ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣ: ಭಾರತಕ್ಕೆ ಆತಂಕ

|
Google Oneindia Kannada News

ಬೀಜಿಂಗ್, ನವೆಂಬರ್ 30: ಗಡಿಯಲ್ಲಿ ಒಂದಿಲ್ಲೊಂದು ತಂಟೆ ಮಾಡುವ ಮೂಲಕ ಭಾರತದೊಂದಿಗೆ ಕಿರಿಕ್ ಮಾಡುತ್ತಿರುವ ಚೀನಾ, ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಿಸಲು ಉದ್ದೇಶಿಸಿದೆ. ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ಮುಂದಿರಿಸಲಾಗಿದ್ದು, ಮುಂದಿನ ವರ್ಷ ಅನುಷ್ಠಾನಕ್ಕೆ ಬರಲಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ.

ಯರ್ಲುಂಗ್ ಝಾಂಗ್ಬೊ ನದಿಯ (ಬ್ರಹ್ಮಪುತ್ರ ನದಿಗೆ ಟಿಬೆಟಿಯನ್ ಹೆಸರು) ಕೆಳಹರಿವಿನ ಪ್ರದೇಶವನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಚೀನಾ ತೀರ್ಮಾನಿಸಿದೆ ಎಂದು ಚೀನಾದ ವಿದ್ಯುತ್ ಯೋಜನೆ ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಯಾನ್ ಝಿಯಾಂಗ್ ಹೇಳಿದ್ದಾರೆ. ಈ ಯೋಜನೆಯು ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ಆಂತರಿಕ ಭದ್ರತೆಗೆ ನೆರವಾಗಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಭಾರತದಲ್ಲೇ ಕೊರೊನಾ ಸೋಂಕು ಹುಟ್ಟು, ಚೀನಾ ಗಂಭೀರ ಆರೋಪಭಾರತದಲ್ಲೇ ಕೊರೊನಾ ಸೋಂಕು ಹುಟ್ಟು, ಚೀನಾ ಗಂಭೀರ ಆರೋಪ

ದೇಶದ 14ನೇ ಪಂಚವಾರ್ಷಿಕ ಯೋಜನೆಯ (2021-2025) ಭಾಗವಾಗಿ ಮತ್ತು ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿಯು 2035ರವರೆಗೆ ರೂಪಿಸಿರುವ ದೀರ್ಘಾವಧಿ ಗುರಿಗಳ ಅಡಿಯಲ್ಲಿ ಈ ಪ್ರಸ್ತಾಪವನ್ನು ಸ್ಪಷ್ಟವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

China Will Build A Major Hydropower Project On Brahmaputra River In Tibet

ಇತಿಹಾಸದಲ್ಲಿ ಇದಕ್ಕೆ ಸಮಾನಾಂತರವಾದದ್ದು ಯಾವುದೂ ಇಲ್ಲ. ಜಲವಿದ್ಯುತ್ ಕೈಗಾರಿಕೆಯಲ್ಲಿ ಚೀನಾಕ್ಕೆ ಇದು ಐತಿಹಾಸಿಕ ಅವಕಾಶ ಎಂದು ಹೈಡ್ರೋಪವರ್ ಎಂಜಿನಿಯರಿಂಗ್‌ನ ಚೀನಾ ಸೊಸೈಟಿ ಸ್ಥಾಪನೆಯ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಯಾನ್ ಝಿಯಾಂಗ್ ಹೇಳಿದ್ದಾರೆ.

ಚೀನಾವು ಬ್ರಹ್ಮಪುತ್ರ ನದಿಗೆ ನಿರ್ಮಿಸುವ ಅಣೆಕಟ್ಟುಗಳು ಭಾರತ ಮತ್ತು ಬಾಂಗ್ಲಾದೇಶಕ್ಕೆ ಕಳವಳ ಮೂಡಿಸಿದೆ. ಬಾಂಗ್ಲಾದೇಶದ ಅನೇಕ ನದಿ ತೀರದ ರಾಜ್ಯಗಳಿಗೆ ಇದು ಅಪಾಯವುಂಟುಮಾಡುವ ಸಾಧ್ಯತೆ ಇದೆ. ಆದರೆ ನೆರೆಯ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಯೋಜನೆ ರೂಪಿಸುತ್ತಿರುವುದಾಗಿ ಹೇಳಿರುವ ಚೀನಾ, ಈ ಬಗ್ಗೆ ಆತಂಕ ಬೇಡ ಎಂದಿದೆ.

ಆಪ್‌ ನಿಷೇಧ WTO ನಿಯಮಗಳ ಉಲ್ಲಂಘನೆ: ಭಾರತದ ಮೇಲೆ ಹರಿಹಾಯ್ದ ಚೀನಾಆಪ್‌ ನಿಷೇಧ WTO ನಿಯಮಗಳ ಉಲ್ಲಂಘನೆ: ಭಾರತದ ಮೇಲೆ ಹರಿಹಾಯ್ದ ಚೀನಾ

ಭಾರತವು ತನ್ನ ಕೆಳಭಾಗದ ನದಿ ತೀರದ ರಾಜ್ಯಗಳಲ್ಲಿನ ಹಿತಾಸಕ್ತಿ ಕಾಪಾಡುವಂತೆ ಚೀನಾದ ಅಧಿಕಾರಿಗಳಿಗೆ ನಿರಂತರವಾಗಿ ಮನವರಿಕೆ ಮಾಡುತ್ತಾ ಬಂದಿದೆ. ಚೀನಾ ಈಗಾಗಲೇ ಟಬೆಟ್‌ನ ಅತಿ ದೊಡ್ಡ ಝ್ಯಾಮ್ ಹೈಡ್ರೋಪವರ್ ಸ್ಟೇಷನ್‌ನನ್ನು 1.5 ಬಿಲಿಯನ್ ಡಾಲರ್‌ ವೆಚ್ಚದಲ್ಲಿ 2015ರಿಂದ ಕಾರ್ಯಾಚರಣೆ ಮಾಡುತ್ತಿದೆ. ಇದಲ್ಲದೆ ಮೆಡೋಕ್ ಕೌಂಟಿಯಲ್ಲಿ ಚೀನಾ ಸೂಪರ್ ಹೈಡ್ರೋಪವರ್ ಸ್ಟೇಷನ್ ನಿರ್ಮಾಣ ಮಾಡಲು ಉದ್ದೇಶಿಸಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಟಿಬೆಟ್‌ನ ಗಡಿಯಲ್ಲಿರುವ ಮೆಡೋಕ್ ಕೌಂಟಿ ಅರುಣಾಚಲ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದೆ.

English summary
China as a part of its 14th five year plan to build a major hydropower project on Brahmaputra river in Tibet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X