• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳ ಗ್ರಹಕ್ಕೂ ಲಗ್ಗೆ ಇಟ್ಟ ಚೀನಾ, ‘ಟಿಯಾನ್ವೆನ್-1’ ಯಶಸ್ವಿ ಕಾರ್ಯಾಚರಣೆ

|

ಚಂದ್ರನ ಅಂಗಳ ಮುಟ್ಟಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಸದ್ದು ಮಾಡುತ್ತಿರುವ ಚೀನಾ ಇದೀಗ ಮಂಗಳ ಗ್ರಹದ ಸಮೀಪಕ್ಕೆ ತಲುಪಿಬಿಟ್ಟಿದೆ. 2020ರಲ್ಲಿ ಚೀನಾ ಉಡಾಯಿಸಿದ್ದ 'ಟಿಯಾನ್ವೆನ್-1' ಯಶಸ್ವಿಯಾಗಿ ಮಂಗಳನ ಕಕ್ಷೆ ತಲುಪಿದೆ.

'ಟಿಯಾನ್ವೆನ್-1' ಮಂಗಳ ಗ್ರಹದ ಕಕ್ಷೆಯನ್ನು ತಲುಪಿ, ಹಲವು ಚಿತ್ರಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಿದೆ. ಈ ಬಗ್ಗೆ ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಸಿಎನ್‌ಎಸ್‌ಎ ಮಹತ್ವದ ಮಾಹಿತಿ ನೀಡಿದೆ.

ಬ್ಲ್ಯಾಕ್ & ವೈಟ್ ಫೋಟೋಗಳು ಇವಾಗಿದ್ದು, ಮಂಗಳನ ನೆಲದ ಮೇಲಿಂದ ಸುಮಾರು 22 ಲಕ್ಷ ಕಿಲೋ ಮೀಟರ್‌ ಎತ್ತರದಿಂದ ಫೋಟೋ ಕ್ಲಿಕ್ಕಿಸಲಾಗಿದೆ ಎಂದಿದೆ 'ಸಿಎನ್‌ಎಸ್‌ಎ'. ಬಾಹ್ಯಾಕಾಶ ಕ್ಷೇತ್ರದ ಅನ್ವೇಷಣೆಗೆ ಸಾಕಷ್ಟು ಪೈಪೋಟಿ ಏರ್ಪಟ್ಟಿರುವ ಸಮಯದಲ್ಲೇ 'ಟಿಯಾನ್ವೆನ್-1' ಉಡಾವಣೆಗಾಗಿ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಪ್ಲ್ಯಾನ್ ರೂಪಿಸಿದ್ದರು.

ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..!

ಕಳೆದ ಜುಲೈನಲ್ಲಿ ಯಶಸ್ವಿಯಾಗಿ ಉಡಾವಣೆಯಾದ ಈ 'ಟಿಯಾನ್ವೆನ್-1' ನೌಕೆ, ನೂರಾರು ಅಡೆತಡೆಗಳು ಮೀರಿ ಮಂಗಳ ಗ್ರಹದ ಕಕ್ಷೆಗೆ ಎಂಟ್ರಿಕೊಟ್ಟಿದೆ. ಸುಮಾರು 5 ಟನ್ ತೂಕವಿರುವ 'ಟಿಯಾನ್ವೆನ್-1' ಬಾಹ್ಯಾಕಾಶ ನೌಕೆ ರೋವರ್ ಹಾಗೂ ಲ್ಯಾಂಡರ್ ಒಳಗೊಂಡಿದೆ.

 ಮಂಗಳನ ಮಣ್ಣೇ ಟಾರ್ಗೆಟ್..!

ಮಂಗಳನ ಮಣ್ಣೇ ಟಾರ್ಗೆಟ್..!

ಭೂಮಿ ಬಿಟ್ಟು ಬೇರೆ ಎಲ್ಲೆಲ್ಲಿ ಜೀವಿಗಳು ಬದುಕಿವೆ ಎಂಬ ಪ್ರಶ್ನೆ ವಿಜ್ಞಾನ ಲೋಕವನ್ನು ಶತ ಶತಮಾನಗಳಿಂದ ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಹಲವು ಪ್ರಶ್ನೆಗಳೇ ಎದುರಾಗಿವೇ ಹೊರತು, ಉತ್ತರ ಮಾತ್ರ ಸಿಕ್ಕಿಲ್ಲ. ಇಷ್ಟಾದರೂ ಮಾನವ ತನ್ನ ಬಾಹ್ಯಾಕಾಶ ಅನ್ವೇಷಣೆ ಕೈಬಿಡುತ್ತಿಲ್ಲ. ಮರಳಿ, ಮರಳಿ ಯತ್ನ ಮಾಡುತ್ತಿದ್ದಾನೆ. ಮುಖ್ಯವಾಗಿ ಭೂಮಿಗೆ ಹತ್ತಿರದಲ್ಲೇ ಇರುವ, ಭೂಮಿ ಜೊತೆಗೆ ಸಾಕಷ್ಟು ಹೋಲಿಕೆ ಇರುವ ಮಂಗಳ ಗ್ರಹ ಪ್ರತಿಯೊಂದು ದೇಶದ ಟಾರ್ಗೆಟ್. ಇದಕ್ಕಾಗಿ ಬಲಾಢ್ಯ ರಾಷ್ಟ್ರಗಳ ಜೇಬಿನಿಂದ ಲಕ್ಷ ಲಕ್ಷ ಕೋಟಿ ಖರ್ಚಾಗಿ ಹೋಗಿದೆ. ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಮಂಗಳ ಗ್ರಹದ ಮಣ್ಣು ಚಿನ್ನಕ್ಕಿಂತಲೂ ಮೌಲ್ಯಯುತವಾಗಿದೆ.

 ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು..!

ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು..!

ಮಂಗಳನ ಮಣ್ಣು ಅಗೆಯುವುದರಿಂದ ಹಲವು ವಿಚಾರಗಳು ಸ್ಪಷ್ಟವಾಗಲಿವೆ. ಏಕೆಂದರೆ ಅಲ್ಲಿ ನೀರಿನ ಮೂಲ ಪತ್ತೆಯಾಗಿದೆ ಹಾಗೂ ಜೀವ ಸಮೂಹ ಬದುಕಿತ್ತು ಎಂಬುದಕ್ಕೆ ಹಲವು ಕುರುಹು ಸಿಕ್ಕಿದೆ. ಆದರೆ ಯಾವುದು ಕೂಡ 100ಕ್ಕೆ 100ರಷ್ಟು ಸ್ಪಷ್ಟವಾಗಿಲ್ಲ. ಈ ಕಾರಣಕ್ಕೆ ಪ್ರತಿಯೊಂದು ದೇಶವೂ ಮಂಗಳನ ಮಣ್ಣು ಅಗೆಯಲು ಯತ್ನಿಸುತ್ತಿದೆ. ಇದೀಗ ಚೀನಾ ನೌಕೆ ಮೂಲಕ ಮಂಗಳನ ನೆಲ ಮುಟ್ಟುವ ರೋವರ್‌ ಕೂಡ ಮಂಗಳ ಗ್ರಹದ ಮಣ್ಣಿನ ಅಧ್ಯಯನ ನಡೆಸಲಿದೆ. ಈ ಮೂಲಕ ಮಂಗಳನ ಮೇಲೆ ಜೀವಿಗಳು ಬದುಕಿದ್ದವಾ ಅಥವಾ ಇಲ್ಲವಾ ಎಂಬುದನ್ನು ಜಗತ್ತಿಗೆ ತಿಳಿಸಲು ಚೀನಾದ ‘ಟಿಯಾನ್ವೆನ್-1' ಪ್ರಯತ್ನಿಸಲಿದೆ.

ಫೆ.28ಕ್ಕೆ ಬ್ರೆಜಿಲಿಯನ್,ಭಾರತೀಯ ಸ್ಟಾರ್ಟ್‌ಅಪ್ ಉಪಗ್ರಹ ಉಡಾವಣೆ

 ಒಂದೇ ತಿಂಗಳಲ್ಲಿ 3 ಯೋಜನೆ..!

ಒಂದೇ ತಿಂಗಳಲ್ಲಿ 3 ಯೋಜನೆ..!

ಮಂಗಳ ಗ್ರಹ ಈಗ ಅದೆಷ್ಟು ಫೇಮಸ್ ಎಂದರೆ, ಫೆಬ್ರವರಿ ಒಂದೇ ತಿಂಗಳಲ್ಲಿ ಮಂಗಳನಿಗೆ ಸಂಬಂಧಪಟ್ಟ ಒಟ್ಟು 3 ಯೋಜನೆಗಳು ಅಂತಿಮ ಹಂತ ತಲುಪಲಿವೆ. ಈ ಪೈಕಿ ಯುಎಇ ನಿರ್ಮಿತ ಬಾಹ್ಯಾಕಾಶ ನೌಕೆ ‘ಹೋಪ್' ಈಗಾಗಲೇ ಮಂಗಳ ಗ್ರಹದ ಕಕ್ಷೆ ತಲುಪಿ ಆಗಿದೆ. ಚೀನಾದ ನೌಕೆ ‘ಟಿಯಾನ್ವೆನ್-1' ಕೂಡ ಗುರಿ ತಲುಪಿದೆ. ಈಗ ಬಾಕಿ ಉಳಿದಿರುವುದು ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಉಡಾಯಿಸಿರುವ ‘ಪೆರ್‌ಸೆವೆರನ್ಸ್' ನೌಕೆಯ ಫಲಿತಾಂಶ ಮಾತ್ರ. ಹೀಗೆ ಅರಬ್, ಚೀನಾ ಮತ್ತು ಅಮೆರಿಕ ನಡುವೆ ಮಂಗಳ ಗ್ರಹದ ಅಧ್ಯಯನಕ್ಕೆ ದೊಡ್ಡ ಪೈಪೋಟಿಯೇ ಏರ್ಪಟ್ಟಿದೆ ಎನ್ನಬಹುದು.

 ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. ‘ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ ‘ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

 12 ವರ್ಷ ಕಾಯಬೇಕು..!

12 ವರ್ಷ ಕಾಯಬೇಕು..!

ಮಂಗಳನ ಮಣ್ಣನ್ನು ಭೂಮಿಗೆ ತಂದ ನಂತರ ನಾಸಾ ಹಾಗೂ ಇಎಸ್‌ಎ ಒಟ್ಟಾಗಿ ಸಂಶೋಧನೆ ನಡೆಸಲಿವೆ. ಭೂಮಿಯಲ್ಲಿ 2032ರ ಹೊತ್ತಿಗೆ ಲಭ್ಯವಿರುವ ಅತ್ಯುತ್ತಮ ಲ್ಯಾಬ್ ಸಾಧನಗಳನ್ನು ಬಳಸಿ ಮಂಗಳನ ಮಣ್ಣಿನ ಸಂಶೋಧನೆ ನಡೆಸಲಾಗುವುದು. ಈ ಸಂಶೋಧನೆಗಾಗಿ ಹೊಸ ಸಾಧನ ಕಂಡುಹಿಡಿಯುವ ಪ್ಲ್ಯಾನ್ ಇದೆ. ಇದಿಷ್ಟನ್ನೂ ನೋಡಲು 12 ವರ್ಷ ಕಾಯಲೇಬೇಕು. ಮಂಗಳನ ಮಣ್ಣಿನ ಅಧ್ಯಯನದ ನಂತರ ವರದಿಗಾಗಿ ವಿಜ್ಞಾನಿಗಳು ಮತ್ತಷ್ಟು ವರ್ಷ ಕಾಯಬೇಕಿದೆ. ಒಟ್ಟಾರೆ ಹೇಳುವುದಾದರೆ ಈ ಯೋಜನೆ ಒಂದು ತಪಸ್ಸು.

English summary
China’s Tianwen-1 sent back planet Mars photos to Earth after successfully entering the red planet orbit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X