ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19:: ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಪತ್ರ

|
Google Oneindia Kannada News

ಬೀಜಿಂಗ್, ಮೇ 1: ಭಾರತದಲ್ಲಿ ನಿತ್ಯ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪತ್ರ ಬರೆದಿದ್ದಾರೆ.

ಕೋವಿಡ್-19 ನಿಯಂತ್ರಣಕ್ಕೆ ಸಹಾಯಹಸ್ತ ಚಾಚಿರುವ ಕ್ಸಿ ಜಿನ್‌ಪಿಂಗ್, ಭಾರತದ ಪರಿಸ್ಥಿತಿಗೆ ಮರುಗಿದ್ದಾರೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವುದಕ್ಕೆ ಭಾರತಕ್ಕೆ ಸಹಕಾರ ನೀಡುವುದಕ್ಕೆ ಚೀನಾ ಬಯಸುತ್ತಿದೆಎಂದು ಕ್ಸಿ ಜಿನ್‌ಪಿಂಗ್ ಪತ್ರದ ಮೂಲಕ ತಿಳಿಸಿದ್ದಾರೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಗೆ ಪತ್ರ ಬರೆದಿದ್ದ ಚೀನಾ ವಿದೇಶಾಂಗ ಸಚಿವರು ಭಾರತದ ಸವಾಲಿನ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು. ಕೊರೊನಾ ವೈರಸ್ ಮನುಕುಲದ ಸಮಾನ ಶತ್ರುವಾಗಿದೆ. ಅದನ್ನು ಎದುರಿಸಲು ಅಂತಾರಾಷ್ಟ್ರೀಯ ಸಮುದಾಯ ಪರಸ್ಪರ ಸಹಕಾರ ನೀಡಬೇಕಿದೆ.

Xi Jinping

ಇದಕ್ಕೂ ಮುನ್ನ ಭಾರತಕ್ಕೆ ನೆರವು ನೀಡುವುದಾಗಿ ಹೇಳಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ, ಚೀನಾದಲ್ಲಿ ಉತ್ಪಾದನೆಯಾದ ಸಾಂಕ್ರಮಿಕ ತಡೆಗೆ ಅಗತ್ಯವಿರುವ ಉಪಕರಣಗಳು ಭಾರತಕ್ಕೆ ಶೀಘ್ರವೇ ತಲುಪುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ

ಇನ್ನೊಂದೆಡೆ, ಕೋವಿಡ್ 19 ಹೋರಾಟದಲ್ಲಿ ಜಪಾನ್ ಭಾರತದ ಬೆಂಬಲಕ್ಕೆ ನಿಂತಿದೆ. ಹಾಗೆಯೇ ಭಾರತಕ್ಕೆ 300 ರೆಸ್ಪಿರೇಟರ್‌ಗಳು ಹಾಗೂ 300 ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ನೀಡಲು ಮುಂದಾಗಿದೆ.

ಈ ಕುರಿತು ಜಪಾನ್ ಜೀಫ್ ಕ್ಯಾಬಿನೆಟ್ ಸೆಕ್ರೆಟರಿ ಕಟ್ಸುನೊಬು ಟ್ವೀಟ್ ಮಾಡಿದ್ದಾರೆ. ಭಾರತದೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ಸೌದಿ ಅರೇಬಿಯಾ ಮತ್ತು ದುಬೈ ರಾಷ್ಟ್ರಗಳು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ನೆರವು ನೀಡುವುದಾಗಿ ಘೋಷಿಸಿವೆ.

ಜಗತ್ತಿನ ಈ ಪ್ರಮುಖ ರಾಷ್ಟ್ರಗಳ ಪೈಕಿ ಯುನೈಟೆಡ್ ಕಿಂಗ್ ಡಮ್ 495 ಆಮ್ಲಜನಕ ಸಾಂದ್ರಕ, 120 ನಾನ್ ಇನ್ವೆಸಿವ್ ವೆಂಟಿಲೇಟರ್ ಮತ್ತು 20 ಮ್ಯಾನುವೆಲ್ ವೆಂಟಿಲೇಟರ್ ಅನ್ನು ಇದೇ ವಾರದಲ್ಲಿ ರವಾನಿಸಲಿದೆ. ಈ ಪೈಕಿ ಏಪ್ರಿಲ್ 27ರಂದೇ 100 ವೆಂಟಿಲೇಟರ್ ಮತ್ತು 95 ಆಮ್ಲಜನಕ ಸಾಂದ್ರಕಗಳು ಭಾರತಕ್ಕೆ ತಲುಪಿವೆ.

English summary
Chinese President Xi Jinping on Friday wrote to Prime Minister Narendra Modi and expressed readiness to strengthen cooperation with India to fight the pandemic and provide support and help to deal with the current surge of COVID-19 cases in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X