ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಸೆಕೆಯಾಗುತ್ತಿತ್ತೆಂದು ಈಕೆ ಮಾಡಿದ್ದೇನು ಗೊತ್ತಾ?

|
Google Oneindia Kannada News

Recommended Video

Chinese woman opens the plane’s emergency exit for some fresh air, delaying a flight

ಬೀಜಿಂಗ್, ಸೆಪ್ಟೆಂಬರ್ 26: ಬಸ್, ರೈಲಿನಲ್ಲಿ ಪ್ರಯಾಣಿಸುವವರು ಸೆಕೆಯಾಗುತ್ತದೆಂದು ಕಿಟಕಿ ತೆರೆದು ಕೂರುವುದನ್ನು ನೋಡಿದ್ದೇವೆ. ಆದರೆ ಚೀನಾದ ಈ ಮಹಿಳೆ ವಿಮಾನದಲ್ಲೇ ಈ ಕೆಲಸ ಮಾಡಲು ಮುಂದಾಗಿದ್ದರು. ಸೆಕೆ ಆಯಿತೆಂದು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನೇ ತೆರೆದಿದ್ದಾಳೆ ಈ ಮಹಿಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಚೀನಾದ ವುಹಾನ್‌ನಿಂದ ಲಾನ್ಜುವಾ ಕಡೆ ಶಿಯಾಮೆನ್ ಏರ್ ಜೆಟ್ ನಲ್ಲಿ ಕುಳಿತಿದ್ದ ಚೀನಾ ಮಹಿಳೆಗೆ, ವಿಮಾನ ಟೇಕ್ ಆಫ್ ಆಗುವ ಮುನ್ನ ಕಿರಿ ಕಿರಿ ಆಗಲು ಆರಂಭಿಸಿದೆ. ಸೆಕೆ ಅನ್ನಿಸಿದೆ. ಹೀಗೆ ಅನ್ನಿಸುತ್ತಿದ್ದಂತೆಯೇ ಆಕೆ ಹಿಂದು ಮುಂದು ನೋಡದೇ ತುರ್ತು ನಿರ್ಗಮನದ ಬಟನ್ ಒತ್ತಿದ್ದಾಳೆ.

ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್

ಇದ್ದಕ್ಕಿದ್ದಂತೆ ಗಮನಿಸಿದ ಕ್ಯಾಬಿನ್ ಸಿಬ್ಬಂದಿ ವಿಮಾನ ಟೇಕ್ ಆಫ್ ಆಗದಂತೆ ಸೂಚನೆಯನ್ನೂ ಕೊಟ್ಟಿದ್ದಾರೆ. ಏಕೆ ಹೀಗೆ ಮಾಡಿದ್ದೆಂದು ಆಕೆಯನ್ನು ವಿಚಾರಿಸಿದರೆ, "ನನಗೆ ತಾಜಾ ಗಾಳಿ ಬೇಕಿತ್ತು. ಸೆಕೆಯಾಗುತ್ತಿತ್ತು. ಈ ಬಟನ್ ಒತ್ತಿದೆ" ಎಂದು ಹೇಳಿದ್ದಾಳೆ. ಈ ಘಟನೆಯನ್ನು ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದು, ಇದೀಗ ಎಲ್ಲೆಲ್ಲೂ ವೈರಲ್ ಆಗಿದೆ.

 China Women Open Emergency Exit To Get Air

74ನೇ ವಯಸ್ಸಿನಲ್ಲಿ ಮಂಗಾಯಮ್ಮಗೆ ಅವಳಿ ಮಕ್ಕಳು; ಇದು ಮೊದಲ ಸಂಭ್ರಮ74ನೇ ವಯಸ್ಸಿನಲ್ಲಿ ಮಂಗಾಯಮ್ಮಗೆ ಅವಳಿ ಮಕ್ಕಳು; ಇದು ಮೊದಲ ಸಂಭ್ರಮ

ಈ ವಿಡಿಯೋವನ್ನು 18 ಮಿಲಿಯನ್ ಗೂ ಹೆಚ್ಚು ಜನ ನೋಡಿದ್ದಾರೆ. ಸರಿಯಾಗಿ ಗಾಳಿ ಆಡದಿದ್ದಾರೆ ಆಕೆಯಾದ್ರೂ ಏನು ಮಾಡಬಹುದು, ಮೊದಲು ವಿಮಾನದ ವ್ಯವಸ್ಥೆ ಸರಿಮಾಡಿಸಿ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ. ಪ್ರವೇಶದ ಬಾಗಿಲ ಹತ್ತಿರವಿದ್ದ ಸೀಟ್ ಬಳಿ ಹೀಗೆ ನಡೆದಿದ್ದು, ಪೊಲೀಸರಿಗೂ ಸಿಬ್ಬಂದಿ ಮಾಹಿತಿ ರವಾನಿಸಿದ್ದಾರೆ. ಸ್ವಲ್ಪದರಲ್ಲೇ ಅವಘಡ ತಪ್ಪಿದೆ. ಈ ಎಡವಟ್ಟಿನಿಂದ ವಿಮಾನ ಹೊರಡುವುದು ಒಂದು ಗಂಟೆ ತಡವಾಗಿದೆ.

English summary
A Chinese woman sitting in a xiamen air jet from Wuhan, China, to Lanzhua, has started to get annoyed before the plane takes off. She pressed the emergency exit button.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X