ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಗಡಿಯಲ್ಲಿ ದೊಣ್ಣೆ ಹಿಡಿದು ನಿಂತ ಚೀನಾ ಯೋಧರು

|
Google Oneindia Kannada News

ನವದೆಹಲಿ, ಸಪ್ಟೆಂಬರ್.08: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಉದ್ವಿಗ್ನಗೊಳುತ್ತಿದೆ. ಉಭಯ ರಾಷ್ಟ್ರಗಳ ನಿಗದಿತ ಗಡಿ ರೇಖೆಯ ಉದ್ದಕ್ಕೂ ಚೀನಾದ ಸೈನಿಕರು ದೊಣ್ಣೆಗಳನ್ನು ಹಿಡಿದು ನಿಂತಿರುವ ಫೋಟೋ ಇದೀಗ ವೈರಲ್ ಆಗುತ್ತಿದೆ.

Recommended Video

ಮತ್ತೆ China ಗಡಿಯಲ್ಲಿ ದೊಣ್ಣೆ ಹಿಡಿದು ನಿಂತ ಚೀನಾ ಸೈನಿಕರು | Oneindia Kannada

ಪೂರ್ವ ಲಡಾಖ್ ನ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಬ್ಯಾಂಕ್ ಬಳಿ ಗಡಿರೇಖೆಯುದ್ದಕ್ಕೂ ಶಸ್ತ್ರಾಸ್ತ್ರಗಳಿಗೆ ಸೇರಿದ ಬಿಡಿಭಾಗಗಳು ಮತ್ತು ದೊಣ್ಣೆಗಳನ್ನು ಹಿಡಿದು ನಿಂತಿದ್ದಾರೆ. ಚೀನಾದ ಸೇನೆಯ ಪ್ರತಿಯೊಬ್ಬ ಯೋಧರು ಮಧ್ಯಕಾಲೀನ ಶೈಲಿಯ ಯುದ್ಧ ಶಸ್ತ್ರಾಸ್ತ್ರಗಳನ್ನು ಸಾಮೂಹಿಕವಾಗಿ ಬಳಸಿದ್ದಕ್ಕೆ ಈ ಫೋಟೋಗಳೇ ಮೊದಲ ಸಾಕ್ಷಿಯಂತಿವೆ.

ನಾವು ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿಲ್ಲ: ಭಾರತ ಸ್ಪಷ್ಟನೆ ನಾವು ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿಲ್ಲ: ಭಾರತ ಸ್ಪಷ್ಟನೆ

ಚಿತ್ರದಲ್ಲಿ ಚೀನಾ ಸೇನೆಯ ಪ್ರತಿಯೊಬ್ಬ ಸೈನಿಕರೂ ಈಟಿಗಳು ಮತ್ತು ರೈಫಲ್‌ಗಳೊಂದಿಗೆ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಕಳೆದ ಸಪ್ಟೆಂಬರ್,07ರಂದು ಉಭಯ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿತ್ತು.

Chinese Soldiers Are Stand With Armed Spears Near Indian Positions


ಭಾರತ-ಚೀನಾ ಸೇನೆ ನಡುವೆ ಗುಂಡಿನ ಚಕಮಕಿ:

ಲಡಾಖ್ ಪೂರ್ವ ಭಾಗದಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ಪರ್ವತ ಶ್ರೇಣಿಯೊಂದನ್ನು ಭಾರತೀಯ ಸೇನೆ ಅತಿಕ್ರಮಿಸಿದೆ ಎಂದು ಆರೋಪಿಸಿದ ಚೀನಾ ಗುಂಡಿನ ದಾಳಿ ನಡೆಸಿತ್ತು. ರಾಚಿನ್ ಲಾ- ರೆಂಜಂಗ್ಲಾ-ಮುಖ್ಪರಿ ಮತ್ತು ಮಗರ್ ಪರ್ವತ ಶ್ರೇಣಿಯ ಬಳಿ ಉಭಯ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಚೀನಾದ ಸೈನಿಕರು ಮುಖ್ಪಾರಿ ಬಳಿ ಒಂದು ಸ್ಥಾನಕ್ಕೆ ಬಂದಾಗ, ಭಾರತೀಯರ ಸೈನ್ಯವು ಅವರ ಮೇಲೆ ಕೂಗಿ ತಮ್ಮ ಶಸ್ತ್ರಾಸ್ತ್ರಗಳನ್ನು ತೋರಿಸಿದೆ ಎಂದು ಮೂಲಗಳು ತಿಳಿಸಿವೆ.

English summary
Chinese Soldiers Are Stand With Armed Spears Near Indian Positions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X