ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮಪುತ್ರ ನದಿಗೆ ವಿವಾದಿತ ಅಣೆಕಟ್ಟು ಕಟ್ಟಲು ಮುಂದಾದ ಚೀನಾ, ಭಾರತ ಆಕ್ಷೇಪ

|
Google Oneindia Kannada News

ಟಿಬೆಟ್ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಗೆ ಚೀನಾ ಪಾರ್ಲಿಮೆಂಟ್ ಅನುಮೋದನೆ ನೀಡಿದೆ. ಕಳೆದ ವರ್ಷ ಕಮ್ಯುನಿಸ್ಟ್‌ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಯೋಜನೆಗಳನ್ನು ಇಂದು ಚೀನಾದ ಸಂಸತ್‌ನಲ್ಲಿ ಮಂಡಿಸಲಾಯಿತು.

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಎಂದು ಹೇಳಲ್ಪಡುವ ಚೀನಾದ ಸಂಸತ್ ಇಂದು 14ನೇ ಪಂಚವಾರ್ಷಿಕ ಯೋಜನೆಗೆ ಅನುಮೋದನೆ ನೀಡಿದೆ. ಇದರಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ವಿವಾದಿತ ಯೋಜನೆಯೂ ಸೇರಿದೆ.

ಚೀನಾ ವಿರುದ್ಧ 'ಹೈಡ್ರೋಜನ್ ಬಾಂಬ್' ಪ್ರಯೋಗಿಸಲಿದೆ ಭಾರತ..!ಚೀನಾ ವಿರುದ್ಧ 'ಹೈಡ್ರೋಜನ್ ಬಾಂಬ್' ಪ್ರಯೋಗಿಸಲಿದೆ ಭಾರತ..!

ಈ ಯೋಜನೆಗೆ ಈಗಾಗಲೇ ಭಾರತ ಹಾಗೂ ಬಾಂಗ್ಲಾದೇಶ ಆಕ್ಷೇಪ ವ್ಯಕ್ತಪಡಿಸಿದೆ, ಇದರಿಂದ ಭಾರತದ ಹಾಗೂ ಬಾಂಗ್ಲಾದೇಶದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಹಾಗೂ ಬ್ರಹ್ಮಪುತ್ರ ನದ ಬತ್ತಲಿದೆ ಎನ್ನುವುದು ಉಭಯ ದೇಶಗಳ ವಾದವಾಗಿದೆ.

China’s Parliament Approves Proposal To Build Dam Across Brahmaputra

ಆದರೆ, ಇದನ್ನು ಚೀನಾ ಒಪ್ಪಿಲ್ಲ ಹಾಗೂ ಉಭಯ ದೇಶಗಳ ಆತಂಕವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ತಿಳಿಸಿದೆ. ಆದರೆ ಇಂದಿನ ಸಂಸತ್‌ನಲ್ಲಿ ಟಿಬೆಟ್ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟಿ, ವಿವಿದ್ದೋದ್ದೇಶದ ಜಲವಿದ್ಯುತ್ ಯೋಜನಾ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ನಿಲುವಿನ ಬಳಿಕ ಚೀನಾ ಹಾಗೂ ಭಾರತ ಹೇಗೆ ಪ್ರತಿಕ್ರಿಯಿಸಲಿವೆ ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಹಾಗೂ ಚೀನಾ ಪರಿಸ್ಥಿತಿ ತಾರಕಕ್ಕೇರಿ ಶಾಂತಿ ನಿರ್ಮಾಣವಾಗುತ್ತಿದೆ, ಈ ಹಂತದಲ್ಲಿ ಚೀನಾದ ಈ ನಿರ್ಧಾರ ಮತ್ತೆ ಭಾರತ ಹಾಗೂ ಚೀನಾದ ಸಂಬಂಧವನ್ನು ಹಾಳು ಮಾಡಲಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

English summary
China's Parliament on Thursday adopted the 14th Five-Year Plan, the mega blueprint containing billions of dollars worth of projects, including the controversial hydropower project on the Brahmaputra river in Tibet close to the Arunachal Pradesh border over which India has raised concerns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X