ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಯನ್ಮಾರ್‌ ಗಡಿಯಲ್ಲಿರುವ ಚೀನಾ ನಗರದಲ್ಲಿ ನಾಲ್ಕನೇ ಕೋವಿಡ್‌ ಅಲೆ

|
Google Oneindia Kannada News

ಬೀಜಿಂಗ್, ಜು. 07: ಮಯನ್ಮಾರ್‌ನ ಗಡಿಯಲ್ಲಿರುವ ಚೀನಾದ ನಗರದಲ್ಲಿ ನಾಲ್ಕನೇ ಕೋವಿಡ್‌ ಅಲೆ ಅಪ್ಪಳಿಸಿದ್ದು, ಬುಧವಾರ ಈ ನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದೆ.

ಸುಮಾರು 270,000 ಜನಸಂಖ್ಯೆಯನ್ನು ಹೊಂದಿರುವ ಯುನ್ನಾನ್ ಪ್ರಾಂತ್ಯದ ನಗರವಾದ ರುಯಿಲಿಯ ಮುಖ್ಯ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಮನೆಯಲ್ಲೆ ಇರುವಂತೆ ಸೂಚಿಸಲಾಗಿದೆ. ಹಾಗೆಯೇ ಶಾಲೆಗಳು ಮತ್ತು ಇತರೆ ಕಚೇರಿಗಳನ್ನು ಮುಚ್ಚಲು ತಿಳಿಸಲಾಗಿದೆ. ಕೆಲವು ಅಗತ್ಯ ವಸ್ತುಗಳ ಮಾರುಕಟ್ಟೆಗಳು, ಆಸ್ಪತ್ರೆಗಳು ಮತ್ತು ಔಷಧಾಲಯಗಳು ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.

ಕೊರೊನಾ ಸೋಂಕಿನ ಮೂಲ ವುಹಾನ್ ಲ್ಯಾಬ್ ಅಲ್ಲವೇ ಅಲ್ಲ ಎಂದ ಅಧ್ಯಯನಕೊರೊನಾ ಸೋಂಕಿನ ಮೂಲ ವುಹಾನ್ ಲ್ಯಾಬ್ ಅಲ್ಲವೇ ಅಲ್ಲ ಎಂದ ಅಧ್ಯಯನ

ಜುಲೈ 6 ಕ್ಕೆ ಸ್ಥಳೀಯವಾಗಿ 15 ಹೊಸ ಕೊರೊನಾ ಪ್ರಕರಣಗಳು ಯುನ್ನಾನ್‌ನಲ್ಲಿ ವರದಿಯಾಗಿದ್ದು, ಎಲ್ಲಾ ಪ್ರಕರಣಗಳು ರೂಲಿ ಪ್ರದೇಶದ್ದಾಗಿದೆ. ರುಯಿಲಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಲವು ಮಂದಿ ಕೋವಿಡ್‌ ಲಸಿಕೆ ಪಡೆದವರು, ಕೋವಿಡ್ ವಿರುದ್ದ ಪ್ರತಿಕಾಯ ಸೋಂಕಿತತ ದೇಹದಲ್ಲಿದೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.

Chinese city on Myanmar border hit by fourth Covid wave

ಜುಲೈ 6 ಕ್ಕೆ ದೃಢಪಟ್ಟ ಎರಡು ಪ್ರಕರಣಗಳನ್ನು ಈ ಹಿಂದೆ ಲಕ್ಷಣರಹಿತ ಪ್ರಕರಣಗಳು ಎಂದು ಗುರುತಿಸಲಾಗಿದೆ. ಇತರ 13 ಜನರಿಗೆ ಸೋಂಕು ಇರುವುದು ರೂಲಿಯಲ್ಲಿ ಸಾಮೂಹಿಕ ಪರೀಕ್ಷೆಯ ಮೂಲಕ ತಿಳಿದು ಬಂದಿದೆ.

ಹೊಸ 15 ಪ್ರಕರಣಗಳಲ್ಲಿ ಮೂವರು ಚೀನಾದ ಪ್ರಜೆಗಳು, ಉಳಿದವರು ಮಯನ್ಮಾರ್‌ ನಾಗರಿಕರು, ಅವರಲ್ಲಿ ಇಬ್ಬರು ಮಕ್ಕಳು ಆಗಿದ್ದಾರೆ.

ಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲುಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲು

''ಈವರೆಗೆ ಕೊರೊನಾ ದೃಢಪಟ್ಟ ಏಳು ಮಾದರಿಗಳು ಡೆಲ್ಟಾ ರೂಪಾಂತರ ಮತ್ತು ನೆರೆಯ ರಾಷ್ಟ್ರಗಳ ತಳಿಗಳಿಗೆ ಹೋಲುವ ಜೀನೋಮ್ ಆಗಿದೆ,'' ಎಂದು ರುಯಿಲಿ ಅಧಿಕಾರಿಗಳು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ಕೊರೊನಾ ರೂಪಾಂತರವು ತೀವ್ರವಾಗಿ ಹರಡುತ್ತದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

"ನಾವು ಅಕ್ರಮ ಗಡಿ ಚಟುವಟಿಕೆಗಳನ್ನು ತೀವ್ರವಾಗಿ ತಡೆಯುತ್ತೇವೆ. ಗಡಿ ನಿಯಂತ್ರಣ ಕ್ರಮಗಳನ್ನು ಬಲಪಡಿಸಲಾಗಿದೆ," ಎಂದು ರುಯಿಲಿಯ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಹೈಯ್‌ ಯುಲಾಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜುಲೈ 6 ಕ್ಕೆ ಯುನ್ನಾನ್ ಪ್ರಾಂತ್ಯವು ಸ್ಥಳೀಯವಾಗಿ ಹರಡುವ ಎರಡು ರೋಗಲಕ್ಷಣಗಳಿಲ್ಲದ ಪ್ರಕರಣಗಳನ್ನು ವರದಿಯಾಗಿದೆ. ಒಂದು ಚೀನೀ ಪ್ರಜೆ ಮತ್ತು ಇನ್ನೊಬ್ಬರು ಮಯನ್ಮಾರ್‌ ಪ್ರಜೆ ಎನ್ನಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Chinese city on Myanmar border hit by fourth Covid wave. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X