ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಮಕ್ಕಳ ಅದ್ಬುತ ವ್ಯಾಯಾಮ: ನೋಡಿದ್ರೆ ನೀವು ವಾವ್ ಅಂತೀರ..

|
Google Oneindia Kannada News

ಬೀಜಿಂಗ್ ಜೂನ್ 8: ಚೀನಾದಲ್ಲಿ ದೈಹಿಕ ತರಗತಿಯೊಂದರಲ್ಲಿ ಸಣ್ಣ ಮತ್ತು ಮುದ್ದಾದ ಮಕ್ಕಳು ಅದ್ಭುತವಾಗಿ ವ್ಯಾಯಾಮ ಮಾಡುವ ವಿಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಮಾಜಿ ನಾರ್ವೇಜಿಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಚಿಕ್ಕ ಮಕ್ಕಳ ಗುಂಪು ಅಥ್ಲೆಟಿಕ್ ಸಾಮರ್ಥ್ಯವನ್ನು ತೋರಿಸುತ್ತಾರೆ.

ವಿಡಿಯೊದಲ್ಲಿ ಕಂಡುಬರುವ ಐದು ಮತ್ತು ಆರು ವರ್ಷದೊಳಗಿನ ಚಿಕ್ಕ ಮಕ್ಕಳು ಎರಡೂ ಕೈಗಳಲ್ಲಿ ಬಾಸ್ಕೆಟ್‌ಬಾಲ್‌ಗಳನ್ನು ನೆಲಕ್ಕೆ ಹೊಡೆಯುವುದನ್ನು ಕಾಣಬಹುದು. ಪ್ರತಿಯೊಬ್ಬರೂ ಏಕರೂಪದಲ್ಲಿ ಚಂಡನ್ನು ನೆಲಕ್ಕೆ ಹೊಡೆಯುತ್ತಾರೆ. ಇಲ್ಲಿ ಎಲ್ಲಾ ಮಕ್ಕಳು ನೆಲದ ಮೇಲೆ ಕಾಲು ಚಾಚಿಕೊಂಡು ಕುಳಿತಿದ್ದಾರೆ. ಕಾಲುಗಳನ್ನು ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಸರಿಸುತ್ತಾ ಕಾಲುಗಳಿಗೆ ಚಂಡು ತಾಗದಂತೆ ನೆಲಕ್ಕೆ ಎರಡು ಕೈಗಳಿಂದ ಹೊಡೆಯುತ್ತಾರೆ. ನಿಜಕ್ಕೂ ಇದು ಅದ್ಬುತವೇ ಸರಿ. ವಿಡಿಯೊವನ್ನು ಹಂಚಿಕೊಂಡ ಸೋಲ್ಹೈಮ್, ವಾವ್ 'ಕಿಂಡರ್‌ಗಾರ್ಟನ್ ದೈಹಿಕ ಶಿಕ್ಷಣ ತರಗತಿ' ಎಂದು ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಜನರು ತಮ್ಮದೇ ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಚಿಕ್ಕ ಮಕ್ಕಳನ್ನು 'ಚಿಕ್ಕ ಸಾಹಸಿಗಳು' ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬರು "ಅತ್ಯಂತ ಪ್ರತಿಭಾವಂತರು" ಎಂದು ಕರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, "ಇದಕ್ಕಾಗಿಯೇ ಚೀನಾ ಒಲಿಂಪಿಕ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ" ಎಂದು ಬರೆದಿದ್ದಾರೆ. ವೈರಲ್ ಆದ ವಿಡಿಯೋವನ್ನು ಇಲ್ಲಿಯವರೆಗೆ 80 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಸುದ್ದಿಯನ್ನು ಬರೆಯುವವರೆಗೆ ವಿಡಿಯೊಗೆ 1692 ಲೈಕ್‌ಗಳನ್ನು ಪಡೆದುಕೊಂಡಿದೆ.

Chinese children doing amazing exercises, users said, Little ninja

ಚೀನೀ ಮಕ್ಕಳು ತಮ್ಮ ಕಾಲುಗಳಿಗೆ ವ್ಯಾಯಾಮ ಮಾಡುವಾಗ ಮತ್ತು ತಮ್ಮ ದೇಹವನ್ನು ಪರಿಪೂರ್ಣ ಸಮನ್ವಯದಲ್ಲಿ ಚಲಿಸುವಾಗ ಎರಡೂ ಕೈಗಳಿಂದ ಎರಡು ಚೆಂಡುಗಳನ್ನು ಎಸೆಯುವುದನ್ನು ವೈರಲ್ ವಿಡಿಯೊ ತೋರಿಸುತ್ತದೆ. ಅವರು ತಮ್ಮ ಕಾಲುಗಳನ್ನು ಅಕ್ಕಪಕ್ಕಕ್ಕೆ ಸರಿಸುತ್ತಾ ಬ್ಯಾಸ್ಕೆಟ್‌ಬಾಲ್ ಅನ್ನು ನಿರಂತರವಾಗಿ ಟಾಸ್ ಮಾಡುತ್ತಿದ್ದಾರೆ. ಮಕ್ಕಳು ತಪ್ಪುಗಳಿಲ್ಲದೆ ಚೆಂಡುಗಳನ್ನು ಬೌನ್ಸ್ ಮಾಡುತ್ತಾರೆ.

English summary
A video of small and cute Chinese kids exercising in a physical classroom in China is viral on the Internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X