• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ರಫೇಲ್ ಯುದ್ಧವಿಮಾನ ಎದುರಿಸಲು ಪಾಕ್‌ಗೆ ನೆರವಾದ ಚೀನಾ

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 30: ಜುಲೈ 29ರಂದು 5 ರಫೇಲ್ ಯುದ್ದವಿಮಾನಗಳು ಭಾರತದಲ್ಲಿ ಬಂದಿಳಿದಿದೆ. ಈ ವಿಮಾನಗಳು ವಿಶ್ವದ ಅತ್ಯಂತ ಪ್ರಬಲ ಯುದ್ಧವಿಮಾನಗಳ ಸಾಲಿಗೆ ಸೇರುತ್ತದೆ. ಭಾರತದ ರಫೇಲ್ ವಿಮಾನ ಖರೀದಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು ಚೀನಾದ 25 ಜೆ-10ಸಿ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಬುಧವಾರ ಹೇಳಿದ್ದಾರೆ. ಮುಂದಿನ ವರ್ಷ ಮಾರ್ಚ್ 23 ರಂದು ನಡೆಯಲಿರುವ ಪಾಕಿಸ್ತಾನ ದಿನದ ಸಮಾರಂಭದಲ್ಲಿ J-10C ಒಳಗೊಂಡಿರುವ 25 ಆಲ್-ವೆದರ್ ವಿಮಾನಗಳು ಕಾರ್ಯಾರಂಭಗೊಳ್ಳಲಿವೆ ಎಂದು ಸಚಿವರು ತಮ್ಮ ತವರು ನಗರವಾದ ರಾವಲ್ಪಿಂಡಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತದಲ್ಲಿ ಪ್ರಬಲ ಕ್ಷಿಪಣಿಗಳಿವೆಯಾದರೂ ಶಕ್ತಿಶಾಲಿ ಯುದ್ಧವಿಮಾನಗಳ ಕೊರತೆಯನ್ನು ರಫೇಲ್ ವಿಮಾನ ನೀಗಿಸಿದೆ. ಭಾರತದಲ್ಲಿ ಸುಖೋಯ್, ಮಿಗ್ ಫೈಟರ್ ಜೆಟ್​ಗಳಂಥ ಪ್ರಬಲ ಯುದ್ಧವಿಮಾನಗಳಿವೆಯಾದರೂ ಚೀನಾದ ಜೆ-20, ಅಮೆರಿಕದ ಎಫ್16ನಂಥ ಫೈಟರ್ ಜೆಟ್​ಗಳಿಗೆ ಸಾಟಿಯಾಗಬಲ್ಲಂಥದ್ದು ಭಾರತದಲ್ಲಿರುವ ರಫೇಲ್ ವಿಮಾನ. ಆದರೀಗ ಚೀನಾ ಮತ್ತೆ ತನ್ನ ನರಿ ಬುದ್ಧಿಯನ್ನು ತೋರಿಸಿದೆ.

ಸ್ಪಷ್ಟವಾಗಿ ಹೇಳುವುದಾದರೆ ಚೀನಾ ತನ್ನ ಅತ್ಯಂತ ವಿಶ್ವಾಸಾರ್ಹ ಫೈಟರ್ ಜೆಟ್‌ಗಳಲ್ಲಿ ಒಂದಾದ J-10C ಅನ್ನು ಒದಗಿಸುವ ಮೂಲಕ ತನ್ನ ಹತ್ತಿರದ ಮಿತ್ರನ ರಕ್ಷಣೆಗೆ ಬಂದಿದೆ. ಮಾಧ್ಯಮ ಸಹೋದ್ಯೋಗಿಗಳಿಗೆ ತಮಾಷೆ ಮಾಡಲು ಸ್ವತಃ 'ಉರ್ದು-ಮಾಧ್ಯಮ ಸಂಸ್ಥೆಗಳ ಪದವೀಧರ' ಎಂದು ಬಣ್ಣಿಸುವ ಸಚಿವ ಶೇಖ್ ರಶೀದ್ ಅಹ್ಮದ್, ವಿಮಾನದ ಹೆಸರನ್ನು ಜೆ-10 ಸಿ ಬದಲಿಗೆ ಜೆಎಸ್ -10 ಎಂದು ತಪ್ಪಾಗಿ ಉಚ್ಚರಿಸಿದ್ದಾರೆ.

"ವಿಐಪಿ ಅತಿಥಿಗಳು ಪಾಕಿಸ್ತಾನದಲ್ಲಿ ಮೊದಲ ಬಾರಿಗೆ (ಮಾರ್ಚ್ 23 ರಂದು ಸಮಾರಂಭದಲ್ಲಿ ಪಾಲ್ಗೊಳ್ಳಲು) ಬರುತ್ತಿದ್ದಾರೆ. ಈ ವೇಳೆ JS-10 (J-10C) ನ ಫ್ಲೈ-ಪಾಸ್ಟ್ ಸಮಾರಂಭವನ್ನು ನಡೆಸಲಾಗುತ್ತಿದೆ. JS-10 (J-10C) ವಿಮಾನವು ರಫೇಲ್‌ಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ವಾಯುಪಡೆಯು ಬಳಕೆ ಮಾಡಲಿದೆ. ಚೀನಾ ಫ್ಲೈ-ಪಾಸ್ಟ್ ಅನ್ನು ನಿರ್ವಹಿಸಲಿದೆ" ಎಂದು ಅಹ್ಮದ್ ಹೇಳಿದ್ದಾರೆ.

J-10C ವಿಮಾನವು ಕಳೆದ ವರ್ಷ ಪಾಕ್-ಚೀನಾ ಜಂಟಿ ಅಭ್ಯಾಸದ ಭಾಗವಾಗಿತ್ತು, ಅಲ್ಲಿ ಪಾಕಿಸ್ತಾನದ ತಜ್ಞರು ಯುದ್ಧ ವಿಮಾನಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಹೊಂದಿದ್ದರು. ಜಂಟಿ ಸಮರಾಭ್ಯಾಸವು ಡಿಸೆಂಬರ್ 7 ರಂದು ಪಾಕಿಸ್ತಾನದಲ್ಲಿ ಪ್ರಾರಂಭವಾಯಿತು ಮತ್ತು ಸುಮಾರು 20 ದಿನಗಳವರೆಗೆ ನಡೆಯಿತು. ಚೀನಾ J-10C, J-11B ಜೆಟ್‌ಗಳು, KJ-500 ಮುಂಚಿನ ಎಚ್ಚರಿಕೆಯ ವಿಮಾನಗಳಾಗಿವೆ.

ಪಾಕಿಸ್ತಾನವು US-ನಿರ್ಮಿತ F-16 ಗಳ ಫ್ಲೀಟ್ ಅನ್ನು ಮಾತ್ರ ಹೊಂದಿತ್ತು. ಆದರೆ ಭಾರತವು ಫ್ರಾನ್ಸ್‌ನಿಂದ ರಫೇಲ್ ಜೆಟ್‌ಗಳನ್ನು ಖರೀದಿಸಿದ ನಂತರ ಅದರ ರಕ್ಷಣೆಯನ್ನು ಹೆಚ್ಚಿಸಲು ಹೊಸ ಮಲ್ಟಿರೋಲ್ ಆಲ್-ವೆದರ್ ಜೆಟ್ ಅನ್ನು ಹುಡುಕುತ್ತಿದೆ. ಸುಮಾರು ಐದು ವರ್ಷಗಳ ಹಿಂದೆ, ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು 36 ರಫೇಲ್ ಜೆಟ್‌ಗಳನ್ನು ಖರೀದಿಸಲು ಭಾರತವು ಫ್ರಾನ್ಸ್‌ನೊಂದಿಗೆ ಅಂತರ-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿತು.

ಭಾರತ ಮತ್ತು ಚೀನಾ ಮಧ್ಯೆ ಗಡಿಸಮಸ್ಯೆ ಸೂಕ್ಷ್ಮವಾಗಿರುವುದರಿಂದ ಯಾವಾಗ ಬೇಕಾದರೂ ವೈಮಾನಿಕ ಘರ್ಷಣೆ ಆಗುವ ಸಂಭವ ಇದ್ದೇ ಇದೆ. ಹಾಗೆಯೇ, ಭಾರತ ಮತ್ತು ಪಾಕಿಸ್ತಾನದ ಮಧ್ಯೆಯೂ ಘರ್ಷಣೆಯ ಸಂಭವನೀಯತೆ ಗಟ್ಟಿಯಾಗಿಯೇ ಇದೆ. ಹಾಗೇನಾದರೂ ಆದರೆ, ಆಗಸದಲ್ಲಿ ಕಣಕ್ಕಿಳಿಯುವುದು ರಫೇಲ್, ಜೆಎಫ್-17 ಮತ್ತು ಜೆ-20 ಯುದ್ಧ ವಿಮಾನಗಳೇ. ಪಾಕ್ ಬಳಿ ಎಫ್-16 ಇದೆಯಾದರೂ ಅದರ ಬಳಕೆ ಕೇವಲ ಭಯೋತ್ಪಾದನೆ ನಿಗ್ರಹಕ್ಕೆ ಎಂಬ ಷರತ್ತಿನ ಮೇಲೆ ಅಮೆರಿಕದಿಂದ ಸರಬರಾಜು ಆಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಎಫ್-16 ಬಳಕೆ ಮಾಡುವುದು ಅನುಮಾನ. ಈ ಹಿನ್ನೆಲೆಯಲ್ಲಿ ರಫೇಲ್, ಜೆಫ್-17 ಮತ್ತು ಜೆ-20 ಯುದ್ಧವಿಮಾನಗಳೇ ವಾಸ್ತವದಲ್ಲಿ ರಣರಂಗಕ್ಕೆ ಅಡಿ ಇಡುವ ಸಾಧ್ಯತೆ ಇತ್ತು. ಆದರೀಗ ಚೀನಾ ತನ್ನ ಅತ್ಯಂತ ವಿಶ್ವಾಸಾರ್ಹ ಫೈಟರ್ ಜೆಟ್‌ಗಳಲ್ಲಿ ಒಂದಾದ J-10C ಅನ್ನು ಒದಗಿಸುವ ಮೂಲಕ ತನ್ನ ಹತ್ತಿರದ ಮಿತ್ರನ ರಕ್ಷಣೆಗೆ ಬಂದಿದೆ.

English summary
On July 29, five Rafale warplanes landed in India. These planes join the world's most powerful fighter jets. Pakistan acquires 25 J-10C warplanes in response to India's Rafale flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X