ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಬೆನ್ನಿಗೆ ಚೀನಾ ಚೂರಿ? ಭಾರತವೇ ನಮಗೆ ಮುಖ್ಯ ಅಂದ ಅಫ್ಘಾನಿಸ್ತಾನ!

|
Google Oneindia Kannada News

ಚೀನಾ-ಭಾರತದ ನಡುವೆ ವೈಷಮ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಗಡಿ ವಿಚಾರವೇ ಆಗಿರಬಹುದು, ಅಂತಾರಾಷ್ಟ್ರೀಯ ಸಂಬಂಧವೇ ಆಗಿರಬಹುದು. ಎರಡೂ ರಾಷ್ಟ್ರಗಳ ನಡುವೆ ಜಿದ್ದು ಹೆಚ್ಚಾಗುತ್ತಿದೆ. ಈಗಲೂ ಇಂತಹದ್ದೇ ಘಟನೆ ಸದ್ದಿಲ್ಲದೆ ನಡೆಯುತ್ತಿದೆ. ಹೌದು ಅಫ್ಘಾನಿಸ್ತಾನದ ನೆಲದಿಂದ ಅಮೆರಿಕ ಮಿಲಿಟರಿ ವಾಪಸ್ ತೆರಳುತ್ತಿರುವ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ಅಲರ್ಟ್ ಆಗಿವೆ.

Recommended Video

ಭಾರತದ ಮೇಲೆ ಆಫ್ಘಾನಿಸ್ತಾನಕ್ಕೆ ಇರುವ ಪ್ರೀತಿ ನೋಡಿ ಚೀನಾಗೆ ಉರಿ | Oneindia Kannada

ಅಫ್ಘಾನಿಸ್ತಾನದ ಜೊತೆಗೆ ಸ್ನೇಹ ಬೆಸೆಯಲು ಇದೇ ಒಳ್ಳೆಯ ಸಂದರ್ಭ ಎಂಬಂತೆ ಸಹಾಯಕ್ಕೆ ಮುಂದಾಗಿವೆ. ಚೀನಾ ಕೂಡ ಅಫ್ಘಾನ್ ಜೊತೆ ಉತ್ತಮ ಸಂಬಂಧ ಬಯಸುತ್ತಿದ್ದು, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ರಾಜಿ ಮಾಡಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಆದರೆ ಚೀನಾದ ಇದೇ ನಡೆ ಹಲವು ಆತಂಕಗಳನ್ನ ಹುಟ್ಟುಹಾಕಿದೆ.

ಏಕೆಂದರೆ ಅಫ್ಘಾನ್ ಭಾರತದ ಪರಮಾಪ್ತ ಗೆಳೆಯ, ಹಾಗೇ ಪಾಕಿಸ್ತಾನ ಆಜನ್ಮ ಶತ್ರು. ಪರಿಸ್ಥಿತಿ ಹೀಗಿರುವಾಗ ಎರಡೂ ರಾಷ್ಟ್ರಗಳ ನಡುವೆ ಸ್ನೇಹ ಮೂಡಿದರೆ ಪರಿಸ್ಥಿತಿ ವ್ಯತಿರಿಕ್ತವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಭಾರತಕ್ಕೆ ಪಾಕ್ ಹೇಗೆ ನೆರೆ ರಾಷ್ಟ್ರವೋ, ಅದೇ ರೀತಿ ಅಫ್ಘಾನಿಸ್ತಾನ ಕೂಡ ನೆರೆ ರಾಷ್ಟ್ರ. ಆದರೆ ಎರಡೂ ರಾಷ್ಟ್ರಗಳು ಹಲವು ದಶಕಗಳ ಕಾಲ ಕಿತ್ತಾಡುತ್ತ ಬಂದಿವೆ. ಇದೀಗ ರಾಜಿ ಮಾಡಿಸಲು ಚೀನಾ ಮುಂದೆ ಬಂದಿರುವುದು ಸಹಜವಾಗಿ ಭಾರತಕ್ಕೆ ಕಸಿವಿಸಿ ತಂದಿದೆ.

ಭಾರತದಿಂದ ಅಫ್ಘಾನ್ ದೂರ..?

ಭಾರತದಿಂದ ಅಫ್ಘಾನ್ ದೂರ..?

ಪಾಕಿಸ್ತಾನದ ಜೊತೆ ಭಾರತದ ವೈರತ್ವ ಹೇಗೆ ಐತಿಹಾಸಿಕವಾಗಿ ಇದೆಯೋ, ಅದೇ ರೀತಿ ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ಸ್ನೇಹಕ್ಕೆ ದೊಡ್ಡ ಇತಿಹಾಸವೇ ಇದೆ. ಅಫ್ಘಾನ್‌ನ ಎಷ್ಟೋ ಅಭಿವೃದ್ಧಿ ಯೋಜನೆಗಳಿಗೆಲ್ಲಾ ಭಾರತವೇ ಹಣ ಕೊಟ್ಟಿದೆ. ಪಾಕಿಸ್ತಾನವನ್ನ ತೆಪ್ಪಗೆ ಇರುವಂತೆ ಮಾಡಲು ಅಫ್ಘಾನ್‌ ಸ್ನೇಹ ಕೂಡ ಭಾರತಕ್ಕೆ ತನ್ನದೇ ರೀತಿಯ ಸಹಾಯ ಮಾಡಿದೆ. ಆದ್ರೆ ಪರಿಸ್ಥಿತಿ ಈಗ ಕೈಮೀರಿ ಹೋಗುತ್ತಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ನಡುವೆ ಸಂಧಾನ ಮಾಡಲು ಚೀನಾ ಮುಂದೆ ಬಂದಿದ್ದು ಈಗಾಗಲೇ 3 ಸಭೆ ನಡೆಸಿದೆ. ಮತ್ತೊಂದು ಮೀಟಿಂಗ್ ಮಾಡಲು ಮುಹೂರ್ತ ಫಿಕ್ಸ್ ಆಗಿದ್ದು, ಭಾರತದ ತೆಕ್ಕೆಯಿಂದ ಅಫ್ಘಾನ್ ಕೈತಪ್ಪುತ್ತಿದೆಯಾ ಎಂಬ ಅನುಮಾನ ಮೂಡತೊಡಗಿದೆ. ಈ ಆತಂಕದ ನಡುವೆ ಅಫ್ಘಾನಿಸ್ತಾನ ನೀಡಿರುವ ಪ್ರತಿಕ್ರಿಯೆ ಮಹತ್ವ ಪಡೆದಿದೆ.

ನಮಗೆ ಭಾರತವೇ ಮುಖ್ಯ..!

ನಮಗೆ ಭಾರತವೇ ಮುಖ್ಯ..!

ಚೀನಾ ಅಫ್ಘಾನಿಸ್ತಾನ ಮನವೊಲಿಸಲು ಸಾಕಷ್ಟು ಕಸರತ್ತು ಮಾಡುತ್ತಲೇ ಬಂದಿದೆ. ಅದರಲ್ಲೂ ಕಳೆದ ಹತ್ತಾರು ವರ್ಷಗಳಿಂದ ಈ ಪ್ರಯತ್ನ ವೇಗ ಪಡೆದಿದೆ. ಆದರೆ ಅದೆಲ್ಲಾ ಇಷ್ಟುದಿನ ಸಾಧ್ಯವಾಗಿರಲಿಲ್ಲ. ಕಾರಣ ಅಲ್ಲಿಯೇ ಕೂತಿದ್ದ ಅಮೆರಿಕ ಸೇನೆ ಇದಕ್ಕೆಲ್ಲಾ ಅವಕಾಶ ನೀಡಿರಲಿಲ್ಲ. ಆದರೆ ಏಪ್ರಿಲ್‌ನಲ್ಲಿ ಅಮೆರಿಕ ಅಧ್ಯಕ್ಷ ಬೈಡನ್‌ರ ಒಂದು ಮಹತ್ವದ ಘೋಷಣೆ ಅಲ್ಲೋಲ ಕಲ್ಲೋಲ ಸೃಷ್ಟಿಸಿಬಿಟ್ಟಿದೆ. ಸುದೀರ್ಘ 20 ವರ್ಷಗಳ ಬಳಿಕ ಅಮೆರಿಕ ಸೇನೆಯನ್ನ ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುತ್ತಿದೆ. ಸೆಪ್ಟೆಂಬರ್ 11ರ ಒಳಗಾಗಿ ಸೇನೆಯನ್ನ ವಾಪಸ್ ಕರೆಸಿಕೊಳ್ಳಲು ಬೈಡನ್ ಆಡಳಿತ ಮುಂದಾಗಿದೆ.

ಹೀಗಾಗಿ ಅಮೆರಿಕ ಅಫ್ಘಾನ್ ಬಿಟ್ಟು ಹೋದರೆ ಆ ಸ್ಥಾನವನ್ನು ತುಂಬಲು ಚೀನಾ ಕಾಯುತ್ತಿದೆ. ಆದರೆ ಇದಕ್ಕೆ ತಕ್ಕ ಉತ್ತರ ನೀಡಿರುವ ಅಫ್ಘಾನ್, ನಮಗೆ ಭಾರತವೇ ಮುಖ್ಯ ಹಾಗೂ ನೀವು ಮಾಡುವ ಸಹಾಯವೂ ಅತಿಮುಖ್ಯ ಎಂದಿದೆ. ಈ ಮೂಲಕ ಭಾರತವನ್ನು ಬಿಟ್ಟುಕೊಟ್ಟಿಲ್ಲ ಆ ನಂಬಿಕಸ್ಥ ದೇಶ. ಪಾಕಿಸ್ತಾನದ ಜೊತೆಗಿನ ಮಾತುಕತೆಯಲ್ಲೂ ಅಫ್ಘಾನ್ ಅಲರ್ಟ್ ಆಗಿ ಹೆಜ್ಜೆ ಇಡುತ್ತಿದೆ.

ಯಾರಿಗೆ ನಷ್ಟ, ಯಾರಿಗೆ ಲಾಭ..?

ಯಾರಿಗೆ ನಷ್ಟ, ಯಾರಿಗೆ ಲಾಭ..?

ಅಮೆರಿಕ ದಿಢೀರ್ ಅಫ್ಘಾನಿಸ್ತಾನದಿಂದ ಹೊರ ಹೋಗುವುದಿಲ್ಲ. ಹಂತ ಹಂತವಾಗಿ ಸೇನೆಯನ್ನು ಸೆಪ್ಟೆಂಬರ್ 11ರ ಒಳಗಾಗಿ ವಾಪಸ್ ಕರೆಸಿಕೊಳ್ಳಲಿದೆ. ಆದ್ರೆ ಅಮೆರಿಕದ ನಿರ್ಧಾರದ ಬೆನ್ನಲ್ಲೇ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಮತ್ತೊಂದು ಕಡೆ ಅಫ್ಘಾನಿಸ್ತಾನದ ಸ್ಥಳೀಯರಿಗೆ ತಾಲಿಬಾನಿಗಳ ಭಯ ಇನ್ನೂ ಹೋಗಿಲ್ಲ. ಏಕೆಂದರೆ ತಾಲಿಬಾನಿ ಉಗ್ರರು ನಡೆಸಿರುವ ಕೃತ್ಯಗಳು ಅಷ್ಟು ಭಯಾನಕವಾಗಿವೆ. ಇಷ್ಟೆಲ್ಲದರ ನಡುವೆ ಮತ್ತೊಂದು ದೇಶ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಬಹುದಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಆದರೆ ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ.

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್‌ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.

English summary
China arranged a virtual meeting for peace talks between Afghanistan & Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X