ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್-ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ನೀಡಿದ ಚೀನಾ

|
Google Oneindia Kannada News

ಬೀಜಿಂಗ್, ನವೆಂಬರ್ 19: ಆಸ್ಟ್ರೇಲಿಯಾ ಮತ್ತು ಜಪಾನ್ ನಡುವೆ ನಡೆದ ಐತಿಹಾಸಿಕ ರಕ್ಷಣಾ ಒಪ್ಪಂದದ ವಿರುದ್ಧ ಚೀನಾ ಕಿಡಿಕಾರಿದೆ. ಇದಕ್ಕೆ ಪ್ರತ್ಯುತ್ತರವಾಗಿ ತಾನು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಹೇಳಿದೆ.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಜಪಾನ್ ಭೇಟಿಯ ಸಂದರ್ಭದಲ್ಲಿ ಪರಸ್ಪರ ಪ್ರವೇಶ ಒಪ್ಪಂದ ಎಂಬ ಹೆಸರಿನ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಆದರೆ ಇದಕ್ಕೆ ಔಪಚಾರಿಕ ಸಹಿ ಹಾಕಿಲ್ಲ. ಈ ಒಪ್ಪಂದವು ಆಸ್ಟ್ರೇಲಿಯಾ ಮತ್ತು ಜಪಾನ್ ಸೇನಾಪಡೆಗಳು ಪರಸ್ಪರ ಇನ್ನೊಬ್ಬರ ನೆಲೆಗಳಲ್ಲಿ ಪ್ರವೇಶಾವಕಾಶ ಪಡೆಯಲಿವೆ ಮತ್ತು ಉಭಯ ದೇಶಗಳ ನಡುವೆ ಸಹಕಾರವನ್ನು ವೃದ್ಧಿಸಲಿವೆ.

12ನೇ ಬ್ರಿಕ್ಸ್ ಸಮ್ಮೇಳನದ ಒಂದೇ ವೇದಿಕೆಯಲ್ಲಿ ಮೋದಿ-ಜಿನ್ ಪಿಂಗ್12ನೇ ಬ್ರಿಕ್ಸ್ ಸಮ್ಮೇಳನದ ಒಂದೇ ವೇದಿಕೆಯಲ್ಲಿ ಮೋದಿ-ಜಿನ್ ಪಿಂಗ್

ಈ ಒಪ್ಪಂದದ ಬಗ್ಗೆ ಚೀನಾ ಸರ್ಕಾರ ನೇರ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅದಕ್ಕೆ ತನ್ನ ಸ್ವಾಮ್ಯದ ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದನ್ನು ಬಳಸಿಕೊಂಡಿದೆ. 'ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ತಮ್ಮ ಅತಿ ದೊಡ್ಡ ವ್ಯಾಪಾರ ಪಾಲುದಾರನಾದ ಚೀನಾವನ್ನು ಅಮೆರಿಕದ ಅಣತಿಯಂತೆ ತಮ್ಮ ಭದ್ರತಾ ಬೆದರಿಕೆ ಎಂದು ವ್ಯಾಖ್ಯಾನಿಸುವ ಮೂಲಕ ಕೆಟ್ಟ ಉದಾಹರಣೆ ಸೃಷ್ಟಿಸುತ್ತಿವೆ' ಎಂದು ಅದು ಹೇಳಿದೆ.

 China Warns Australia And Japan Over Defence Deal

ಚೀನೀ ಭಾಷೆ ಮತ್ತು ಇಂಗ್ಲಿಷ್ ಎರಡರಲ್ಲಿಯೂ ಸ್ಥಳೀಯ ಹಾಗೂ ವಿದೇಶಿ ಓದುಗರಿಗಾಗಿ ಸಂಪಾದಕೀಯವನ್ನು ಪ್ರಕಟಿಸಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆ, ಜಪಾನ್ ಮತ್ತು ಆಸ್ಟ್ರೇಲಿಯಾಗಳು ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದು ಟೀಕಿಸಿದೆ.

'ಜಪಾನ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಅಮೆರಿಕದ ಸಾಧನಗಳಾಗಿ ಬಳಕೆಯಾಗುತ್ತಿವೆ. ದೀರ್ಘಾವಧಿಯಿಂದ ಚೀನಾ ವಿರುದ್ಧ ಇತರೆ ದೇಶಗಳನ್ನು ಎತ್ತಿಕಟ್ಟಲು ಪ್ರಚೋದಿಸುತ್ತಿರುವ ಅಮೆರಿಕದ ನಡೆಯ ಬಗ್ಗೆ ಚೀನಾ ಉದಾಸೀನವಾಗಿ ಇರುವುದಿಲ್ಲ' ಎಂದು ಎಚ್ಚರಿಕೆ ನೀಡಿದೆ.

English summary
China has warned Japan and Australia over their new defence pact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X