ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವೇ ಟಾರ್ಗೆಟ್: ಪ್ಯಾಂಗೊಂಗ್ ತ್ಸೋ ಗಡಿಯಲ್ಲಿ ಸೇತುವೆ ನಿರ್ಮಿಸಿದ ಚೀನಾ!

|
Google Oneindia Kannada News

ನವದೆಹಲಿ, ಜನವರಿ 03: ಭಾರತ ಚೀನಾ ನಡುವೆ ಗಡಿ ವಿವಾದ ಮತ್ತೆ ಸದ್ದು ಮಾಡಿದೆ. ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಎದುರಿಸುವ ಉದ್ದೇಶದಿಂದ ಪ್ಯಾಂಗೊಂಗ್ ತ್ಸೋ ಕೆರೆಯ ಚಿಕ್ಕದಾದ ಪ್ರದೇಶ ಖುರ್ನಾಕ್ ಎಂಬಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮೇಲ್ಸೆತುವೆಯೊಂದನ್ನು ನಿರ್ಮಿಸುತ್ತಿದೆ.

ಕಳೆದ ಆಗಸ್ಟ್ 2020ರಲ್ಲಿ ಭಾರತೀಯ ಸೇನೆ ನಡೆಸಿದ ರೀತಿಯ ಕಾರ್ಯಾಚರಣೆಯು ಪ್ಯಾಂಗೊಂಗ್ ತ್ಸೋದ ದಕ್ಷಿಣ ದಂಡೆಯಲ್ಲಿ ಪ್ರಾಬಲ್ಯ ಸಾಧಿಸಲು ಕಾರಣವಾಯಿತು. ಭವಿಷ್ಯದಲ್ಲಿ ಇಂಥ ಕಾರ್ಯಾಚರಣೆಯನ್ನು ಎದುರಿಸಲು ಪೂರ್ವ-ನಿರ್ಮಿತ ರಚನೆಗಳೊಂದಿಗೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ ಎಂದು ರಕ್ಷಣಾ ಮತ್ತು ಭದ್ರತಾ ಸ್ಥಾಪನೆಯ ಮೂಲಗಳು ತಿಳಿಸಿವೆ.

ಗಾಲ್ವಾನ್‌ ಕಣಿವೆಯಲ್ಲಿ ಚೀನಾದ ಬಾವುಟ: ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಕಿಡಿಗಾಲ್ವಾನ್‌ ಕಣಿವೆಯಲ್ಲಿ ಚೀನಾದ ಬಾವುಟ: ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಕಿಡಿ

ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಚೀನಾದ ಈ ಸೇತುವೆಯು ಖುರ್ನಾಕ್‌ನಿಂದ ರುಡೋಕ್ ಮೂಲಕ ದಕ್ಷಿಣದ ದಡಕ್ಕೆ 180 ಕಿ.ಮೀ. ಸುತ್ತು ಹಾಕುವುದನ್ನು ತಡೆಯುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸೇತುವೆಯಿಂದ 150 ಕಿ.ಮೀ ಅಂತರ ಕಡಿತ

ಸೇತುವೆಯಿಂದ 150 ಕಿ.ಮೀ ಅಂತರ ಕಡಿತ

ಈ ಮೊದಲು ಖುರ್ನಾಕ್‌ನಿಂದ ರುಡೋಕ್ ತೆರಳಲು 200 ಕಿಲೋ ಮೀಟರ್ ಬೇಕಾಗಿದ್ದು, ಆದರೆ ಸೇತುವೆ ನಿರ್ಮಾಣದಿಂದಾಗಿ ಎರಡು ಪ್ರದೇಶಗಳ ನಡುವಿನ ಅಂತರ 40 ರಿಂದ 50 ಕಿಲೋ ಮೀಟರ್ ಆಗುತ್ತದೆ. ಆ ಮೂಲಕ 150 ಕಿಲೋ ಮೀಟರ್ ದೂರವನ್ನು ಕಡಿತಗೊಳಿಸಿದಂತೆ ಆಗುತ್ತದೆ. 135-ಕಿಮೀ ಉದ್ದದ ಪ್ಯಾಂಗೊಂಗ್ ತ್ಸೊ, ಭಾಗಶಃ ಲಡಾಖ್ ಪ್ರದೇಶದಲ್ಲಿ ಮತ್ತು ಭಾಗಶಃ ಟಿಬೆಟ್‌ನಲ್ಲಿದ್ದು, ಕಳೆದ 2020ರ ಮೇ ತಿಂಗಳಿನಿಂದ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.

ಚೀನಾ ಸೇನೆ ಮತ್ತು ಸೇನಾ ಸಾಮಗ್ರಿ ರವಾನೆಗೆ ರಸ್ತೆ

ಚೀನಾ ಸೇನೆ ಮತ್ತು ಸೇನಾ ಸಾಮಗ್ರಿ ರವಾನೆಗೆ ರಸ್ತೆ

"ಗಡಿಯಲ್ಲಿ ಸೇತುವೆಗೆ ತಲುಪಲು ಹಾಗೂ ಸೇತುವೆಯಿಂದ ತೆರಳುವುದಕ್ಕಾಗಿ ಹೊಸ ರಸ್ತೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧರು ಹಾಗೂ ಸೇನಾ ಸಾಮಗ್ರಿಗಳನ್ನು ವೇಗವಾಗಿ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ರಸ್ತೆ ಮಾರ್ಗವನ್ನು ನಿರ್ಮಿಸಲಾಗುತ್ತಿದೆ," ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತೀಯ ಸೇನೆಗೆ ತಿರುಗೇಟು ನೀಡಲು ಆಗಿರಲಿಲ್ಲ

ಭಾರತೀಯ ಸೇನೆಗೆ ತಿರುಗೇಟು ನೀಡಲು ಆಗಿರಲಿಲ್ಲ

"ಕಳೆದ ಆಗಸ್ಟ್ 2020ರಲ್ಲಿ ನಾವು ದಕ್ಷಿಣದ ದಂಡೆಯಲ್ಲಿ ಅವರ ರಕ್ಷಾಕವಚದಲ್ಲಿ ಒಡಕು ಮೂಡಿಸುವಲ್ಲಿ ಯಶಸ್ವಿಯಾದೆವು. ಚೀನೀಯರು ಸೇನಾ ಪ್ರಾಬಲ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಅಂದು ಹಿಂತಿರುಗಿದ್ದು, ಹೊಸ ರಚನೆಯೊಂದಿಗೆ ಮುನ್ನುಗ್ಗಲು ಸಿದ್ಧರಾದರು. ಮುಂದಿನ 24 ರಿಂದ 48 ಗಂಟೆಗಳಲ್ಲಿ ಹೆಚ್ಚು ಶಕ್ತಿಯಾಲಿಯಾಗಿ ಪ್ರತಿದಾಳಿಗೆ ಮುಂದಾದರು, ಆದರೆ ಅಷ್ಟರಲ್ಲಿ ಭಾರತೀಯ ಸೇನೆಗೆ ಪ್ರತಿರೋಧವೊಡ್ಡುವುದಕ್ಕೆ ತಡವಾಗಿತ್ತು. ಅಂದಿನ ಘಟನೆಯಿಂದ ಅವರು ಬಹುಶಃ ಪಾಠ ಕಲಿತಿದ್ದು, ಅದಕ್ಕಾಗಿ ತ್ವರಿತ ಗತಿಯಲ್ಲಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ದೊಡ್ಡ ದಾರಿಯಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಹಂತಗಳಲ್ಲಿ ತ್ವರಿತ ಗತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಚೀನಿಯರಿಂದ ಮೊಲ್ಡೊ ಗ್ಯಾರಿಸನ್‌ಗೆ ಹೊಸ ರಸ್ತೆ

ಚೀನಿಯರಿಂದ ಮೊಲ್ಡೊ ಗ್ಯಾರಿಸನ್‌ಗೆ ಹೊಸ ರಸ್ತೆ

ಕಳೆದ ಸೆಪ್ಟೆಂಬರ್ 2020 ಮತ್ತು 2021ರ ಮಧ್ಯದ ನಡುವೆ ಆ ಪ್ರದೇಶದಲ್ಲಿ ಘರ್ಷಣೆ ನಡೆದ ಸಂದರ್ಭದಲ್ಲಿ ಚೀನೀಯರು ಭಾರತೀಯ ಸೈನಿಕರು ಕಾಣಿಸುವಂತೆ ಮತ್ತು ಅನುಕೂಲಕರ ಎತ್ತರದ ಮೇಲಿರುವ ಉಪಕರಣಗಳನ್ನು ತಪ್ಪಿಸಲು ಮೊಲ್ಡೊ ಗ್ಯಾರಿಸನ್‌ಗೆ ಹೊಸ ರಸ್ತೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಚೀನಾದ ಪಡೆಗಳು ದಕ್ಷಿಣದ ದಂಡೆಗಳಿಂದ ಹಿಂದೆ ಸರಿದಿದ್ದವು.

"ಭಾರತ ಮತ್ತು ಚೀನಾದ ನಡುವಿನ ಸಂಘರ್ಷದ ಸಂದರ್ಭದಲ್ಲಿಯೇ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸಿದ ಚೀನಾ, 2021ರ ಮಧ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟ ಸಮಯದಲ್ಲಿಯೇ ತನ್ನ ಕಾರ್ಯವನ್ನು ಪೂರ್ಣಗೊಳಿಸಿಕೊಂಡಿದೆ," ಎಂದು ಮೂರನೇ ಮೂಲಗಳು ತಿಳಿಸಿವೆ.

ಭಾರತೀಯ ಸೇನೆ ಎದುರಿಸಲು ಹಲವು ಮಾರ್ಗಗಳ ರಚನೆ

ಭಾರತೀಯ ಸೇನೆ ಎದುರಿಸಲು ಹಲವು ಮಾರ್ಗಗಳ ರಚನೆ

ಭವಿಷ್ಯದಲ್ಲಿ ದಕ್ಷಿಣದ ದಂಡೆಗಳಲ್ಲಿ ಭಾರತೀಯ ಪಡೆಗಳ ಯಾವುದೇ ಸಂಭವನೀಯ ಕಾರ್ಯಾಚರಣೆಗಳನ್ನು ಎದುರಿಸಲು ಪೀಪಲ್ಸ್ ಲಿಬರೇಷನ್ ಆರ್ಮಿ ಬಹು ಮಾರ್ಗಗಳನ್ನು ರಚಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ThePrint ಈ ಹಿಂದೆ ವರದಿ ಮಾಡಿದಂತೆ, ಸಂಘರ್ಷದ ಸಮಯದಲ್ಲಿಯೂ ಚೀನಾ ತನ್ನ ಮೂಲಸೌಕರ್ಯ ನಿರ್ಮಾಣವನ್ನು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಉದ್ದಕ್ಕೂ ಹೆಚ್ಚಿಸಿದೆ. ಇದು ಹೊಸ ರಸ್ತೆಗಳ ನಿರ್ಮಾಣ, ಮೇಲ್ಮೈಯಿಂದ ವಾಯು ಕ್ಷಿಪಣಿ ತಾಣಗಳು, ಹೆಲಿಪೋರ್ಟ್‌ಗಳು, ವಾಸಸ್ಥಳಗಳು ಇತ್ಯಾದಿಗಳನ್ನು ಒಳಗೊಂಡಿತ್ತು. ಹೊಸ ರಸ್ತೆಗಳು, ಸುರಂಗಗಳು, ಭೂಗತ ಯುದ್ಧಸಾಮಗ್ರಿ ಡಿಪೋಗಳು ಮತ್ತು ಹೊಸ ಯುದ್ಧ ಉಪಕರಣಗಳ ಇಂಡಕ್ಷನ್‌ಗಳ ನಿರ್ಮಾಣದೊಂದಿಗೆ ಭಾರತವೂ LAC ಉದ್ದಕ್ಕೂ ಬಹು ಮೂಲಸೌಕರ್ಯ ನಿರ್ಮಾಣವನ್ನು ಕೈಗೊಂಡಿದೆ.

English summary
Chinese army building bridge over Pangong Tso on its territory to counter possible Indian Army operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X