿ ಇಳಿದರೆ, ಮೂರನೆ ವಿಮಾನ ಅಪಘಾತಕ್ಕೀಡಾಯಿತು. ಟಿಪಿಟಿ ಗಳ ಗುರಿ ಷರೀಫ್ ಆಗಿದ್ದರೂ ವಿದೇಶದ ರಾಜತಾಂತ್ರಿಕರ ಮೇಲೆ ದಾಳಿ ನಡೆಸುವ ಮೂಲಕ ತನ್ನ ಇರುವಿಕೆಯನ್ನು ಸಾರುವುದು ಟಿಟಿಪಿ(ತೆಹ್ರಿಕ್ ಇ ತಾಲಿಬಾನ್) ಉದ್ದೇಶವಿರಬಹುದು.

ಇಸ್ಲಾಮಾಬಾದಿನ ಶಾಲೆಯ ಮೇಲಿನ ದಾಳಿ ನಂತರ ಪ್ರಮುಖ ದಾಳಿ ನಡೆಸಿ ನವಾಜ್ ಷರೀಫ್ ಸರ್ಕಾರಕ್ಕೆ ಮುಜುಗರ ತರುವುದು ವಿಶ್ವದ ಇತರೆ ರಾಷ್ಟ್ರಗಳ ಮುಂದೆ ಮಾನ ಕಳೆಯುವುದು ಟಿಪಿಟಿ ಉದ್ದೇಶ ಎನ್ನಬಹುದು.

English summary
The shooting down of the chopper in Northern Pakistan which claimed six lives was a direct message to Prime Minister Nawaz Sharrif by the Tehrik-e-Taliban.The Canadian high commissioner to Pakistan was meant to travel in a military helicopter carrying foreign diplomats and family that crashed in the country’s mountainous north on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X