ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇನ್ ಸ್ವಾಮಿ ಆಶ್ಚರ್ಯ! ಈಕೆಗೆ ಪುರುಷರ ಧ್ವನಿ ಮಾತ್ರ ಕೇಳಲ್ವಂತೆ!

|
Google Oneindia Kannada News

ಬೀಜಿಂಗ್, ಜನವರಿ 11: ಇದು ಅದೃಷ್ಟವೋ, ದುರದೃಷ್ಟವೋ ಗೊತ್ತಿಲ್ಲ. ಚೀನಾದ ಗ್ಸಿಯಾಮೆನ್ ಎಂಬಲ್ಲಿಯ ಚೆನ್ ಎಂಬ ಮಹಿಳೆಗೆ ಪುರುಷರ ಧ್ವನಿ ಕೇಳಿಸುವುದೇ ಇಲ್ಲ! ಜಾಣಕಿವುಡಿರಬೇಕು ಅನ್ಬೇಡಿ! ವಿಚಿತ್ರವಾದರೂ ಇದು ಸತ್ಯ!

ಚೆನ್ ವಿಚಿತ್ರ ಕಿವುಡುತನದ ಸಮಸ್ಯೆಯಿಂದ ಬಳಲುತ್ತಿದ್ದು, ಮಹಿಳೆಯರು ಜೋರಾಗಿ ಮಾತನಾಡಿದರೆ ಅವರ ಧ್ವನಿ ಕೇಳಿಸುತ್ತದೆ. ಆದರೆ ಪುರುಷರ ಧ್ವನಿ ಮಾತ್ರ ಆಕೆಗೆ ಕೇಳಿಸುವುದೇ ಇಲ್ಲ.

ನಾವೇ ತಂದುಕೊಂಡ ಕಿವುಡುತನಕ್ಕೆ ಕಾರಣಗಳೇನು? ನಾವೇ ತಂದುಕೊಂಡ ಕಿವುಡುತನಕ್ಕೆ ಕಾರಣಗಳೇನು?

ಕಿವುಡುತನದಿಂದ ಬಳಲುವ 13000 ರಲ್ಲಿ ಒಬ್ಬ ರೋಗಿಗೆ ಇಂಥ ವಿಚಿತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆಯಂತೆ. ರಿವರ್ಸ್ ಸ್ಲೋಪ್ ಹಿಯರಿಂಗ್ ಲಾಸ್ ಎಂದು ಈ ಸಮಸ್ಯೆಯನ್ನು ವೈದ್ಯರು ಪತ್ತೆ ಮಾಡಿದ್ದು, ಇದಕ್ಕೆ ಒತ್ತಡವೇ ಕಾರಣ ಎಂದಿದ್ದಾರೆ.

China: woman can not hear voices of men, peculiar hearing problem!

ಮೊದಲಿಗೆ ಆಕೆ ಮಹಿಳಾ ವೈದ್ಯರೊಬ್ಬರನ್ನು ಭೇಟಿಯಾಗಿ ಕಿವಿಯ ಸಮಸ್ಯೆಯನ್ನು ತೋರಿಸಿದ್ದರು. ಆದರೆ ಪರೀಕ್ಷಿಸಿದ ವೈದ್ಯೆ, ಚೆನ್ ತಮ್ಮ ಬಳಿ ಸರಿಯಾಗಿಯೇ ಮಾತನಾಡುತ್ತಿದ್ದರಿಂದ ಏನೂ ಸಮಸ್ಯೆಯಿಲ್ಲ. ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿ ಕಳಿಸಿದ್ದಾರೆ. ಆದರೆ ಪುರುಷರೊಂದಿಗೆ ಮಾತನಾಡುವಾಗ ಮಾತ್ರ ತನಗೆ ಕಿವಿ ಕೇಳಿಸದಿರುವುದನ್ನು ಅರಿತ ಆಕೆ ಮತ್ತೊಮ್ಮೆ ತಪಾಸಣೆಗೆ ಬಂದಾಗ ಈ ರೋಗ ಪತ್ತೆಯಾಗಿದೆ. ಈ ಸಮಸ್ಯೆಯನ್ನು ಸಂಪೂರ್ಣ ನಿವಾರಿಸುವುದು ಕಷ್ಟವಾದರೂ, ನಿಯಮಿತ ಚಿಕಿತ್ಸೆಯಿಂದ ನಿಯಂತ್ರಣ ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.

English summary
In a bizarre situation, a Chinese woman has been diagnosed with a type of hearing loss in which she is unable to hear the voices of men and can only higher frequency tones of other females.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X