ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾರಿಕಾ ಉತ್ಪಾದನೆಯಲ್ಲಿ ಮತ್ತೆ ಜಿಗಿದ ಚೀನಾ: ಶೇ.4.4 ರಷ್ಟು ಏರಿಕೆ

|
Google Oneindia Kannada News

ಬೀಜಿಂಗ್, ಜೂನ್ 15: ಕೊರೊನಾ ವೈರಸ್ ಹಾವಳಿ ನಂತರ ಪಾತಾಳಕ್ಕೆ ಕುಸಿದಿದ್ದ ಚೀನಾ ಕೈಗಾರಿಕಾ ಉತ್ಪಾದನೆ ಮತ್ತೆ ಜಿಗಿತ ಕಂಡಿದೆ.

Recommended Video

ಕರೋನ ವೈರಸ್ ಪವರ್ ಕಡಿಮೆ ಅಗಿದ್ಯಂತೆ | Oneindia Kannada

ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್ಬಿಎಸ್) ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶವು ವಿಶ್ಲೇಷಕರ ಮುನ್ಸೂಚನೆಗಿಂತ ಕೆಳಗಿದೆ. ಹೌದು ವಿಶ್ಲೇಷಕರು ಮೇ ತಿಂಗಳಿಗೆ ಶೇ. 5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಚೀನಾದಲ್ಲಿ 49 ಹೊಸ ಕೇಸ್, ಬೀಜಿಂಗ್‌ನ ಹತ್ತು ಪ್ರದೇಶ ಮತ್ತೆ ಲಾಕ್‌ಡೌನ್‌ಚೀನಾದಲ್ಲಿ 49 ಹೊಸ ಕೇಸ್, ಬೀಜಿಂಗ್‌ನ ಹತ್ತು ಪ್ರದೇಶ ಮತ್ತೆ ಲಾಕ್‌ಡೌನ್‌

2020ರ ಮೇ ತಿಂಗಳಲ್ಲಿ ಚೀನಾದ ಕೈಗಾರಿಕಾ ಉತ್ಪಾದನೆಯು ಶೇಕಡಾ 4.4ಕ್ಕೆ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ಇದು 3.9 ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು.

Chinas Industrial Output Rises Again

ಉತ್ಪಾದನೆಯು ಹಿಂದಿನ ತಿಂಗಳಿನ 5 ಪ್ರತಿಶತದ ಬೆಳವಣಿಗೆಗೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇಕಡಾ 5.2 ರಷ್ಟು ಏರಿಕೆಯಾಗಿದೆ ಮತ್ತು ಗಣಿಗಾರಿಕೆ ಮೇ ತಿಂಗಳಲ್ಲಿ ಶೇಕಡಾ 1.1ರಷ್ಟು ಏರಿಕೆಯಾಗಿದೆ.

2020ರ ಮೊದಲ ಎರಡು ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಕೈಗಾರಿಕಾ ಉತ್ಪಾದನೆಯು ಶೇ. 13.5ರಷ್ಟು ಕುಸಿದಿತ್ತು. ನಂತರ ಮೂರು ಪ್ರಮುಖ ವಿಭಾಗಗಳಲ್ಲಿರುವ ವಿದ್ಯುತ್, ಶಾಖ, ಅನಿಲ ಮತ್ತು ನೀರಿನ ಉತ್ಪಾದನೆಯ ಬೆಳವಣಿಗೆ, ಮೇ ತಿಂಗಳಲ್ಲಿ ವರ್ಷಕ್ಕೆ 3.6ರಷ್ಟು ಏರಿಕೆಯಾಗಿದ್ದು, ಏಪ್ರಿಲ್‌ನಲ್ಲಿ ಶೇಕಡಾ 0.2 ರಷ್ಟು ಏರಿಕೆಯಾಗಿತ್ತು.

English summary
China's industrial output increased by 4.4 per cent year-on-year in May, its second increase in 2020 after posting a growth of 3.9 per cent in April, figures that suggest a recovery of the country's economy following the impact of the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X