• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

SCO ಸಭೆ: ರಾಜನಾಥ್ ಸಿಂಗ್ ಭೇಟಿಗೆ ಚೀನಾ ಸಚಿವರ ದುಂಬಾಲು?

|

ನವದೆಹಲಿ, ಸಪ್ಟೆಂಬರ್.04: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿ ಸಂಘರ್ಷದ ನಡುವೆ ಶಾಂಘೈ ಸಹಕಾರ ಸಂಸ್ಥೆ(SCO)ಯ ಸಭೆಯಲ್ಲಿ ಚೀನಾದ ರಕ್ಷಣಾ ಸಚಿವ ವೀ ಫೆಂಗಿ ಮತ್ತು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖಾಮುಖಿಯಾಗಲಿದ್ದಾರೆ.

   ದಯವಿಟ್ಟು ಭೇಟಿಗೆ ಒಂದು ಅವಕಾಶ ಕೊಡಿ ಪ್ಲೀಸ್ ಎಂದ China | Oneindia Kannada

   ಮಾಸ್ಕೋದಲ್ಲಿ ಶುಕ್ರವಾರ ನಡೆಯುತ್ತಿರುವ ಎಸ್ ಸಿಓ ಸಭೆಯಲ್ಲಿ ಭಾಗಿಯಾಗಲು ಉಭಯ ನಾಯಕರು ತೆರಳಿದ್ದಾರೆ. ಆದರೆ ಈ ಸಭೆಯ ಹೊರತಾಗಿ ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚೀನಾ ರಕ್ಷಣಾ ಸಚಿವ ವೀ ಫೆಂಗಿ ಸಭೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

   ಚೀನಾಗೆ ಕಪಾಳಮೋಕ್ಷ: ಡ್ರ್ಯಾಗನ್ ಶತ್ರು ಬಿಡುಗಡೆ

   ಭಾರತ-ಚೀನಾ ಪೂರ್ವ ಗಡಿಯ ಲಡಾಖ್ ಪ್ರದೇಶದಲ್ಲಿ ನಾಲ್ಕು ತಿಂಗಳುಗಳಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಈ ಹಿನ್ನೆಲೆ ಭಾರತದ ರಕ್ಷಣಾ ಸಚಿವರ ಜೊತೆಗೆ ಸಭೆ ನಡೆಸುವುದಕ್ಕೆ ಚೀನಾ ಕಡೆಯಿಂದ ಉತ್ಸುಕತೆ ತೋರುತ್ತಿದ್ದಾರೆ. ಆದರೆ ಈವರೆಗೂ ಸಮಯ ಮತ್ತು ಸಭೆ ನಿಗದಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಅಧಿಕೃತ ಮಾಹಿತಿಯು ಹೊರ ಬಿದ್ದಿಲ್ಲ.

   ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಚೀನಾ ಸೇನೆ

   ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಚೀನಾ ಸೇನೆ

   ಲಡಾಖ್ ಪೂರ್ವ ಗಡಿಯಲ್ಲಿ ನಡೆದ ಸಂಘರ್ಷದ ಹೊರತಾಗಿ ಚೀನಾ ಸೇನೆಯು ಇತ್ತೀಚಿಗಷ್ಟೇ ಗಡಿಯಲ್ಲಿ ಕಾಲ್ಕೆರೆದು ನಿಂತಿತ್ತು. ಆಗಸ್ಟ್.29-30ರ ಮಧ್ಯರಾತ್ರಿ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಬ್ಯಾಂಕ್ ಪ್ರದೇಶದಲ್ಲಿ ಅತಿಕ್ರಮವಾಗಿ ಗಡಿ ಪ್ರವೇಶಿಸುವುದಕ್ಕೆ ಪ್ರಯತ್ನಿಸಿತ್ತು. ಚೀನಾದ ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳಿಗೆ ಭಾರತೀಯ ಸೇನೆ ಕೂಡಾ ತಕ್ಕ ಪ್ರತ್ಯುತ್ತರವನ್ನು ನೀಡಿತ್ತು.

   ಚುಶುಲ್ ಬಯಲು ಪ್ರದೇಶದಲ್ಲಿ ಬ್ರಿಗೇಡಿಯರ್ ಚರ್ಚೆ

   ಚುಶುಲ್ ಬಯಲು ಪ್ರದೇಶದಲ್ಲಿ ಬ್ರಿಗೇಡಿಯರ್ ಚರ್ಚೆ

   ಉಭಯ ರಾಷ್ಟ್ರಗಳ ಸೇನಾ ಸಂಘರ್ಷದ ಬೆನ್ನಲ್ಲೇ ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿ ಸಂಘರ್ಷದ ಕುರಿತು ಉಭಯ ರಾಷ್ಟ್ರಗಳ ನಡುವೆ ಬ್ರಿಗೇಡಿಯರ್ ಹಂತದ ಶಾಂತಿ ಮಾತುಕತೆ ನಡೆಸಲಾಗುತ್ತಿದೆ. ಚುಶುಲ್ ಬಯಲು ಪ್ರದೇಶದಲ್ಲಿ ಸೇನಾಧಿಕಾರಿಗಳು ಗುರುವಾರ 5ನೇ ಸುತ್ತಿನ ಚರ್ಚೆ ನಡೆಸುತ್ತಿದ್ದರು. ಪೂರ್ವ ಲಡಾಖ್ ಭಾಗದ ಚುಶುಲ್ ಪ್ರದೇಶದಲ್ಲಿ ಬಹಿರಂಗವಾಗಿ ಉಭಯ ರಾಷ್ಟ್ರಗಳ ಬ್ರಿಗೇಡಿಯರ್ ಹಂತದ ಅಧಿಕಾರಿಗಳು ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂಘರ್ಷದ ಕುರಿತು ಪರಾಮರ್ಶೆ ನಡೆಸಿದ್ದರು.

   ಚೀನಾದಿಂದ ಭಾರತೀಯ ಯೋಧರ ವಿರುದ್ಧ ಬೊಟ್ಟು

   ಚೀನಾದಿಂದ ಭಾರತೀಯ ಯೋಧರ ವಿರುದ್ಧ ಬೊಟ್ಟು

   ಭಾರತೀಯ ಸೇನೆಯ ನಡೆಯ ವಿರುದ್ಧ ಚೀನಾ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿತ್ತು. ಗಡಿಯಲ್ಲಿ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಭಾರತವು ಕೂಡಾ ಸೇನಾ ಯೋಧರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು, ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ ಎಂದು ಆರೋಪಿಸಿತ್ತು. ಕಳೆದ ನಾಲ್ಕು ತಿಂಗಳುಗಳಿಂದ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಪದೇ ಪದೆ ಎರಡು ರಾಷ್ಟ್ರಗಳ ಸೇನಾ ಯೋಧರ ನಡುವೆ ಸಂಘರ್ಷ ನಡೆಸುತ್ತಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗೆ ಮುಂದಾಗಲು ಚೀನಾ ತಿಳಿಸಿತ್ತು.

   ಚೀನಾವನ್ನು ಎದುರಿಸುವ ಮಟ್ಟಕ್ಕೆ ಭಾರತೀಯ ಸೇನೆ ಸಮರ್ಥ

   ಚೀನಾವನ್ನು ಎದುರಿಸುವ ಮಟ್ಟಕ್ಕೆ ಭಾರತೀಯ ಸೇನೆ ಸಮರ್ಥ

   ದೀರ್ಘಕಾಲದವರೆಗೂ ಗಡಿಯಲ್ಲಿ ಯೋಧರನ್ನು ನಿಲ್ಲಿಸಿರುವ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಆರೋಪಗಳು ಕೇಳಿ ಬಂದವು. ಈ ಹಿನ್ನೆಲೆ ಚೀನಾದ ಆಕ್ರಮಣಕಾರಿ ನಡೆಯನ್ನು ಎದುರಿಸಲು ಹಾಗೂ ಚೀನಾದ ಕ್ರಮಗಳನ್ನು ಸೂಕ್ತ ಮತ್ತು ಪರಿಣಾಮಕಾರಿ ಮಾರ್ಗಗಳ ಮೂಲಕ ನಿಭಾಯಿಸುವಲ್ಲಿ ಭಾರತೀಯ ಸೇನೆಯು ಸಮರ್ಥವಾಗಿದೆ ಎಂದು ರಕ್ಷಣಾ ಪಡೆಯ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.

   English summary
   Chinese Defence Ministers Wants Meeting With Rajnath Singh At SCO Meeting.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X