ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಚೀನಾದ ಕೊರೊನಾ ಲಸಿಕೆಯ 3ನೇ ಹಂತದ ಪ್ರಯೋಗ

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 18: ಪಾಕಿಸ್ತಾನದ ಡ್ರಗ್ ರೆಗ್ಯುಲೇಟರಿ ಅಥಾರಿಟಿಯು ಕೊರೊನಾ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಸಿದ್ಧತೆ ನಡೆಸಿದೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ಚೀನಾ ಕಂಪನಿ ಜೊತೆ ಸೇರಿ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ಮಾಹಿತಿ ನೀಡಿದ್ದು, ಚೀನಾನ ಕ್ಯಾನ್‌ಸಿನೋ ಬಯೋ ಹಾಗೂ ಬೀಜಿಂಗ್‌ನ ಇನ್‌ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ಜೊತೆ ಸೇರಿ ಲಸಿಕೆ ಪ್ರಯೋಗ ನಡೆಸಲಾಗುತ್ತಿದೆ.

ಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹಲ್ತ್ ಇದುವರೆಗೂ ಪಾಕಿಸ್ತಾನದಲ್ಲಿ ಯಾವುದೇ ಕೊರೊನಾ ಲಸಿಕೆಯ ಪ್ರಯೋಗವನ್ನು ನಡೆಸಿರಲಿಲ್ಲ.ಕ್ಯಾನ್‌ಸಿನೋಬಯೋ ಚೀನಾ, ರಷ್ಯಾ, ಅರ್ಜೆಂಟೀನಾದಲ್ಲಿ ಪ್ರಯೋಗಗಳನ್ನು ನಡೆಸಿದೆ. ಶೀಘ್ರ ಸೌದಿ ಅರೇಬಿಯಾದಲ್ಲೂ ಪ್ರಯೋಗ ನಡೆಸಲು ಚಿಂತನೆ ನಡೆಸುತ್ತಿದೆ.

 China Will Conduct Phase-III Clinical Trial Of COVID-19 Vaccine In Pakistan

ಎಜೆಎಂ ಫಾರ್ಮಾ ಸಿಇಒ ಅಡ್ನಾನ್ ಹುಸೇನ್ ಎನ್‌ಐಎಚ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.Ad5-nCoV ಅಂತಿಮ ಹಂತದ ಪ್ರಯೋಗ ನಡೆಯಲಿದೆ.ಕರಾಚಿಯಲ್ಲಿ ಟ್ರಯಲ್ ನಡೆಯಲಿದೆ.ಕರಾಚಿಯಲ್ಲಿ 200 ಮಂದಿ ಪ್ರಯೋಗಕ್ಕೆ ಒಳಗಾಗಲು ಸಿದ್ಧರಿದ್ದಾರೆ. ಪ್ರಯೋಗ 56 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 200 ಮಂದಿಗೆ ಲಸಿಕೆಯ ಮೂರು ಡೋಸ್‌ಗಳನ್ನು ನೀಡಲಾಗುತ್ತದೆ.

ನ್ಯಾಷನಲ್ ಡಾಟಾ ಸೇಫ್ಟಿ ಮಾನಿಟರಿಂಗ್ ಕಮಿಟಿಯು ರೋಗಿಗಳ ಸುರಕ್ಷತೆಯ ಕಡೆಗೆ ಹೆಚ್ಚು ನಿಗಾ ಇರಿಸುತ್ತದೆ. ಪ್ರತಿ ತಿಂಗಳು ವರದಿಯನ್ನು ಸಿದ್ಧಪಡಿಸುತ್ತದೆ.ಸಾಕಷ್ಟು ದೇಶಗಳಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ.

ಇದರಿಂದ ಉತ್ತಮ ಫಲಿತಾಂಶ ಸಿಕ್ಕೇ ಸಿಗುತ್ತದೆ ಎಂದು ಭಾವಿಸಿಲ್ಲ, ಒಳ್ಳೆಯ ಫಲಿತಾಂಶ ಲಭ್ಯವಾದರೆ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂಟು ಡಿಆರ್‌ಎಪಿ ಅಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ 289,832 ಪ್ರಕರಣಗಳಿವೆ. 24 ಗಂಟೆಯಲ್ಲಿ 617 ಹೊಸ ಪ್ರಕರಣಗಳು ಪತ್ತೆಯಾಗಿವೆ.

English summary
The Drug Regulatory Authority of Pakistan (DRAP) has given a nod for phase-III clinical trial of a COVID-19 vaccine developed in collaboration with a Chinese company, a media report said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X