ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಚೀನಾದ ಈ ಲಸಿಕೆ ಅತಿ ಸುರಕ್ಷಿತ ಎಂದ ಲ್ಯಾನ್ಸೆಟ್ ಅಧ್ಯಯನ

|
Google Oneindia Kannada News

ಬೀಜಿಂಗ್, ಜೂನ್ 29: ಕೊರೊನಾ ಸೋಂಕಿನ ವಿರುದ್ದ ಮಕ್ಕಳಿಗೆ ಲಸಿಕೆ ಕುರಿತು ಹಲವು ದೇಶಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಮಕ್ಕಳಿಗೆ ಯಾವ ಲಸಿಕೆ ಹೆಚ್ಚು ಸುರಕ್ಷಿತ ಎಂಬ ಕುರಿತು ಅಧ್ಯಯನಗಳು ನಡೆಯುತ್ತಿವೆ.

ಇದೀಗ ಚೀನಾದಲ್ಲಿ ಅಭಿವೃದ್ಧಿಯಾಗಿರುವ ಕೊರೊನಾವ್ಯಾಕ್ ಲಸಿಕೆಯ ಹೆಚ್ಚಿನ ಡೋಸ್ 3-17ರ ವಯೋಮಾನದ ಮಕ್ಕಳಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿ ಮಾಡಬಲ್ಲದು ಹಾಗೂ ಮಕ್ಕಳಿಗೆ ಈ ಲಸಿಕೆ ಸುರಕ್ಷಿತವಾಗಿದೆ ಎಂದು ಲ್ಯಾನ್ಸೆಟ್ ಅಧ್ಯಯನ ತಿಳಿಸಿದೆ. ಲಸಿಕೆ ಪಡೆದ ನಂತರದ ಅಡ್ಡಪರಿಣಾಮಗಳ ಪ್ರಮಾಣವೂ ಗೌಣ ಎಂದು ಹೇಳಿದೆ. ಮುಂದೆ ಓದಿ...

 ಡಬಲ್ ಡೋಸ್ ನಂತರ 96% ಪ್ರತಿಕಾಯ ಸೃಷ್ಟಿ

ಡಬಲ್ ಡೋಸ್ ನಂತರ 96% ಪ್ರತಿಕಾಯ ಸೃಷ್ಟಿ

ಸೋಂಕಿನ ಸಮಸ್ಯೆಗಳ ಅಧ್ಯಯನದ ಕುರಿತಂತೆ ಲ್ಯಾನ್ಸೆಟ್ ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಕೊರೊನಾವ್ಯಾಕ್ ಲಸಿಕೆಯ ಎರಡು ಭಿನ್ನ ಪ್ರಮಾಣದ ಡೋಸ್‌ ಅನ್ನು ಮಕ್ಕಳು ಹಾಗೂ ಹದಿಹರೆಯದವರಲ್ಲಿ ಪರೀಕ್ಷಿಸಲಾಗಿದೆ. ಡಬಲ್ ಡೋಸ್ ಲಸಿಕೆ ನಂತರ 96% ಪ್ರತಿಕಾಯ ಸೃಷ್ಟಿಯಾಗಿರುವುದು ಗೋಚರಿಸಿದೆ.

ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ ಲಭ್ಯವಾಗಬಹುದು?ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ ಲಭ್ಯವಾಗಬಹುದು?

 3-17ರ ವಯೋಮಾನದ ಮಕ್ಕಳಿಗೆ ಲಸಿಕೆ ಪ್ರಯೋಗ

3-17ರ ವಯೋಮಾನದ ಮಕ್ಕಳಿಗೆ ಲಸಿಕೆ ಪ್ರಯೋಗ

ಚೀನಾದ ಝಾನ್‌ಹೌಂಗ್‌ನಲ್ಲಿನ ಹೆಬಿ ಪ್ರಾಂತ್ಯದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರದಲ್ಲಿ ಕೊರೊನಾವ್ಯಾಕ್‌ ಲಸಿಕೆಯ ಒಂದು ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು 3-17ರ ವಯೋಮಾನದ ಮಕ್ಕಳ ಮೇಲೆ ನಡೆಸಲಾಗಿದೆ.

 ಒಂದು ಡೋಸ್ ಲಸಿಕೆ ಪಡೆದ ನಂತರವೇ ಪ್ರತಿಕಾಯ ಸೃಷ್ಟಿ

ಒಂದು ಡೋಸ್ ಲಸಿಕೆ ಪಡೆದ ನಂತರವೇ ಪ್ರತಿಕಾಯ ಸೃಷ್ಟಿ

ಎರಡು ಭಿನ್ನ ಪ್ರಮಾಣದಲ್ಲಿ ಲಸಿಕೆ ನೀಡಿ ಪ್ರಯೋಗಿಸಲಾಗಿದೆ. 28 ದಿನಗಳ ಅಂತರದಲ್ಲಿ ಎರಡನೇ ಡೋಸ್ ಕೊರೊನಾ ಲಸಿಕೆ ನೀಡಿ ಪರಿಶೀಲನೆ ನಡೆಸಲಾಗಿದೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಲ್ಲಿ 28 ದಿನಗಳಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿವೆ. ಎರಡನೇ ಡೋಸ್ ನಂತರ ಪ್ರತಿಕಾಯಗಳ ಅಭಿವೃದ್ಧಿ ಹೆಚ್ಚಿ ಮಟ್ಟದಲ್ಲಿ ಆಗಿದ್ದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

 ಕೊರೊನಾವ್ಯಾಕ್‌ನಲ್ಲಿ ಅಡ್ಡಪರಿಣಾಮ ಕಡಿಮೆ

ಕೊರೊನಾವ್ಯಾಕ್‌ನಲ್ಲಿ ಅಡ್ಡಪರಿಣಾಮ ಕಡಿಮೆ

ಲಸಿಕೆ ಪಡೆದ ನಂತರ ಕಂಡುಬಂದ ಅಡ್ಡಪರಿಣಾಮಗಳ ಪ್ರಮಾಣವೂ ಕಡಿಮೆ ಇದೆ. ಲಸಿಕೆ ನೀಡಿದ ಜಾಗದಲ್ಲಿ ನೋವು ಕಾಣಿಸಿಕೊಳ್ಲುವುದು ಕಂಡುಬಂದಿದ್ದು, 550 ಮಂದಿಯಲ್ಲಿ 73 ಮಕ್ಕಳಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಲಸಿಕೆ ಪಡೆದ ನಂತರದ ಏಳು ದಿನಗಳಲ್ಲಿ ಈ ಪುಟ್ಟ ಸಮಸ್ಯೆ ಕಾಣಿಸಿಕೊಳ್ಳಬಹುದಷ್ಟೆ ಎಂದು ಅಧ್ಯಯನದಲ್ಲಿ ತೊಡಗಿದ್ದವರು ಹೇಳಿದ್ದಾರೆ. ಪ್ರಯೋಗದಲ್ಲಿ ಭಾಗವಹಿಸಿದ್ದ 186ರಲ್ಲಿ 180 ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿದೆ.

English summary
A higher dose of the Chinese vaccine CoronaVac induced neutralising antibody responses in children and adolescents aged 3-17 years, a study in the recent edition of journal Lancet Infectious Diseases
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X