ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಲಡಾಖ್ ಗಡಿಯಲ್ಲಿ ಮತ್ತೆ ಕಾಣಿಸಿಕೊಂಡ ಚೀನಾ ಯೋಧರು!

|
Google Oneindia Kannada News

ನವದೆಹಲಿ, ಮೇ 20: ಕಳೆದ 2020ರಲ್ಲಿ ಭಾರತ ಚೀನಾ ಸೇನೆಗಳ ನಡುವಿನ ಸಂಘರ್ಷಕ್ಕೆ ಕಾರಣವಾದ ಪ್ರದೇಶದಲ್ಲೇ ಇದೀಗ ಮತ್ತೊಮ್ಮೆ ಚೀನಾದ ಸೇನಾಪಡೆ ಲಗ್ಗೆ ಇಟ್ಟಿದೆ. ಲಡಾಖ್ ಪ್ರದೇಶದ ಬಳಿಯಿರುವ ಚೀನಾ ಯೋಧರ ತರಬೇತಿ ಶಿಬಿರದಲ್ಲಿ ಭಾರಿ ಸಂಖ್ಯೆಯಲ್ಲಿ ಸೈನಿಕರು ಕಂಡು ಬಂದಿರುವುದನ್ನು ಭಾರತ ಗಮನಿಸಿದೆ.

Recommended Video

India - China ಬಾರ್ಡರ್‌ನಲ್ಲಿ ಮತ್ತೆ ಸದ್ದು | Oneindia Kannada

ಭಾರತಕ್ಕೆ ಹೊಂದಿಕೊಂಡಿರುವ ಚೀನಾದ ಗಡಿ ಪ್ರದೇಶಗಳಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ ಕೂಡ ತನ್ನ ಕಣ್ಗಾವಲನ್ನು ಹೆಚ್ಚಿಸಿದೆ. ಭಾರತೀಯ ಯೋಧರು ಈ ಪ್ರದೇಶಗಳಲ್ಲಿ ಕೆಲವು ಗಂಟೆಗಳಿಂದ ಹೆಚ್ಚಿನ ನಿಗಾ ವಹಿಸಿದ್ದಾರೆ.

ಜಲ ಪ್ರಳಯದ ಮುನ್ಸೂಚನೆ, ಡ್ಯಾಂ ನಿರ್ಮಿಸಲು ಚೀನಾ ಹಿಂದೇಟು..?ಜಲ ಪ್ರಳಯದ ಮುನ್ಸೂಚನೆ, ಡ್ಯಾಂ ನಿರ್ಮಿಸಲು ಚೀನಾ ಹಿಂದೇಟು..?

ಭಾರತ ಚೀನಾದ ಗಡಿ ಪ್ರದೇಶ ಪೂರ್ವ ಲಡಾಖ್ ಬಳಿಯ ಚೀನಾದ ಸಾಂಪ್ರದಾಯಿಕ ತರಬೇತಿ ಶಿಬಿರದಿಂದ ಪಿಎಲ್ಎ ಯೋಧರು ವಾಪಸ್ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿವಾದಿತ ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ ಪ್ರದೇಶದಿಂದ ಚೀನಾ ಯೋಧರು ಗಡಿಯಿಂದ ಹಿಂತಿರುಗುವ ಉದ್ದೇಶ ಹೊಂದಿರಲಿಲ್ಲ. ಆದರೆ ಭಾರತದ ಕಡೆಯಿಂದ ಪೂರ್ವ ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ 11ನೇ ಸುತ್ತಿನ ಸೇನಾ ಸಂಧಾನ ಮಾತುಕತೆಗೆ ಸಂದೇಶ ರವಾನಿಸಿರುವ ಬೆನ್ನಲ್ಲೇ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ಅಲ್ಲಿಂದ ವಾಪಸ್ಸಾಗಿದ್ದಾರೆ ಎಂದು ತಿಳಿದು ಬಂದಿದೆ.

Chinese Soldiers Deployed In Large Numbers Along Ladakh Front, Indian Forces Takes Note

ಗಡಿ ಪ್ರದೇಶದಲ್ಲಿ ಚೀನಾದ ಶಾಶ್ವತ ರಚನೆ:

ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಮಧ್ಯೆಯೂ ಗಡಿ ಪ್ರದೇಶದಲ್ಲಿ ಶಾಶ್ವತ ನೆಲೆಗಳನ್ನು ರಚಿಸಿಕೊಳ್ಳಲು ಚೀನಾ ಮುಂದಾಗಿದೆ. ಉತ್ತರ ಅಕ್ಸಾಯ್ ಚಿನ್ ಪ್ರದೇಶದ ಕ್ಸಿನ್-ಜಿಯಾಂಗ್ ಮತ್ತು ಟಿಬೆಟ್ (ಜಿ-219) ರಾಷ್ಟ್ರೀಯ ಹೆದ್ದಾರಿ ಬಳಿಯ ಕಾಂಗ್ಸಿವಾರ್ ಮತ್ತು ರುಡೋಕ್ ಬಳಿ ಶಾಶ್ವತ ನೆಲೆ ರಚಿಸಲು ಚೀನಾ ಯೋಜನೆ ಹಾಕಿಕೊಂಡಿದೆ. ಈ ಪ್ರದೇಶವು ಟಿಬೆಟ್ ದಕ್ಷಿಣ ಭಾಗದಲ್ಲಿದ್ದು, ಪ್ಯಾಂಗ್ಯಾಂಗ್ ಲೇಕ್ ಪೂರ್ವಭಾಗಕ್ಕೆ ಸನ್ನಿಹಿತದಲ್ಲಿದೆ.

ಚಳಿಗಾಲದ ಸಂದರ್ಭದಲ್ಲಿ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧರಿಗೆ ಈ ಶಾಶ್ವತ ನೆಲೆಯಲ್ಲಿ ಆಶ್ರಯ ನೀಡಲು ಚೀನಾ ಯೋಜನೆ ಹಾಕಿಕೊಂಡಿದೆ.

English summary
Chinese Soldiers Deployed In Large Numbers Along Ladakh Front, Indian Forces Takes Note.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X