ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿದೆ ಸಾಕ್ಷ್ಯ; ಗಾಲ್ವಾನ್ ಗಡಿಯಲ್ಲಿ ಬುಲ್ಡೋಜರ್ ನಿಲ್ಲಿಸಿದ ಚೀನಾ!

|
Google Oneindia Kannada News

ನವದೆಹಲಿ, ಜೂನ್.18: ಜಾಗತಿಕ ಮಟ್ಟದಲ್ಲಿ ಚೀನಾದ ನರಿಬುದ್ಧಿಯನ್ನು ಸಾಬೀತುಪಡಿಸುವಂತಾ ಸಾಕ್ಷ್ಯ ಲಭ್ಯವಾಗಿದೆ. ಭಾರತ-ಚೀನಾ ಗಡಿಭಾಗದಲ್ಲಿರುವ ಲಡಾಖ್ ಪೂರ್ವಭಾಗದ ಗಾಲ್ವಾನ್ ನದಿ ಕಣಿವೆಗೆ ಅಡ್ಡಲಾಗಿ ಚೀನಾ ಸೇನೆಯು ಬುಲ್ಡೋಜರ್ ಗಳನ್ನು ನಿಲ್ಲಿಸಿರುವ ಚಿತ್ರವು ಸ್ಯಾಟ್ ಲೈಟ್ ನಲ್ಲಿ ಸೆರೆಯಾಗಿದೆ.

Recommended Video

Maharashtra govt inks MoUs worth Rs 5,000 cr with three Chinese firms | Oneindia Kannada

ಕಳೆದ ಜೂನ್.15 ಮತ್ತು 16ರ ರಾತ್ರಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದ ಒಂದು ಕಿಲೋ ಮೀಟರ್ ದೂರದಲ್ಲೇ ಇರುವ ಗಲ್ವಾನ್ ನದಿ ಕಣಿವೆಯನ್ನು ಚೀನಾ ಬ್ಲಾಕ್ ಮಾಡಿದೆ. ಈ ಕುರಿತು ಸ್ಯಾಟಲೈಟ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಲಡಾಖ್ ಘರ್ಷಣೆಯಲ್ಲಿ 76 ಸೈನಿಕರಿಗೆ ಗಾಯ, ಯಾರೂ ಕಾಣೆಯಾಗಿಲ್ಲಲಡಾಖ್ ಘರ್ಷಣೆಯಲ್ಲಿ 76 ಸೈನಿಕರಿಗೆ ಗಾಯ, ಯಾರೂ ಕಾಣೆಯಾಗಿಲ್ಲ

ಎರಡು ದಿನಗಳ ಹಿಂದೆ ನಡೆಸ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿರುವ ಬಗ್ಗೆ ಭಾರತೀಯ ಸೇನೆಯು ಸ್ಪಷ್ಟಪಡಿಸಿತ್ತು. ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ ಚೀನಾದ 35 ಯೋಧರು ಹತರಾಗಿರುವ ಬಗ್ಗೆ ಅಮೆರಿಕಾದ ಗುಪ್ತಚರ ಇಲಾಖೆ ತಿಳಿಸಿತ್ತು. ಕಳೆದ ಮೇ.5ರಂದು ಮೊದಲ ಬಾರಿಗೆ ಉಭಯ ಸೇನೆಗಳು ಮುಖಾಮುಖಿಯಾಗಿದ್ದು, ಅಂದಿನಿಂದ ಇಂದಿನವರೆಗೂ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಾ ವಾತಾವರಣ ನಿರ್ಮಾಣವಾಗಿದೆ.

ಗಡಿಯಲಲ್ಲಿ ಉಭಯ ರಾಷ್ಟ್ರಗಳ ಸೇನಾ ಮೇಜರ್ ಮುಖಾಮುಖಿ

ಗಡಿಯಲಲ್ಲಿ ಉಭಯ ರಾಷ್ಟ್ರಗಳ ಸೇನಾ ಮೇಜರ್ ಮುಖಾಮುಖಿ

ಗಾಲ್ವಾನ್ ನದಿ ಕಣಿವೆಯ ಪೆಟ್ರೋಲ್ ಪಾಯಿಂಟ್ 14ರ ಬಳಿ ಉಭಯ ರಾಷ್ಟ್ರಗಳ ಸೇನಾ ಮೇಜರ್ಸ್ ಮುಖಾಮುಖಿಯಾದರು. ಬುಧವಾರ ಉಭಯ ಸೇನೆಗಳನ್ನು ಹಿಂದೆ ತೆಗೆದುಕೊಳ್ಳುವ ಬಗ್ಗೆ ನಡೆಸಿದ ಸೇನಾ ಮಟ್ಟದ ಸಭೆಗೆ ಚೀನಾದ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ಕಬ್ಬಿಣದ ರಾಡ್ ಗಳಿಂದ ಭಾರತೀಯ ಸೈನಿಕರ ಮೇಲೆ ಹಲ್ಲೆ

ಕಬ್ಬಿಣದ ರಾಡ್ ಗಳಿಂದ ಭಾರತೀಯ ಸೈನಿಕರ ಮೇಲೆ ಹಲ್ಲೆ

ಗಲ್ವಾನ್ ನದಿ ಕಣಿವೆಯ ಹತ್ತಿರದ ಪೆಟ್ರೋಲ್ ಪಾಯಿಂಟ್ 14ರ ಬಳಿಯ ಸಂಘರ್ಷದಲ್ಲಿ ಚೀನೀ ಸೈನಿಕರು ರೌಡಿಗಳಂತೆ ವರ್ತಿಸಿದ್ದಾರೆ. ಭಾರತೀಯ ಯೋಧರ ಮೇಲೆ ಕಬ್ಬಿಣದ ಸರಳುಗಳು, ಉಗುರು ತುಂಬಿದ ಕ್ಲಬ್‌ಗಳು ಮತ್ತು ಮುಳ್ಳುತಂತಿಯಿಂದ ಸುತ್ತಿದ ಬಂಡೆಗಳಿಂದ ಹಲ್ಲೆ ನಡೆಸಿದ್ದಾರೆ. ಅಸಲಿಗೆ ಪೆಟ್ರೋಲ್ ಪಾಯಿಂಟ್ 14 ಎನ್ನುವುದು ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಅಥವಾ ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿಯ ಚೀನೀ ಸ್ಥಾನಗಳನ್ನು ಕಡೆಗಣಿಸುವ ಭಾರತೀಯ ಭೂಪ್ರದೇಶದ ಒಂದು ವಾಂಟೇಜ್ ಪಾಯಿಂಟ್ ಆಗಿದೆ.

ಗಾಲ್ವಾನ್ ಘರ್ಷಣೆ ನಂತರ ಗಡಿಭಾಗದಲ್ಲಿ 3 ಸೇನೆಯಿಂದ ಅಲರ್ಟ್ಗಾಲ್ವಾನ್ ಘರ್ಷಣೆ ನಂತರ ಗಡಿಭಾಗದಲ್ಲಿ 3 ಸೇನೆಯಿಂದ ಅಲರ್ಟ್

ಗಡಿಯಲ್ಲಿ ನದಿಗೆ ಅಡ್ಡಲಾಗಿ ನಿಂತಿರುವ ಬುಲ್ಡೋಜರ್ಸ್

ಗಡಿಯಲ್ಲಿ ನದಿಗೆ ಅಡ್ಡಲಾಗಿ ನಿಂತಿರುವ ಬುಲ್ಡೋಜರ್ಸ್

ಭಾರತ-ಚೀನಾದ ಗಲ್ವಾನ್ ನದಿ ಕಣಿವೆಯ ಬಳಿ ಬುಲ್ಡೋಜರ್ ಗಳನ್ನು ಅಡ್ಡಲಾಗಿ ನಿಲ್ಲಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಸಲಿಗೆ ಬುಲ್ಡೋಜರ್‌ಗಳು ಕಂಡುಬರುವ ಸ್ಥಳದಲ್ಲಿ ನದಿಯ ಹರಿವು ಸ್ಪಷ್ಟವಾಗಿ ಬದಲಾಗುತ್ತದೆ. ನೀಲಿ ನೀರಿನಲ್ಲಿ ಹರಿಯುವುದರಿಂದ ಸಣ್ಣ, ಮಣ್ಣು ಹೊಳೆಯವರೆಗೆ ಅದು ಸ್ವಲ್ಪ ದೂರದಲ್ಲಿರುವ ಎಲ್‌ಎಸಿಯ ಭಾರತೀಯ ಭಾಗಕ್ಕೆ ದಾಟಿದಾಗ ಅಗ್ರಾಹ್ಯವಾಗುತ್ತದೆ.

ಗಾಲ್ವಾನ್ ನದಿ ಪಕ್ಕದಲ್ಲೇ ನಿಂತ ಚೀನೀ ಟ್ರಕ್ ಗಳು

ಗಾಲ್ವಾನ್ ನದಿ ಪಕ್ಕದಲ್ಲೇ ನಿಂತ ಚೀನೀ ಟ್ರಕ್ ಗಳು

ಭಾರತ-ಚೀನಾ ಗಡಿಯಲ್ಲಿರುವ ಗಾಲ್ವಾನ್ ನದಿ ಪಕ್ಕದಲ್ಲೇ ಚೀನಾ ಸೇನೆಗೆ ಸೇರಿದ ನೂರಾರು ಟ್ರಕ್ ಗಳು, ಬುಲ್ಡೋಜರ್ ಗಳು, ಸೇನಾ ವಾಹನಗಳನ್ನು ನಿಲ್ಲಿಸಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಪ್ರದೇಶದಲ್ಲೇ ಚೀನಾದ ಮೋಟಾರು ವಾಹನವು 5 ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತರಿಸಿರುವುದು ಕಾಣುತ್ತದೆ.

ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!

English summary
Chinese army stationed bulldozers across the Galvan River:Satellite Pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X