ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕಾ ಈ ಮಾತು?: ಶ್ರೀಲಂಕಾ ತೀರಕ್ಕೆ ಬಂದ ಆ ನೌಕೆ ಬಗ್ಗೆ ಚೀನಾ ಹೇಳಿದ್ದೇನು?

|
Google Oneindia Kannada News

ಬೀಜಿಂಗ್, ಆಗಸ್ಟ್ 17: ಚೀನಾದ ಹೈಟೆಕ್ ಸಂಶೋಧನಾ ನೌಕೆ ಯುವಾನ್ ವಾಂಗ್ 5 ಚಟುವಟಿಕೆಗಳು ಯಾವುದೇ ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಸ್ಪಷ್ಟನೆ ನೀಡಿದ್ದಾರೆ.

ಭಾರತ ಮತ್ತು ಯುಎಸ್ ಆತಂಕದ ನಡುವೆ ಚೀನಾದ ನೌಕೆಯು ಶ್ರೀಲಂಕಾದ ಆಯಕಟ್ಟಿನ ದಕ್ಷಿಣ ಬಂದರು ಹಂಬಂಟೋಟಾದಲ್ಲಿ ನಿಂತಿದೆ. ಯಾವುದೇ ಮೂರನೇ ವ್ಯಕ್ತಿಯು ಇದಕ್ಕೆ ಅಡತಡೆಯನ್ನು ಉಂಟು ಮಾಡಬಾರದು ಎಂದು ಚೀನಾ ಹೇಳಿದೆ.

ಶ್ರೀಲಂಕಾದಲ್ಲಿ ಚೀನೀ ಬೇಹುಗಾರಿಕೆ ನೌಕೆ; ಭಾರತಕ್ಕೆ ಅಪಾಯಗಳೇನು?ಶ್ರೀಲಂಕಾದಲ್ಲಿ ಚೀನೀ ಬೇಹುಗಾರಿಕೆ ನೌಕೆ; ಭಾರತಕ್ಕೆ ಅಪಾಯಗಳೇನು?

ಶ್ರೀಲಂಕಾದ ಕಡೆಯಿಂದ ಸಿಕ್ಕ ಸಕ್ರಿಯ ಸಹಕಾರದೊಂದಿಗೆ 'ಯುವಾನ್ ವಾಂಗ್ 5' ನೌಕೆಯು ಹಂಬಂಟೋಟಾ ಬಂದರಿಗೆ ಯಶಸ್ವಿಯಾಗಿ ಬಂದಿಳಿದಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ತಿಳಿಸಿದ್ದಾರೆ.

51 ಶತಕೋಟಿ ಡಾಲರ್ ವಿದೇಶಿ ಸಾಲದಿಂದ ದಿನಾಳಿ

51 ಶತಕೋಟಿ ಡಾಲರ್ ವಿದೇಶಿ ಸಾಲದಿಂದ ದಿನಾಳಿ

ದ್ವೀಪರಾಷ್ಟ್ರವು ಈಗಾಗಲೇ ಪಡೆದಿರುವ 51 ಶತಕೋಟಿ ಡಾಲರ್ ವಿದೇಶಿ ಸಾಲದಿಂದ ದಿವಾಳಿಯಾಗಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಬೆಂಬಲ ಒದಗಿಸುವ ಬಗ್ಗೆ ವಾಂಗ್ ಉಲ್ಲೇಖಿಸಿದ್ದಾರೆ. ಚೀನಾದ ಹಡಗು ತಲುಪಿದ ಸಂದರ್ಭದಲ್ಲಿ ಶ್ರೀಲಂಕಾದಲ್ಲಿರುವ ಚೀನಾ ರಾಯಭಾರಿ ಕಿ ಝೆನ್‌ಹಾಂಗ್ ಅವರು ಹಂಬಂಟೋಟಾ ಬಂದರಿನಲ್ಲಿ ಸ್ವಾಗತ ಸಮಾರಂಭ ಆಯೋಜಿಸಿದ್ದರು. 2017ರಲ್ಲಿ ಬೀಜಿಂಗ್ ಸಾಲದ ವಿನಿಮಯವಾಗಿ 99 ವರ್ಷಗಳ ಅವಧಿಗೆ ಇದನನ್ನು ಗುತ್ತಿಗೆ ತೆಗೆದುಕೊಂಡಿತು ಎಂದು ಹೇಳಿದರು.

"ಹಿಂದೂ ಮಹಾಸಾಗರದ ಹಂಬಂಟೋಟಾ ಬಂದರಿನಲ್ಲಿ ಮಿಲಿಟರಿ ಅಪ್ಲಿಕೇಶನ್‌ಗಳೊಂದಿಗೆ ಹಡಗಿನ ಬಗ್ಗೆ ಭಾರತ ಮತ್ತು ಯುಎಸ್ ಕಳವಳವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ವಾಂಗ್, "ಯುವಾನ್ ವಾಂಗ್ -5 ಹಡಗಿನ ಸಮುದ್ರ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿರುತ್ತವೆ. ಅಂತರಾಷ್ಟ್ರೀಯ ಸಾಂಪ್ರದಾಯಿಕ ಅಭ್ಯಾಸಗಳಿಗೆ ಬದ್ಧವಾಗಿರುತ್ತದೆ ಎಂದು ನಾನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇನೆ," ಎಂದರು.

ಚೀನಾ ನೌಕೆಯಿಂದ ಮೂರನೇ ವ್ಯಕ್ತಿಗೆ ತೊಂದರೆಯಾಗದು

ಚೀನಾ ನೌಕೆಯಿಂದ ಮೂರನೇ ವ್ಯಕ್ತಿಗೆ ತೊಂದರೆಯಾಗದು

ಚೀನಾದ ಯುವಾನ್ ವಾಂಗ್-5 ನೌಕೆಯಿಂದ ಮೂರನೇ ರಾಷ್ಟ್ರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಯಾವುದೇ ರಾಷ್ಟ್ರದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮವನ್ನೂ ಬೀರುವುದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಮೂರನೇ ವ್ಯಕ್ತಿಗಳು ಅಡ್ಡಿ ಆಗಬಾರದು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ.

ಚೀನಾ ನೌಕೆಯು ಶ್ರೀಲಂಕಾ ಬಂದರಿನಲ್ಲಿ ಉಳಿಯುವ ಸುಳಿವು

ಚೀನಾ ನೌಕೆಯು ಶ್ರೀಲಂಕಾ ಬಂದರಿನಲ್ಲಿ ಉಳಿಯುವ ಸುಳಿವು

ಈ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಪ್ರತಿನಿಧಿ ಅಲ್ಲದೆ, "ಹತ್ತಕ್ಕೂ ಹೆಚ್ಚು ಪಕ್ಷಗಳ ಮುಖ್ಯಸ್ಥರು ಮತ್ತು ಕೆಲವು ಸಮುದಾಯಗಳ ಮುಖ್ಯಸ್ಥರು" ಹಾಜರ್ ಆಗಿದ್ದರು. "ಚೀನಾ ಮತ್ತು ಶ್ರೀಲಂಕಾದ ರಾಷ್ಟ್ರಗೀತೆಗಳನ್ನು ಪ್ರಸಾರ ಮಾಡಿದಾಗ ವಾತಾವರಣವು ಬೆಚ್ಚಗಿನ ಮತ್ತು ಸ್ವಾಗತಾರ್ಹವಾಗಿತ್ತು. ಶ್ರೀಲಂಕಾದ ಕಲಾವಿದರು ರೆಡ್ ಕಾರ್ಪೆಟ್ ಮೇಲೆ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಪ್ರದರ್ಶಿಸಿದರು" ಎಂದು ವಾಂಗ್ ಹೇಳಿದರು.

"ಡಾಕಿಂಗ್‌ನ ನಂತರ ಅಗತ್ಯ ಪೂರೈಕೆಗಳನ್ನು ಪರಿಪೂರ್ಣಗೊಳಿಸುವುದಕ್ಕೆ ಯುವಾನ್ ವಾಂಗ್ 5 ಸಂಶೋಧನಾ ನೌಕೆಯು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದರು. ಆ ಮೂಲಕ ಈ ನೌಕೆಯು ಸ್ವಲ್ಪ ಸಮಯದವರೆಗೂ ಇದೇ ಪ್ರದೇಶದಲ್ಲಿ ಉಳಿಯಬಹುದು ಎಂಬ ಸುಳಿವು ನೀಡಿದರು.

ಶ್ರೀಲಂಕಾದಿಂದ ಚೀನಾ ನೌಕೆಗೆ ಅನುಮತಿ

ಶ್ರೀಲಂಕಾದಿಂದ ಚೀನಾ ನೌಕೆಗೆ ಅನುಮತಿ

ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾದ ಪ್ರಭಾವ ಮತ್ತು ಬೀಜಿಂಗ್ ಉಪಸ್ಥಿತಿ ಹೆಚ್ಚಿಸಿಕೊಳ್ಳುತ್ತಿರುವುದರ ಬಗ್ಗೆ ಭಾರತ ಗಮನ ಹರಿಸುತ್ತಿದೆ. ಯುವಾನ್ ವಾಂಗ್ 5 ಅನ್ನು ಅಂತಾರಾಷ್ಟ್ರೀಯ ಶಿಪ್ಪಿಂಗ್ ಮತ್ತು ಅನಾಲಿಟಿಕ್ಸ್ ಸೈಟ್‌ಗಳಿಂದ ಸಂಶೋಧನೆ ಮತ್ತು ಸಮೀಕ್ಷೆ ಹಡಗು ಎಂದು ವಿವರಿಸಲಾಗಿದೆ. ಆದರೆ ಭಾರತೀಯ ಮಾಧ್ಯಮಗಳ ಪ್ರಕಾರ ಇದು ಡ್ಯುಯಲ್-ಯೂಸ್ ಸ್ಪೈ ಶಿಪ್(ಗೂಢಚರ್ಯೆ ಹಡಗು) ಆಗಿದೆ.

ಯುವಾನ್ ವಾಂಗ್ 5 ಹಡಗು ಆಗಸ್ಟ್ 11ರಂದೇ ಶ್ರೀಲಂಕಾದಲ್ಲಿರುವ ಚೀನಾದ ಹಂಬಂಟೋಟಾ ಬಂದರಿಗೆ ಬರಬೇಕಿತ್ತು. ಕೆಲವು ಅಡ್ಡಿ-ಆತಂಕಗಳ ಮಧ್ಯೆ ಶ್ರೀಲಂಕಾದ ಬಂದರು ಮಾಸ್ಟರ್ ನಿರ್ಮಲ್ ಪಿ ಸಿಲ್ವಾ, ಆಗಸ್ಟ್ 16 ರಿಂದ 22 ರವರೆಗೆ ಹಂಬಂಟೋಟಾದಲ್ಲಿ ನೌಕೆ ಆಗಮಿಸುವುದಕ್ಕೆ ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆದುಕೊಂಡರು.

ದ್ವೀಪರಾಷ್ಟ್ರದ ನಿಲುವು ಬದಲಾವಣೆ ಬಗ್ಗೆ ಚೀನಾ ಉಲ್ಲೇಖ

ದ್ವೀಪರಾಷ್ಟ್ರದ ನಿಲುವು ಬದಲಾವಣೆ ಬಗ್ಗೆ ಚೀನಾ ಉಲ್ಲೇಖ

ಕೊಲಂಬೋ ಜೊತೆಗಿನ ಮಾತುಕತೆ ವಿವರಗಳನ್ನು ಬಹಿರಂಗಪಡಿಸಲು ಚೀನಾದ ವಿದೇಶಾಂಗ ವಕ್ತಾರ ವಾಂಗ್ ನಿರಾಕರಿಸಿದರು. ದಿವಾಳಿ ಆಗಿರುವ ದ್ವೀಪರಾಷ್ಟ್ರದ ಸರ್ಕಾರವು ಹೈಟೆಕ್ ಹಡಗಿನ ಪ್ರವೇಶವನ್ನು ಮುಂದೂಡುವ ತನ್ನ ಹಿಂದಿನ ನಿಲುವು ಬದಲಾಯಿಸಿದೆ. ಹಡಗಿನ ಪ್ರವೇಶವನ್ನು ಮುಂದೂಡುವಂತೆ ಶ್ರೀಲಂಕಾ ಚೀನಾವನ್ನು ಕೇಳಿದ ನಂತರ, ಆಗಸ್ಟ್ 8 ರಂದು ಬೀಜಿಂಗ್ ಫುಲ್ ಗರಂ ಆಗಿತ್ತು.

ಕೆಲವು ದೇಶಗಳು ಕೊಲಂಬೋ ಮೇಲೆ ಒತ್ತಡ ಹೇರುವುದಕ್ಕೆ ಮುಂದಾಗಿವೆ. ಇದು ಆಂತರಿಕ ವ್ಯವಹಾರಗಳಲ್ಲಿನ ತೀವ್ರ ಹಸ್ತಕ್ಷೇಪ ಎಂದು ಕರೆಯಲ್ಪಡುತ್ತದೆ. ಭದ್ರತಾ ಕಾಳಜಿ ಅನ್ನು ಉಲ್ಲೇಖಿಸಿರುವುದು ಸಂಪೂರ್ಣ ನ್ಯಾಯಸಮ್ಮತವಾಗಿಲ್ಲ," ಎಂದು ವಾಂಗ್ ಹೇಳಿದ್ದರು.

ಚೀನಾ ನೌಕೆಯ ಬಗ್ಗೆ ನಿಲುವು ಬದಲಾಯಿಸಿದ ಲಂಕಾ ಹೇಳಿದ್ದೇನು?

ಚೀನಾ ನೌಕೆಯ ಬಗ್ಗೆ ನಿಲುವು ಬದಲಾಯಿಸಿದ ಲಂಕಾ ಹೇಳಿದ್ದೇನು?

ಚೀನಾ ನೀಡಿರುವ ಅಧಿಕೃತ ಮಾಧ್ಯಮಗಳ ಪ್ರಕಾರ, 2,000 ಸಿಬ್ಬಂದಿಯನ್ನು ಹೊಂದಿರುವ ನೌಕೆಯು ಉಪಗ್ರಹ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚುವ ಸುಧಾರಿತ ಸೌಲಭ್ಯಗಳನ್ನು ಹೊಂದಿದೆ. ಈ ಕುರಿತು ವ್ಯಾಪಕ ಸಮಾಲೋಚನೆ ನಂತರವೇ ಚೀನಾದ ನೌಕೆಗೆ ಅನುಮತಿ ನೀಡಲಾಗಿದೆ ಎಂದು ಚೀನಾ ಹೇಳಿದೆ. ಚೀನಾಕ್ಕೆ ನೀಡಬೇಕಾದ ಸಾಲದ ಮರುಪಾವತಿ ಅನ್ನು ಮುಂದೂಡುವಂತೆ ಈಗಾಗಲೇ ಶ್ರೀಲಂಕಾ ಮನವಿ ಸಲ್ಲಿಸಿದೆ. ಇದರ ಮಧ್ಯೆ ಚೀನಾದ ನೌಕೆಗೆ ಕೊಲಂಬೋ ನೀಡಿರುವ ಅನುಮತಿಯು ಸಕಾರಾತ್ಮಕ ಪರಿಣಾಮವನ್ನು ಬೀರಬಹುದು ಎಂಬ ಊಹಾಪೋಹವನ್ನು ಹುಟ್ಟು ಹಾಕಿದೆ.

ಎಲ್ಲಿದೆ ಚೀನಾದ ಯುವಾನ್ ವಾಂಗ್ 5 ಹಡಗು

ಎಲ್ಲಿದೆ ಚೀನಾದ ಯುವಾನ್ ವಾಂಗ್ 5 ಹಡಗು

ಚೀನಾದ ಯುವಾನ್ ವಾಂಗ್ 5 ಹಡಗು ಶುಕ್ರವಾರ ರಾತ್ರಿ ಶ್ರೀಲಂಕಾದ ಆಗ್ನೇಯಕ್ಕೆ ಸುಮಾರು 1,000 ಕಿಲೋಮೀಟರ್ (620 ಮೈಲುಗಳು) ದೂರದಲ್ಲಿದೆ. ಅಲ್ಲಿಂದ ಮುಂದೆ ಹಂಬಂಟೋಟಾದ ಆಳ ಸಮುದ್ರ ಬಂದರಿನ ಕಡೆಗೆ ನಿಧಾನವಾಗಿ ಸಾಗುತ್ತಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾ ಬಂದರನ್ನು 99 ವರ್ಷಗಳ ಕಾಲ ಚೀನಾಕ್ಕೆ 1.12 ಶತಕೋಟಿ ಡಾಲರ್ ಮೊತ್ತಕ್ಕೆ ಗುತ್ತಿಗೆಗೆ ನೀಡಿತು. ಇನ್ನು ಈ ಬಂದರು ನಿರ್ಮಾಣಕ್ಕಾಗಿ ಚೀನಾದ ಕಂಪನಿಗೆ ಶ್ರೀಲಂಕಾ 1.4 ಶತಕೋಟಿ ಡಾಲರ್ ಹಣವನ್ನು ಪಾವತಿ ಮಾಡಿತ್ತು.

English summary
Chinas high-tech research vessel will not affect the security of any country, says Chinese Foreign Ministry spokesman Wang Wenbin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X