ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ:ಲಾಕ್‌ಡೌನ್ ಬಳಿಕ ಶಾಂಘೈನಲ್ಲಿ ಕೋವಿಡ್‌ಗೆ ಮೊದಲ ಬಲಿ

|
Google Oneindia Kannada News

ಬೀಜಿಂಗ್, ಏಪ್ರಿಲ್ 18: ಕೊರೊನಾ ವೈರಸ್ ಸೋಂಕು ಮತ್ತೆ ಏರಿಕೆ ಕಾಣುತ್ತಿದ್ದಂತೆ ಚೀನಾದ ಶಾಂಘೈನಲ್ಲಿ ಮತ್ತೆ ಲಾಕ್‌ಡೌನ್ ಅನ್ನು ಹೇರಲಾಗಿದೆ. ಈ ಲಾಕ್‌ಡೌನ್‌ ಬಳಿಕ ಶಾಂಘೈನಲ್ಲಿ ಮೊದಲ ಕೋವಿಡ್ ಸಾವು ಪ್ರಕರಣವು ವರದಿಯಾಗಿದೆ. ಶಾಂಘೈ ಆರೋಗ್ಯ ಆಯೋಗದ ಪ್ರಕಾರ, ಭಾನುವಾರ ಮೂರು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಮೃತಪಟ್ಟವರು 89 ರಿಂದ 91 ವರ್ಷದೊಳಗಿನವರಾಗಿದ್ದು, ಎಲ್ಲರಿಗೂ ಬೇರೆ ಕಾಯಿಲೆ ಕೂಡಾ ಇತ್ತು ಎಂದು ನಗರ ಆಡಳಿತ ತಿಳಿಸಿದೆ. ಈಶಾನ್ಯ ಪ್ರಾಂತ್ಯದ ಜಿಲಿನ್‌ನಲ್ಲಿ ಮಾರ್ಚ್ ಮಧ್ಯದಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ಮೊದಲ ಬಾರಿಗೆ ಕೋವಿಡ್ ಸಾವು ಕಾಣಿಸಿಕೊಂಡಿದೆ. ಕಳೆದ ವರ್ಷ ಹೆಚ್ಚು ಸಾಂಕ್ರಾಮಿಕವಾದ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಕಾಣಿಸಿಕೊಳ್ಳುವವರೆಗೂ ಹೆಚ್ಚು ಕಟ್ಟುನಿಟ್ಟಾದ ಜಿರೋ ಕೋವಿಡ್ ಕೇಸ್ ನಿಯಮವನ್ನು ಪಾಲನೆ ಮಾಡಿಕೊಂಡು ಬಂದಿರುವ ಚೀನಾದಲ್ಲಿ ಒಂದು ವರ್ಷಕ್ಕೂ ಅಧಿಕ ಅವಧಿಯಲ್ಲಿ ಯಾವುದೇ ಕೋವಿಡ್ ಸಾವು ಸಂಭವಿಸಿರಲಿಲ್ಲ.

ಚೀನಾ ರಾಜಧಾನಿಯಲ್ಲಿ ಹಸಿವಿನಿಂದ ಜನರು ತತ್ತರ, ಆತ್ಮಹತ್ಯೆಗೂ ಮುಂದು; ಕಾರಣ ಇದುಚೀನಾ ರಾಜಧಾನಿಯಲ್ಲಿ ಹಸಿವಿನಿಂದ ಜನರು ತತ್ತರ, ಆತ್ಮಹತ್ಯೆಗೂ ಮುಂದು; ಕಾರಣ ಇದು

ಜಿರೋ ಪಾಸಿಟಿವಿಟಿ ನಿಯಮ ಪಾಲನೆ ಮಾಡುವ ವಿಶ್ವದಲ್ಲೇ ಮೊದಲ ಬಾರಿಗೆ ಕೋವಿಡ್ ಕಾಣಿಸಿಕೊಂಡ ಚೀನಾದಲ್ಲಿ ಇದ್ದಕ್ಕಿಂದಂತೆ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಆಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತ ಲಾಕ್‌ಡೌನ್ ಮಾಡಲಾಗಿದೆ. ಈಗ ಸುಮಾರು ಒಂದು ವರ್ಷದ ಬಳಿಕ ಕೋವಿಡ್ ಸಾವು ಕೂಡಾ ಚೀನಾದಲ್ಲಿ ಕಾಣಿಸಿಕೊಂಡಿದೆ.

Chinas Shanghai reports first Covid deaths since the start of lockdown

ಸಮುದಾಯ-ಮಟ್ಟದ ಪ್ರಸರಣ ತಡೆಯಲು ಕ್ರಮ

ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಅಧಿಕಾರಿಯ ಭಾಷಣದ ಪ್ರಕಾರ, ಅಧಿಕಾರಿಗಳು ಕೋವಿಡ್ ಪರೀಕ್ಷೆಯನ್ನು ವೇಗಗೊಳಿಸಲು ಮತ್ತು ಕೋವಿಡ್ ಪಾಸಿಟಿವ್ ಪ್ರಕರಣವನ್ನು ತಡೆಗಟ್ಟಲು ಕ್ವಾರಂಟೈನ್ ಕೇಂದ್ರಗಳಿಗೆ ಜನರನ್ನು ವರ್ಗಾವಣೆ ಮಾಡುವುದು ತೀರಾ ಅಗತ್ಯವಾಗಿದೆ. ಸಮುದಾಯ-ಮಟ್ಟದ ಪ್ರಸರಣವನ್ನು ಕಡಿಮೆ ಮಾಡುವುದು ಈಗ ಮೊದಲ ಆದ್ಯತೆಯಾಗಿದೆ. ಶೆನ್‌ಜೆನ್ ನಗರವು ಕಳೆದ ತಿಂಗಳು ಸಾರ್ವಜನಿಕ ಸಾರಿಗೆಯನ್ನು ಪುನಃ ಆರಂಭ ಮಾಡಿದೆ. ಸ್ವಲ್ಪ ಸಮಯದ ನಂತರ ಜನಜೀವನ ಬಹುತೇಕ ಸಾಮಾನ್ಯ ಸ್ಥಿತಿಗೆ ಬಂದಿತು. ಆದರೆ ಈಗ ಕೋವಿಡ್ ಹರಡುವುದನ್ನು ತಡೆಗಟ್ಟುವೆಡೆ ಈ ಪ್ರದೇಶವು ಗಮನಹರಿಸಬೇಕಾಗಿದೆ.

ಜನರೇ ಹುಷಾರ್: ಜಗತ್ತಿನಲ್ಲೇ ಅತಿಹೆಚ್ಚು ಹರಡಬಲ್ಲ ಕೊವಿಡ್-19 ರೂಪಾಂತರಿ ಪತ್ತೆ!ಜನರೇ ಹುಷಾರ್: ಜಗತ್ತಿನಲ್ಲೇ ಅತಿಹೆಚ್ಚು ಹರಡಬಲ್ಲ ಕೊವಿಡ್-19 ರೂಪಾಂತರಿ ಪತ್ತೆ!

ಸರ್ಕಾರದ ವಿರುದ್ಧ ಜನರ ಆಕ್ರೋಶ

2019 ರ ಕೊನೆಯಲ್ಲಿ ವುಹಾನ್‌ನಲ್ಲಿ ಕೊರೊನಾ ವೈರಸ್ ಸೋಂಕು ಮೊದಲು ಪತ್ತೆಯಾದ ಬಳಿಕದಿಂದ ಶಾಂಘೈ ಚೀನಾದ ಅತಿದೊಡ್ಡ ಕೇಂದ್ರ ಬಿಂದುವಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದ ಮಾರ್ಚ್ ಆರಂಭದಿಂದಲೂ ಚೀನಾದ ಶಾಂಘೈನಲ್ಲಿ 320,000 ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದೆ. ಇನ್ನು ಈ ನಡುವೆ ಶಾಂಘೈ ನಿವಾಸಿಗಳು ಆಹಾರ, ಆದಾಯ ಮೊದಲಾದ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಪೋಸ್ಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋದಲ್ಲಿ ಜನರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸುವುದು ಹಾಗೂ ಪ್ರತಿಭಟನೆ ನಡೆಸುವುದು ಕಂಡು ಬಂದಿದೆ.

Chinas Shanghai reports first Covid deaths since the start of lockdown

ಏಪ್ರಿಲ್ 20 ರೊಳಗೆ "ಸಮುದಾಯ ಮಟ್ಟದಲ್ಲಿ ಶೂನ್ಯ-COVID" ನ ಶಾಂಘೈನ ಹೊಸ ಗುರಿಯನ್ನು ಇತ್ತೀಚಿನ ದಿನಗಳಲ್ಲಿ ನಗರದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮತ್ತು ಶಾಲೆಗಳಂತಹ ಸಂಸ್ಥೆಗಳಿಗೆ ತಿಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಶಾಂಘೈ ಮಾರ್ಚ್ 28 ರಂದು ಹುವಾಂಗ್‌ಪು ನದಿಯ ಪೂರ್ವದ ಪ್ರದೇಶಗಳನ್ನು ಲಾಕ್‌ಡೌನ್ ಮಾಡಲು ಪ್ರಾರಂಭಿಸಿದೆ. ಏಪ್ರಿಲ್ 1 ರಂದು ನಗರಾದ್ಯಂತ ಲಾಕ್‌ಡೌನ್ ಅನ್ನು ವಿಸ್ತರಿಸಿದೆ. ಕಳೆದ ವಾರ ಕೆಲವು ನಿರ್ಬಂಧ ಸಡಿಲಿಕೆ ಮಾಡಿದ್ದರೂ, ಇನ್ನೂ ಕೂಡಾ ಹೆಚ್ಚಿನ ವ್ಯಾಪಾರಗಳು ನಡೆಯುತ್ತಿಲ್ಲ. ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ.

Recommended Video

ಹುಲಿಯ ಹಳೇ ವಿಡಿಯೋ ಈಗ ಸದ್ದು ಮಾಡ್ತಿದೆ | Oneindia Kannada

English summary
China's Shanghai reports first Covid deaths since the start of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X