ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ಆಯ್ತು ಅರುಣಾಚಲ ಪ್ರದೇಶ ಗಡಿಯಲ್ಲೂ ಚೀನಾ ಸೇನೆ

|
Google Oneindia Kannada News

ನವದೆಹಲಿ, ಸಪ್ಟೆಂಬರ್.15: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ. ರೆಜಾಂಗ್ ಲಾ ರೆಚನ್ ಲಾ ಎತ್ತರ ಪ್ರದೇಶಗಳಲ್ಲಿ ಚೀನಾ ಹಿನ್ನಡೆ ಅನುಭವಿಸಿರುವ ಹಿನ್ನೆಲೆ ಅರುಣಾಚಲ ಪ್ರದೇಶ ಗಡಿಯಲ್ಲಿರುವ ಕನಿಷ್ಠ ನಾಲ್ಕು ಭಾಗಗಳಲ್ಲಿ ತನ್ನ ಸೇನೆ ನಿಯೋಜಿಸುತ್ತಿದೆ.

Recommended Video

China ಸೈನಿಕರು Arunachal Pradeshದ ಗಡಿಯಲ್ಲಿ ಜಮಾವಣೆ | Oneindia Kannada

ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಚೀನಾದ ಆಂತರಿಕ ಗಡಿಯಲ್ಲಿ ಚೀನಾ ಸೇನೆಯನ್ನು ನಿಯೋಜಿಸುತ್ತಿರುವುದನ್ನು ಗುರುತಿಸಲಾಗಿದೆ. "ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಮತ್ತು ಭಾರತದಿಂದ ಕೇವಲ 20 ಕಿಲೋ ಮೀಟರ್ ದೂರದಲ್ಲಿರುವ ಅಸಾಫಿಲಾ, ತುತಿಂಗ್ ಆಕ್ಸಿಸ್, ಚಾಂಗ್ ಜೆ ಮತ್ತು ಫಿಶ್ ಟೈಲ್-2 ಸೆಕ್ಟರ್ ನಲ್ಲಿ ಚೀನಾ ತನ್ನ ಸೇನೆ ನಿಯೋಜಿಸಿದೆ" ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಚೀನಾದಿಂದ ಲಡಾಖ್‌ನ 38,000 ಚದರ ಕಿ.ಮೀ ಅತಿಕ್ರಮಣ: ರಾಜನಾಥ್ ಸಿಂಗ್ಚೀನಾದಿಂದ ಲಡಾಖ್‌ನ 38,000 ಚದರ ಕಿ.ಮೀ ಅತಿಕ್ರಮಣ: ರಾಜನಾಥ್ ಸಿಂಗ್

ಈ ಪ್ರದೇಶಗಳ ಸುತ್ತಮುತ್ತಲು ಚೀನಾದಿಂದ ಹೆಚ್ಚಿನ ಆಕ್ರಮಣಗಳು ನಡೆಯುವ ಸಾಧ್ಯತೆಗಳಿದ್ದು, ಕೆಲವು ಸುಪ್ತ ಸ್ಥಳಗಳು ಮತ್ತು ಪರ್ವತಗಳನ್ನು ವಶಕ್ಕೆ ಪಡೆದುಕೊಳ್ಳುವ ಸಂಚು ರೂಪಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಚೀನಾ-ಭಾರತದ ಗಡಿಯಲ್ಲಿ ಸೇನೆಯ ಚಲನವಲನ

ಚೀನಾ-ಭಾರತದ ಗಡಿಯಲ್ಲಿ ಸೇನೆಯ ಚಲನವಲನ

ಅರುಣಾಚಲ ಪ್ರದೇಶದಿಂದ 20 ಕಿಲೋ ಮೀಟರ್ ದೂರದಲ್ಲಿರುವ ತನ್ನ ಆಂತರಿಕ ಗಡಿಯಲ್ಲಿ ಚೀನಾ ಹೆಚ್ಚು ಚಲನಶೀಲವಾಗಿದೆ. ಚೀನಾ ಸೈನಿಕರು ಮತ್ತು ಸೇನೆಯ ಚಲನಶೀಲತೆಯನ್ನು ಅಲ್ಲಿನ ರಸ್ತೆಗಳು ಎದ್ದು ತೋರಿಸುತ್ತಿವೆ. ದಿನದಿಂದ ದಿನಕ್ಕೆ ಚೀನಾದ ಸೇನೆಗಳು ಮತ್ತು ಯೋಧರು ಭಾರತದ ಗಡಿಗೆ ಹತ್ತಿರವಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಿಂದಲೂ ಚೀನಾಗೆ ತಕ್ಕ ಪ್ರತ್ಯುತ್ತರ

ಭಾರತದಿಂದಲೂ ಚೀನಾಗೆ ತಕ್ಕ ಪ್ರತ್ಯುತ್ತರ

"ಲಡಾಖ್ ಪೂರ್ವ ಗಡಿಯಷ್ಟೇ ಅಲ್ಲದೇ ಇದೀಗ ಅರುಣಾಚಲ ಪ್ರದೇಶದ ಗಡಿಯಲ್ಲೂ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಕೊಳ್ಳುತ್ತಿದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯೂ ಕೂಡಾ ಸನ್ನದ್ಧವಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ" ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ಬಳಕೆಗೆ ಚೀನಾ ಮುಂದು

ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ಬಳಕೆಗೆ ಚೀನಾ ಮುಂದು

ಭಾರತ-ಚೀನಾ ಗಡಿಯಲ್ಲಿ ನಿಂತಿರುವ ಸೈನಿಕರಿಗೆ ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ಅಭಿವೃದ್ಧಿಪಡಿಸಿರುವ ಮತ್ತು ಬಳಸುವ ಬಗ್ಗೆ ಈಗಾಗಲೇ ಸರ್ಕಾರದ ಪ್ರಾಧಿಕಾರದಿಂದ ಸಂದೇಶವನ್ನು ರವಾನಿಸಲಾಗಿದೆ ಎಂದು ಚೀನಾದ ಉನ್ನತ ಅಧಿಕಾರಿಯು ರಾಯಟರ್ಸ್ ಗೆ ತಿಳಿಸಿದ್ದಾರೆ. ಭಾರತೀಯ ಸೇನೆಯು ಇನ್ನೊಂದು ಕಡೆ ಸಂಪರ್ಕ ಸಾಧಿಸುವುದಕ್ಕಾಗಿ ರೇಡಿಯೋ ಸಾಧನವನ್ನು ಬಳಕೆ ಮಾಡುತ್ತಿದೆ. ರೇಡಿಯೋ ಸಾಧನಕ್ಕೆ ಹೋಲಿಸಿದ್ದಲ್ಲಿ ಫೈಬರ್ ಕೇಬಲ್ ನೆಟವರ್ಕ್ ಹೆಚ್ಚು ಸುರಕ್ಷಿತವಾಗಿರುತ್ತದೆ. ಕಳೆದ ತಿಂಗಳ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಭಾರತೀಯ ವಾಯು ಪಡೆಯು ಪರಿಶೀಲನೆ ವೇಳೆಯಲ್ಲಿ ಇದೇ ಫೈಬರ್ ಕೇಬಲ್ ಗಳು ಪತ್ತೆಯಾಗಿದ್ದವು ಎಂದು ತಿಳಿದು ಬಂದಿದೆ.

ಭಾರತೀಯ ಸೇನೆಯಿಂದ ಕೆಲವು ಪರ್ವತಗಳ ಅತಿಕ್ರಮಣ

ಭಾರತೀಯ ಸೇನೆಯಿಂದ ಕೆಲವು ಪರ್ವತಗಳ ಅತಿಕ್ರಮಣ

ಚೀನಾಗೆ ಭಾರತೀಯ ಸೇನೆಯಿಂದಲೂ ತಕ್ಕ ಪ್ರತ್ಯುತ್ತರವನ್ನು ನೀಡಲಾಗಿದೆ. ಲಡಾಖ್ ಪೂರ್ವ ಭಾಗದ ಪ್ಯಾಂಗಾಂಗ್ ತ್ಸೋ ಸರೋವರದ ಬಳಿಯಿರುವ ಕೆಲವು ಪರ್ವತಗಳನ್ನು ಭಾರತೀಯ ಸೇನೆಯು ಈಗಾಗಲೇ ಅತಿಕ್ರಮಿಸಿಕೊಂಡಿದೆ. ಸ್ಪಂಗರ್ ಗ್ಯಾಪ್ ಮತ್ತು ಅದರ ದಕ್ಷಿಣ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳೆದ ಆಗಸ್ಟ್ ತಿಂಗಳಾಂತ್ಯದಲ್ಲಿ ಚೀನಾ ಸೇನೆಯು ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದಲ್ಲಿ ಪ್ರಚೋದನಾತ್ಮಕ ಸೇನಾ ಕಾರ್ಯಾಚರಣೆಯನ್ನು ನಡೆಸಿದರ ಬೆನ್ನಲ್ಲೇ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು.

English summary
Chinese Troops Deployment At Atleast Four Locations Across The Border In Arunachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X