• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ 10 ಬಾಟಲ್ ಬಿಯರ್ ಸೇವಿಸಿದ ವ್ಯಕ್ತಿಯ ಗತಿ ಏನಾಯ್ತು..?

|
Google Oneindia Kannada News

ಬೀಜಿಂಗ್, ಜೂನ್ 22:ವ್ಯಕ್ತಿಯೊಬ್ಬ 10 ಬಾಟಲ್ ಬಿಯರ್ ಸೇವಿಸಿದರೆ ಏನಾಗಬಹುದು? ಹೆಚ್ಚಾಗಿ ಬಿಯರ್ ಕುಡಿದು ಹಾಗೇ ಮಲಗಿಬಿಟ್ರೆ ಏನಾಗುತ್ತೆ? ಈ ಪ್ರಶ್ನೆಗಳಿಗೆ ನಿಮಗೆ ಒಂದ್ವೇಳೆ ಉತ್ತರ ಗೊತ್ತಿರದಿದ್ರೆ ಒಂದು ನೈಜ ಘಟನೆಯನ್ನು ಇಲ್ಲಿ ತಿಳಿಸಲಾಗಿದೆ ಮುಂದೆ ಓದಿ..

   ಗ್ರಹಣದ ದಿನ ಕಾವೇರಿ ನದಿಯಲ್ಲಿ ಮಿಂದು ತಂದೆಯನ್ನು ಸ್ಮರಿಸಿದ ಡಿಕೆಶಿ | DK ShivaKumar | Oneindia Kannada

   ಚೀನಾದಲ್ಲಿ ವ್ಯಕ್ತಿಯೊಬ್ಬ 10 ಬಾಟಲ್ ಬಿಯರ್ ಸೇವಿಸಿದ್ದಾನೆ. ಇಷ್ಟರ ಮಟ್ಟಿಗೆ ಕಂಠಪೂರ್ತಿ ಕುಡಿದ ವ್ಯಕ್ತಿ ನಂತರ ನಿದ್ರೆಗೆ ಜಾರಿದ್ದಾನೆ. ಅವನು ತುಂಬಾ ಕುಡಿದಿದ್ದರಿಂದ 18 ಗಂಟೆಗಳ ಕಾಲ ಮಲಗಿದ್ದನು. ಇಷ್ಟು ಹೊತ್ತು ಮಲಗಿದ್ದರಿಂದ ಆತನ ಗತಿ ಏನಾಗಿರಬಹುದು ಅಂತೀರಾ? ಆತನ ಮೂತ್ರವು ನಿಂತು ಹೋಗಿದೆ. ಜೊತೆಗೆ ಆಗಬಾರದ್ದೂ ಆಗಿ ಹೋಗಿದೆ.

   ಚೀನಾ ಬ್ರ್ಯಾಂಡ್‌ಗಳಿಗೆ ಪ್ರಚಾರಕರಾಗಿರುವ ಸೆಲೆಬ್ರೆಟಿಗಳು: ಬಹುಪಾಲು ಜನರ ವಿರೋಧಚೀನಾ ಬ್ರ್ಯಾಂಡ್‌ಗಳಿಗೆ ಪ್ರಚಾರಕರಾಗಿರುವ ಸೆಲೆಬ್ರೆಟಿಗಳು: ಬಹುಪಾಲು ಜನರ ವಿರೋಧ

   ಹೌದು, ತುಂಬಾನೆ ಬಿಯರ್ ಕುಡಿದು ಹಾಗೇ ಮಲಗಿಬಿಟ್ರೆ ಹೀಗೆ ಆಗೋದು ನೋಡಿ. ಚೀನಾದ ವ್ಯಕ್ತಿ 10 ಬಾಟರ್ ಬಿಯರ್ ಸೇವಿಸಿ, ನಂತರ ಮೂತ್ರ ವಿಸರ್ಜನೆಯನ್ನೂ ಮಾಡದೇ ನಿದ್ರೆಗೆ ಜಾರಿದ ಪರಿಣಾಮ, ಮೂತ್ರಕೋಶದಲ್ಲಿ ಒತ್ತಡ ಹೆಚ್ಚಾಗಿದೆ. 18 ಗಂಟೆಗಳು ಆತ ಮೂತ್ರ ವಿಸರ್ಜನೆಯನ್ನೇ ಮಾಡದೇ ಇದ್ದುದ್ದರಿಂದ ಒತ್ತಡ ಹೆಚ್ಚಾಗಿ ಮೂತ್ರಕೋಶವೇ ಚಿದ್ರಗೊಂಡಿದೆ.

   ಆತನಿಗೆ ನಿದ್ರೆಯಿಂದ ಎಚ್ಚರವಾಗೋವರೆಗೂ ಇದು ಗೊತ್ತೆ ಆಗಿಲ್ಲ ಅನ್ನೋದು ಇನ್ನಷ್ಟು ಆಶ್ಚರ್ಯ ಮೂಡಿಸುತ್ತದೆ. 18 ಗಂಟೆಗಳ ನಿದ್ರೆಯ ನಂತರ ಎಚ್ಚರವಾದಾಗ, ಆತನ ಹೊಟ್ಟೆಯ ಸುತ್ತಲೂ ತೀವ್ರವಾದ ನೋವು ಕಾಣಿಸಿಕೊಂಡಿದೆ. ಆತನ ಒದ್ದಾಟ ನೋಡಿ ಸ್ಥಳೀಯರು ಆತುರದಿಂದ ಆ ವ್ಯಕ್ತಿಯಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಆತನ ಪರಿಸ್ಥಿತಿ ನೋಡಿ ವೈದ್ಯರೇ ಬೆಚ್ಚಿಬಿದ್ದಿದ್ದಾರೆ.

   ವರದಿಯ ಪ್ರಕಾರ, ಈ ವ್ಯಕ್ತಿಯ ಹೆಸರು ಹೂ. ವಯಸ್ಸು 40 ವರ್ಷ. ಅವನು ಕುಡಿದು 18 ಗಂಟೆಗಳ ಕಾಲ ಮಲಗಿದ್ದರಿಂದ ಆತನ ಮೂತ್ರ ಕಟ್ಟಿಕೊಂಡಿದೆ. ಅಷ್ಟೇ ಏಕೆ ಆತ ನಿದ್ರೆಯಿಂದ ಎಚ್ಚರಗೊಳ್ಳುವುದರೊಳಗೆ ಆತನ ಮೂತ್ರಕೋಶ ಮೂರು ಭಾಗಗಳಾಗಿ ಚಿದ್ರಗೊಂಡಿದೆ. ಹೀಗಾಗಿ ಆತನಿಗೆ ಬಲವಾಗಿ ನೋವು ಕಾಣಿಸಿಕೊಂಡಿದ್ದು, ನೇರವಾಗಿ ಮಲಗಲು ಸಾಧ್ಯವಾಗಿರಲಿಲ್ಲ.

   ವೈದ್ಯರು ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿ ಜೀವವನ್ನು ಉಳಿಸಿದ್ದಾರೆ. ವರದಿ ಪ್ರಕಾರ ಈಗ ಹೂ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

   English summary
   After drinking more than 10 bottles of beer, a Chinese holding his urine for about 18 hours exploded from 3 parts of his bladder.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X