• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮಿಂದ ರಿವೇಂಜ್ ಗ್ಯಾರಂಟಿ, ಅಮೆರಿಕಗೆ ಚೀನಾ ವಾರ್ನಿಂಗ್

|

ತೈವಾನ್ ವಿಚಾರವಾಗಿ ಚೀನಾ ಹಾಗೂ ಅಮೆರಿಕ ನಡುವಿನ ಕಿತ್ತಾಟ ತಾರಕಕ್ಕೇರಿದ್ದು, ಇತ್ತೀಚಿಗೆ ಅಮೆರಿಕದ ರಕ್ಷಣಾ ಕ್ಷೇತ್ರದ ಕಂಪನಿಗಳು ಕೈಗೊಂಡ ನಿರ್ಧಾರದ ಬಗ್ಗೆ ಚೀನಾ ವಾರ್ನಿಂಗ್ ಕೊಟ್ಟಿದೆ. ಬರೋಬ್ಬರಿ 1.9 ಬಿಲಿಯನ್ ಡಾಲರ್‌ ಅಂದರೆ ಸುಮಾರು 14 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಒಪ್ಪಂದದ ಪ್ರಕಾರ ತೈವಾನ್‌ಗೆ ಅಮೆರಿಕ ಶಸ್ತ್ರಾಸ್ತ್ರ ಪೂರೈಸಲಿದೆ. ಅತ್ಯಾಧುನಿಕ ಮಿಸೈಲ್‌, ಆರ್ಟಿಲರಿ ಸೇರಿದಂತೆ ಫೈಟರ್‌ ಜೆಟ್‌ಗಳ ಸೆನ್ಸಾರ್‌ ಖರೀದಿಗೆ ತೈವಾನ್ ಮುಂದಾಗಿದೆ. ಆದರೆ ತೈವಾನ್ ತನ್ನ ಜಾಗ ಅಂತಾ ಮೊಂಡು ವಾದ ಮಾಡುತ್ತಿರುವ ಚೀನಾ, ಅಮೆರಿಕದ ನಿರ್ಧಾರಕ್ಕೆ ಕೆಂಡಕಾರಿತ್ತು.

ಚೀನಿಗಳ ವಾರ್ನಿಂಗ್‌ಗೆ ಕೇರ್ ಮಾಡದೆ ಅಮೆರಿಕ ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡಲು ಅನುಮತಿ ನೀಡಿತ್ತು. ಹೀಗಾಗಿಯೇ ಚೀನಾ ರೊಚ್ಚಿಗೆದ್ದು, ಲಾಕ್‌ಹೀಡ್ ಮಾರ್ಟಿನ್ ಹಾಗೂ ಬೋಯಿಂಗ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಈಗಾಗಲೇ ಅಮೆರಿಕ ಮತ್ತು ಚೀನಿ ಸಂಬಂಧ ಹದಗೆಟ್ಟಿದ್ದು, ತೈವಾನ್ ಜೊತೆಗಿನ ಶಸ್ತ್ರಾಸ್ತ್ರ ಒಪ್ಪಂದ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಪ್ರತಿಷ್ಠಿತ ವೆಪನ್ ಡೀಲರ್ ಕಂಪನಿಗಳ ವಿರುದ್ಧವೇ ರಿವೇಂಜ್‌ಗೆ ಚೀನಾ ಮುಂದಾಗಿದೆ. ಆದರೆ ಚೀನಾದ ಈ ಗೊಡ್ಡು ಬೆದರಿಕೆಗೆ ಅಮೆರಿಕ ಉತ್ತರಿಸಿಲ್ಲ.

ತೈವಾನ್ ಮಿಲಿಟರಿಗೆ ಡೈನೋಸಾರ್ ಬಲ..!

ತೈವಾನ್ ಮಿಲಿಟರಿಗೆ ಡೈನೋಸಾರ್ ಬಲ..!

ಯೆಸ್, ತೈವಾನ್ ಭೂಭಾಗ ನನಗೇ ಸೇರಿದ್ದು ಅಂತಾ ಚೀನಾ ಹಠ ಮಾಡುತ್ತಿದೆ. ಈ ಹಠ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅತ್ತ ಹಾಂಕಾಂಗ್ ಆಂತರಿಕ ವಿಚಾರದಲ್ಲಿ ತಲೆಹಾಕಿ, ಅಲ್ಲಿ ನೆಮ್ಮದಿ ಕೆಡಿಸಿರುವ ಚೀನಾ ತೈವಾನ್ ಮೇಲೂ ಕಣ್ಣಿಟ್ಟಿದೆ. ಆದರೆ ತೈವಾನ್ ಹಾಂಕಾಂಗ್ ರಾಜಕಾರಣಿಗಳಂತೆ ಚೀನಾಗೆ ಎದುರು ಬಾಲ ಅಲ್ಲಾಡಿಸುತ್ತಲ್ಲ. ಬದಲಾಗಿ ಸೆಡ್ಡುಹೊಡೆದು ನಿಂತಿದ್ದು, ನಮ್ಮ ತಂಟೆಗೆ ಬಂದರೆ ಹುಷಾರ್ ಎಂಬ ಸಂದೇಶವನ್ನ ರವಾನಿಸುತ್ತಿದೆ. ಈ ಹಿಂದೆ ಚೀನಾ ತೈವಾನ್‌ ಗಡಿಗೆ ತನ್ನ ಯುದ್ಧ ವಿಮಾನಗಳನ್ನು ನುಗ್ಗಿಸಿದ್ದಾಗ ವಾರ್ನಿಂಗ್ ಕೊಟ್ಟಿತ್ತು. ನಾವು ತಿರುಗೇಟು ನೀಡುವಷ್ಟು ಶಕ್ತವಾಗಿದ್ದೀವಿ ಎಂದು ನೇರಾನೇರ ಎಚ್ಚರಿಕೆ ನೀಡಿತ್ತು.

ತೈವಾನ್ ಮಿಲಿಟರಿಗೆ ಡೈನೋಸಾರ್ ಬಲ, ಚೀನಾಗೆ ಮರ್ಮಾಘಾತ

ಭಾರತದ ಜೊತೆಗೂ ವ್ಯಾಪಾರ ವೃದ್ಧಿ

ಭಾರತದ ಜೊತೆಗೂ ವ್ಯಾಪಾರ ವೃದ್ಧಿ

ಭಾರತ ಹಾಗೂ ತೈವಾನ್ ನಡುವಿನ ವ್ಯಾಪಾರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ. 2019ರಲ್ಲಿ ಭಾರತ ಹಾಗೂ ತೈವಾನ್ ನಡುವಿನ ವ್ಯಾಪಾರ 7.2 ಶತಕೋಟಿ ಡಾಲರ್‌ಗೆ ತಲುಪಿತ್ತು. ಈ ಮೂಲಕ ದಿಢೀರ್ ಶೇ. 18ರಷ್ಟು ವ್ಯಾಪಾರ ವೃದ್ಧಿ ಕಂಡಿತ್ತು. ಇದು ಸ್ಯಾಂಪಲ್ ಮಾತ್ರ, ಈಗ ಭಾರತ ತೈವಾನ್ ಜೊತೆಗೆ ಬಹುದೊಡ್ಡ ಮೊತ್ತದ ಒಪ್ಪಂದಕ್ಕೆ ಮುಂದಾಗಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್‌ ಮೂಲದ ಕಂಪನಿಗಳಿಗೆ ಭಾರತದಿಂದ ದೊಡ್ಡ ಗಿಫ್ಟ್ ಸಿಕ್ಕಿತ್ತು. ಫಾಕ್ಸ್‌ಕಾನ್‌ ಕಂಪನಿಗೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿತ್ತು, ಈ ಮೂಲಕ ಭಾರತದ ಸ್ಮಾರ್ಟ್‌ಫೋನ್ ತಯಾರಿಕಾ ವಲಯಕ್ಕೆ 143 ಬಿಲಿಯನ್ ಡಾಲರ್ ಬಂಡವಾಳ ಹರಿಸಲು ಸಹಾಯವಾಗಿದೆ. ಈ ಒಪ್ಪಂದ ನಡೆದು ಕೆಲವು ದಿನಗಳು ಕಳೆಯುವ ಒಳಗಾಗಿ ಭಾರತ ತೈವಾನ್‌ಗೆ ಮತ್ತೊಂದು ಬಿಗ್ ಆಫರ್ ಕೊಡಲು ಮುಂದಾಗಿದೆ.

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಚೀನಾ ಹಾಗೂ ತೈವಾನ್ ಸಂಘರ್ಷ ಕೆಲ ತಿಂಗಳಿಂದ ಉಗ್ರ ಸ್ವರೂಪ ಪಡೆಯುತ್ತಿದೆ. ಚೀನಾ ಪದೇ ಪದೆ ತೈವಾನ್ ವಿಚಾರ ಕೆದಕುವಾಗಲೇ, ಜುಲೈನಲ್ಲಿ ತೈವಾನ್ ಮಿಲಿಟರಿ ದಿಟ್ಟತನ ಪ್ರದರ್ಶಿಸಿತ್ತು. ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆ ಸಮರಾಭ್ಯಾಸ ನಡೆಸಿತ್ತು. ಸಮರಾಭ್ಯಾಸದ ವೇಳೆ ತೈವಾನ್‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಇದು ತೈವಾನ್ ಸೇನೆಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು.

ತೈವಾನ್-ಭಾರತ ಭಾಯಿ ಭಾಯಿ, ಚೀನಿ ಗ್ಯಾಂಗ್‌ಗೆ ಬಿಗ್ ಶಾಕ್

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ತೈವಾನ್ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ನಿಂತಿದೆ.

 ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆಯನ್ನ ಹೊರದಬ್ಬಿತ್ತು. ತನ್ನ ಬೆಂಬಲಿಗರ ಜೊತೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನ. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ ‘ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಮತ್ತು ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು.

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ನ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಸಾಮ್ರಾಜ್ಯಶಾಹಿ ಚೀನಾ ಕೈಕೆಳಗೆ ನರಳಿ ಬದುಕಬೇಕಾಗಿತ್ತು. ಆದರೆ ತೈವಾನ್‌ನ ‘ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಸಂಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು. 1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದು ಬೀಗಿದರು. ಈ ಮೂಲಕ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದ್ದವರು ಲೀ. ಆದರೆ 97 ವರ್ಷದ ಲೀ ಜುಲೈ 30ರಂದು ನಿಧನರಾಗಿದ್ದರು. ಬಳಿಕ ಚೀನಾ ಸರ್ಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್' ಲೀ ಸಾವಿನ ಬಗ್ಗೆ ಅಹಿತಕರ ವರದಿ ಪ್ರಕಟಿಸಿತ್ತು. ಈಗ ಮತ್ತೆ ಚೀನಾ ಕ್ಯಾತೆ ತೆಗೆದಿರೋದು ಅಮೆರಿಕ ಸೇರಿದಂತೆ ಚೀನಾದ ಶತ್ರು ರಾಷ್ಟ್ರಗಳನ್ನ ಕೆರಳಿಸಿದೆ.

English summary
China once again upset over US arms sales to Taiwan. China has also warned of taking action against US companies supplying arms to Taiwan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X