ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಕ್ ಆಧಾರಿತ ದೂರಗಾಮಿ ರಾಕೆಟ್ ಚಾಲಿತ ಸಿಡಿಮದ್ದುಗಳನ್ನು ಪರೀಕ್ಷಿಸಿದ ಚೀನಾ

|
Google Oneindia Kannada News

ಬೀಜಿಂಗ್, ಅಕ್ಟೋಬರ್ 16: ಚೀನಾವು ಟ್ರಕ್ ಆಧಾರಿತ ದೂರಗಾಮಿ ರಾಕೆಟ್ ಚಾಲಿತ ಸಿಡಿಮದ್ದುಗಳನ್ನು ಪರೀಕ್ಷಿಸಿದೆ.

ಶತ್ರುಗಳ ಮೇಲೆ ದೂರದಿಂದಲೇ ಅಡೆತಡೆಗಳನ್ನು ಸ್ಥಾಪಿಸಿ, ತಾಪಮಾನ ಮತ್ತು ಆಮ್ಲಜನಕ ಕಡಿಮೆ ಇರುವ ಇಡೀ ಪ್ರದೇಶದಲ್ಲಿ ಗಣಿಗಳನ್ನು ಇರಿಸುವ ಗುರಿಯನ್ನು ಸಾಧಿಸಿದೆ. ಯುದ್ಧದ ಸಮಯದಲ್ಲಿ ಕ್ಷಿಪ್ರ ಸ್ಥಳೀಯ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗೆ ಹೊಂದಿಕೊಳ್ಳಲಿದ್ದು ಮನುಷ್ಯ ಮಾಡುವ ಕೆಲಸಕ್ಕಿಂತ ಹೊಸ ಶಸ್ತ್ರಾಸ್ತ್ರ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ವರದಿ ತಿಳಿಸಿದೆ.

ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ: ಚೀನಾಕ್ಕೆ ಭಾರತದ ಖಡಕ್ ಸಂದೇಶಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ: ಚೀನಾಕ್ಕೆ ಭಾರತದ ಖಡಕ್ ಸಂದೇಶ

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಟಿಬೆಟ್ ಮಿಲಿಟರಿ ಕಮಾಂಡ್ ನ ಮಾರ್ಗದರ್ಶನದಲ್ಲಿ ಬ್ರಿಗೇಡ್, 4,300 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿರುವ ತರಬೇತಿ ಮೈದಾನದಲ್ಲಿ ಯುದ್ಧ ಸನ್ನಿವೇಶಗಳ ಅಡಿಯಲ್ಲಿ ಪರೀಕ್ಷಾ ಕಸರತ್ತನ್ನು ನಡೆಸಿದೆ ಎಂದು ಚೀನಾ ಸೇನೆಯ ಹೇಳಿಕೆಯನ್ನು ಅಲ್ಲಿನ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

Chinese PLA Tests Truck-Based Rocket-Propelled Mine Launchers

ಭಾರತ-ಚೀನಾ ಸೇನೆಗಳು ಪೂರ್ವ ಲಡಾಕ್ ನಲ್ಲಿ ನಿಯೋಜನೆಗೊಂಡಿರುವ ಸಂದರ್ಭದಲ್ಲಿ ಗಡಿಯಲ್ಲಿ ಅಲರ್ಟ್ ಆಗಿರುವಂತೆ, ಯುದ್ಧದ ಸಿದ್ಧತೆ ಕಡೆಗೆ ಗಮನ ಹರಿಸುವಂತೆ ಸೇನೆಗೆ ಅಲ್ಲಿನ ಅಧ್ಯಕ್ಷ ಕ್ಸಿ-ಜಿನ್ ಪಿಂಗ್ ಆದೇಶ ನೀಡಿರುವ ಬೆನ್ನಲ್ಲೇ ಸೇನೆಯನ್ನು ಉನ್ನತ ದರ್ಜೆಗೇರಿಸಿರುವುದು ಗಮನಾರ್ಹವಾಗಿದೆ.

ಚೀನಾದ ಸೇನೆಯ ಹೇಳಿಕೆಗೆ ಪೂರಕವಾಗಿ ಒಂದು ಟ್ರಕ್ 40 ರಾಕೆಟ್-ಉಡಾವಣಾ ಬ್ಯಾರೆಲ್‌ಗಳನ್ನು ಒಯ್ಯುತ್ತದೆ, ಮತ್ತು ರಾಕೆಟ್-ಚಾಲಿತ ಗಣಿಗಳನ್ನು ಮಲ್ಟಿಪಲ್ ರಾಕೆಟ್ ಉಡಾವಣೆ ವ್ಯವಸ್ಥೆಯಂತೆ ಕಡಿಮೆ ಅಂತರದಲ್ಲಿ ಹಾರಿಸಲಾಗುತ್ತದೆ.

English summary
China's military has recently conducted live-fire test training exercises with truck-based multiple rocket-propelled mine launchers at a high altitude, an official media report said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X